ನಂದಿನಿ ಮೈಸೂರು
ಕೂಲ್ ವಾಟ್ ಎಂಬ ಡಿಎಸ್ ಆರ್ ಈವಿ ಮೊಬೆಲಿಟಿಯ ದ್ವಿಚಕ್ರ ಮತ್ತು ತ್ರಿಚಕ್ರ ಮಾದರಿಯ ವಾಹನಗಳ ನೂತನ ಶೋರೂಂ ಸಾಂಸ್ಕೃತಿಕ ನಗರಿಯಲ್ಲಿ ಆರಂಭವಾಗಿದೆ.
ಮೈಸೂರಿನ ರಾಜರಾಜೇಶ್ವರಿ ನಗರದ ರಿಂಗ್ ರಸ್ತೆಯಲ್ಲಿ ಆರಂಭವಾಗಿರುವ ಶೋರೂಂ ಗೆ ಡಿ ಎಸ್ ಆರ್ ಗ್ರೂಪ್ ನ ಛೇರ್ಮನ್ ಪ್ರಭಾಕರ್ ರಾವ್, ಡಿ ಎಸ್ ಆರ್ ಗ್ರೂಪ್ ನ ಧನಶೇಖರ್, ರಾಕೇಶ್ ಶರ್ಮ, ಜಯಸೂರ್ಯ, ಅದಿನಾರಾಯಣ್, ಕೃಷ್ಣಮೂರ್ತಿ, ಹಲವಾರು ಗಣ್ಯರು, ನಟರು ಟೇಪ್ ಕತ್ತರಿಸಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಚಿತ್ರ ನಟ ಅಭಿಲಾಷ್ ರವರು
ಕೂಲ್ ವಾಟ್ ಡಿಎಸ್ ಆರ್ ಈವಿ ಮೊಬೆಲಿಟಿಯ ಅಂಬಾಸಡರ್ ಆಗಿದ್ದಾರೆ. ಅದಲ್ಲದೇ ನಟ ಅಜಯ್ ಕಾರ್ತಿಕ್ ಹಾಗೂ ನಕುಲ್ ಶೋರೂಂ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿ ಮತ್ತಷ್ಟು ಮೆರಗು ನೀಡಿದರು.
ಕಾಲ ಬದಲಾಗುತ್ತಿರುತ್ತದೆ ಕಾಲಕ್ಕೆ ತಕ್ಕಂತೆ ವಾಹನಗಳು ಬದಲಾಗುತ್ತದೆ.
ವಾಯುಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ವಿಶಿಷ್ಠ ವಿನೂತನವಾಗಿ ವಾಹನಗಳು ತಯಾರಾಗಿದೆ.
ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ವಾಹನಗಳು ಲಭ್ಯವಿದೆ ಎಂದು
ಕೂಲ್ ವಾಟ್ ಸಂಸ್ಥೆ ಸಂಸ್ಥಾಪಕರಾದ ಸಂಜಯ್ ಕುಮಾರ್ ಹಾಗೂ ದಿವ್ಯ ದಂಪತಿಗಳು ಹೊಸ ವಿನ್ಯಾಸದ ವಾಹನಗಳ ಬಗ್ಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಮನೋಜ್ ವಿಶ್ವನಾಥ್, ಕೌಶಿಕ್ ಮುಂದೋಡಿ, ದಿನೇಶ್ ಹಾಗೂ ಸಂಬಂಧಿಕರು ಸ್ನೇಹಿತರು ಭಾಗಿ ಯಾಗಿ ಕೂಲ್ ವಾಟ್ ತಂಡಕ್ಕೆ ಶುಭ ಕೋರಿದರು.