ನಂದಿನಿ ಮೈಸೂರು
ಮೈಸೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿದ್ಯಾವರ್ಧಕ ತಾಂತ್ರಿಕ ಮಹಾವಿದ್ಯಾಲಯವು ಇಂದಿನಿಂದ 5 ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅದರ ಉದ್ಘಾಟನಾ ಸಮಾರಂಭವಾಗಿ ಇಂದು ನಾಡಿನ ಪದ್ಮಶ್ರೀ ಪುರಸ್ಕೃತರಾದ ವೃಕ್ಷಮಾತೆ ತುಳಸಿ ಗೌಡ ಹಾಗೂ ವಿದುಷಿ ಕೆ ಎಸ್ ಜಯಲಕ್ಷ್ಮಿ ಯವರಿಗೆ ಹಾಗೂ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡಿರುವ ಗಣ್ಯರಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಬಿ ಸದಾಶಿವೇಗೌಡ ಮಾತನಾಡಿ, “ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜು ತನ್ನ ಬೆಳ್ಳಿ ಹಬ್ಬವನ್ನು ಆಚರಿಸಿತ್ತಿದ್ದು, ನಮ್ಮ ವಿದ್ಯಾರ್ಥಿಗಳು ವಿಶಿಷ್ಟವಾಗಿ ಆಚರಿಸಲು ಇಚ್ಚಿಸಿ 5 ದಿನಗಳ ಕಾಲ ಕನ್ನಡ ರಾಜ್ಯೋತ್ಸವನ್ನು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಆಚರಿಸುತ್ತಿದ್ದಾರೆ. ರಾಜ್ಯದ ವಿವಿಧ ಮೂಲಗಳಿಂದ ಸುಮಾರು 70 ಕಲಾ ತಂಡಗಳ ಪ್ರದರ್ಶನ ಇರಲಿದೆ. ವಿದ್ಯಾರ್ಥಿಗಳಲ್ಲಿ ಕನ್ನಡದ ಸದಭಿರುಚಿಯನ್ನು ಹೆಚ್ಚಿಸುವುದಕ್ಕೆ ಆದ್ಯತೆ ಕೊಟ್ಟಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಗೌರವ ಅಧ್ಯಕರಾದ ಗುಂಡಪ್ಪ ಗೌಡ, ಗೌರವ ಕಾರ್ಯದರ್ಶಿಗಳಾದ ಪಿ ವಿಶ್ವನಾಥ್, ಸಂಚಾಲಕರಾದ ಪ್ರೊ ಎನ್ ಎಸ್ ಲಿಂಗೇಗೌಡ ಹಾಗೂ ವಿದ್ಯಾರ್ಥಿಗಳ ಸ್ವಯಂ ಸೇವಾ ಸಂಘವಾದ ಯೂಥ್ ಫಾರ್ ಸೇವಾದ ಬಿ ಬಿ ಗಣೇಶ್ ಉಪಸ್ಥಿತರಿದ್ದರು.