ನಂದಿನಿ ಮೈಸೂರು
ಕಾರ್ತಿಕ ಮಾಸದ ಹಿನ್ನಲೆ ವಿವಿಧ ದೇವಾಲಯಗಳಲ್ಲಿ ದೀಪೋತ್ಸವ ಕಾರ್ಯಕ್ರಮ ಜರುಗುತ್ತದೆ.ಅಂತೆಯೇ ಶಂಕರ ಮಠದ ದೀಪೋತ್ಸವ ಎಲ್ಲರ ಕಣ್ಮನ ಸೆಳೆಯಿತು.
ಮೈಸೂರಿನ ಅಗ್ರಹಾರದಲ್ಲಿರುವ ಶಂಕರ ಮಠದಲ್ಲಿ ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಭಕ್ತ ವೃಂದದಿಂದ ದೀಪೋತ್ಸವ ಕಾರ್ಯಕ್ರಮ ನಡೆಯಿತು.ಮಣ್ಣಿನ ದೀಪಕ್ಕೆ ಎಣ್ಣೆ ಹಾಕಿ ದೇವಾಲಯದ ಆವರಣದಲ್ಲಿ ಸಾಲಾಗಿ ಜೋಡಿಸಿ ವಿವಿಧ ಪುಷ್ಪಗಳಿಂದ ಅಲಂಕರಿಸಿದ ಹೆಂಗಳೆಯರು,ಯುವತಿಯರು,ಮಕ್ಕಳು ದೀಪ ಹಚ್ಚಿ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥಿಸಿದರು.
ಇದೇ ಸಂದರ್ಭದಲ್ಲಿ ದೇವಾಲಯದ ಅರ್ಚಕರು ಮಾತನಾಡಿ ವರ್ಷದಲ್ಲಿ ಬರುವ ಕಾರ್ತಿಕ ಮಾಸ ವಿಶೇಷವಾಗಿರುತ್ತದೆ.ಶಿವನನ್ನ ಹೆಚ್ಚಾಗಿ ಆರಾಧಿಸಲಾಗುತ್ತದೆ.ಅಗ್ರಹಾರದ ಶಂಕರ ಮಠದಲ್ಲಿ 25 ಜನರಿರುವ ಭಕ್ತ ವೃಂದ ಕಾರ್ತಿಕ ಮಾಸದಲ್ಲಿ ದೀಪೋತ್ಸವ ಕಾರ್ಯಕ್ರಮ ಏರ್ಪಡಿಸಿಕೊಂಡು ಬರುತ್ತಿದ್ದೇವೆ.ಪ್ರತಿ ವರ್ಷ ವಿಶೇಷವಾಗಿ ದೀಪೋತ್ಸವ ಮಾಡಲಾಗುತ್ತದೆ.
ಇದೇ ಬುಧವಾರ 23 ರಂದು ಶಾರದ ದೇವಿಗೆ ವಿಶೇಷ ಪೂಜೆ ದೀಪೋತ್ಸವ ಜರುಗಲಿದೆ ಭಕ್ತಾಧಿಗಳು ಹೆಚ್ಚನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ಆಹ್ವಾನಿಸಿದರು.
ಎಲ್ಲಾ ದೀಪ ಹಚ್ಚಿದ ನಂತರ ದೇವಾಲಯ ಆವರಣ ಬೆಳಕಿನಿಂದ ಜಗಮಗಿಸುತ್ತಿದ್ದ ದೃಶ್ಯ ಕಂಡುಬಂದಿತು.