ವರದಿ : ಉಮೇಶ್/ ನಂದಿನಿ ಮೈಸೂರು
ಸರ್ಕಾರಿ ಶಾಲೆ ಅಂದರೆನೇ ಮೂಗು ಮುರಿಯುವರೇ ಹೆಚ್ಚು ಇನ್ನೂ ಹಾಡಿ ಸರ್ಕಾರಿ ಶಾಲೆ ಅಂದ್ರೇ ಆ ಕಡೆ ಯಾರು ತಿರುಗಿಯೂ ಕೂಡ ನೋಡಲ್ಲ ಬಿಡಿ.ಹಾಡಿ ಮಕ್ಕಳಿಗೆ ಅಗತ್ಯವಾದ ನೀರನ್ನು ಒದಗಿಸುವ ಮೂಲಕ ಸೆಂದಿಲ್ ಕುಮಾರ್ ಸೇವಾ ಕಾರ್ಯಕ್ರಮದಲ್ಲಿ ತೊಡಗಿದ್ದಾರೆ.
ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ
ಮಂಚೇಗೌಡನಹಳ್ಳಿ ಹಾಡಿ
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ನೀರಿನ ಅವಶ್ಯಕತೆ ಇತ್ತು.ಇದನ್ನ ಮನಗಂಡ ಸುಭಾಷ್ ಪವರ್ ಸ್ಟೇಷನ್ ಹಿರಿಯ ಮ್ಯಾನೇಜರ್ ಸೆಂದಿಲ್ ಕುಮಾರ್ ರವರು ಶಾಲೆಯ ಆವರಣದಲ್ಲಿ ಟ್ಯಾಂಕ್ ನಿರ್ಮಿಸಿ ಮಕ್ಕಳಿಗೆ ನೀರಿನ ಸೌಕರ್ಯ ಒದಗಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸೆಂದಿಲ್ ಕುಮಾರ್ ರವರಿಗೆ ಅಭಿನಂದಿಸಲಾಯಿತು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕೃಷ್ಣಯ್ಯ ಮಾತಾನಾಡಿ ನಮ್ಮ ಕೋಟೆ ತಾಲೋಕಿನಲ್ಲಿ ಸಾಕಷ್ಟು ಸ್ವಯಂ ಸೇವಾ ಸಂಸ್ಥೆಗಳು ಇದ್ದು ಶಿಕ್ಷಣ ಇಲಾಖೆಯೊಂದಿಗೆ ತುಂಬಾ ಸಹಕಾರ ಮಾಡುತ್ತಿದ್ದು. ವಿಶೇಷವಾಗಿ ಸೆಂದಿಲ್ ರವರು ಗ್ರಾಮೀಣ ಮತ್ತು ಹಾಡಿ ಶಾಲೆಗಳಿಗೆ ಆದ್ಯತೆಯ ಮೇರೆಗೆ ಸವಲತ್ತುಗಳನ್ನು ವಿತರಿಸುತ್ತಿದ್ದಾರೆ, ಹಾಗಾಗಿ ಅವರನ್ನ ಅತ್ಯಂತ ಪ್ರೀತಿಯಿಂದ ಅಭಿನಂದನೆ ಸಲ್ಲಿಸುತ್ತೆನೆ ಎಂದರು.
ಅಭಿನಂದನೆ ಸ್ವೀಕರಿಸಿ ಮಾತಾನಾಡಿದ ಹಿರಿಯ ಮ್ಯಾನೇಜರ್ ಸೆಂದಿಲ್ ಕುಮಾರ್ ರವರು ಮಕ್ಕಳ ಮುಂದೆ ಶಿಕ್ಷಕರನ್ನ ನಿಂಧಿಸಬೇಡಿ ಯಾಕೆಂದರೆ ಮಕ್ಕಳಿಗೆ ಗುರುಗಳ ಮೇಲಿನ ಗೌರವ ಕಡಿಮೆಯಾಗಿ ಕಲಿಕೆಯ ಮೇಲೆ ಪರಿಣಾಮ ಬೀರುತ್ತೆ, ಜೊತೆಗೆ ಮಕ್ಕಳ ಕಲಿಕೆಯ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳಬೇಕು, ಬಡತನದ ಸಮಸ್ಯೆಯಿರುವ ಯಾವುದೇ ಮಕ್ಕಳಿಗೆ ಶೈಕ್ಷಣಿಕ ದೃಷ್ಟಿಯಿಂದ ನಾವು ನಮ್ಮ ಕೈಲಾದ ಸಹಾಯ ಮಾಡುತ್ತೆವೆಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಇಸಿಒ ನಂಜರಾಜ್. ಚಿಕ್ಕನಾಯಕ. ಸಿಆರ್ಪಿ ಪ್ರಕಾಶ್. ಪೋಲಿಸ್ ಇಲಾಖೆ ಪುರುಷೋತ್ತಮ. ಪೀಪಲ್ ಟ್ರೀ ಸಂಸ್ಥೆಯ ರುದ್ರಪ್ಪ. ಜವರೇಗೌಡ. ಚೆನ್ನಬಸಪ್ಪ. ಇಂಜಿನಿಯರ್ ಧನಂಜಯ. ಶಿವಕುಮಾರ್. ಶಿಕ್ಷಕರಾದ ಶ್ರೀಕಂಠಿ. ಪುನೀತ್ ಮತ್ತು ಪೋಷಕರು ಮಕ್ಕಳು ಹಾಜರಿದ್ದರು.