ನಂದಿನಿ ಮೈಸೂರು
ಶ್ರೀ ಬಾಲಾಜಿ ಎಂಟರ್ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಮಂಜು ಕವಿ ನಿರ್ದೇಶನದ ಚೊಚ್ಚಲ ಚಿತ್ರ ಟೆಂಪರ್ ಚಿತ್ರ ಡಿ.16 ಕ್ಕೆ ತೆರೆ ಕಾಣಲಿದೆ ಎಂದು ಚಿತ್ರತಂಡ ತಿಳಿಸಿದೆ.
ಚಿತ್ರದಲ್ಲಿ ನಾಯಕ ನಟನಾಗಿ ಆರ್ಯನ್ ಸೂರ್ಯ, ನಾಯಕಿಯಾಗಿ ಕಾಶಿಮ ಅಭಿನಯಿಸಿದ್ದಾರೆ ವಿ ವಿನೋದ್ ಕುಮಾರ್, ಮೋಹನ್ ಬಾಬು ನಿರ್ಮಾಪಕರಾಗಿದ್ದು ಸಂಗೀತ ನಿರ್ದೇಶಕ ಹರಿಬಾಬು ಇದ್ದಾರೆ. ಚಿತ್ರದಲ್ಲಿ ಹಿರಿಯ ಕಲಾವಿದರಾದ ಟೆನಿಸ್ ಕೃಷ್ಣ ತಬಲರಾಣಿ ಮಿತ್ರ ಮಜಾ ಟಾಕೀಸ್ ಪವನ್ ಹಾಗೂ ಸುಧಾ ಬೆಳವಾಡಿ ಪ್ರಿಯಾ ತರುಣ್ ರಾಜ್ ಬಲ್ಲ ರಾಜವಾಡಿ ಸನತ್ ವಿನೋದ್ ಮಿಥಾಲಿ ಶಶಿ ಅನೇಕ ತಾರಾ ಬಳಗವೇ ಇದೆ.ಸಂಕಲನ ಬಿಎಸ್ ಕೆಂಪರಾಜು, ಕ್ಯಾಮರಾ ಆರ್ ಕೆ ಶಿವಕುಮಾರ್ ಕಾರ್ಯನಿರ್ವಹಿಸಿದ್ದಾರೆ.
ಇನ್ನು ಈ ಚಿತ್ರಕ್ಕೆ ಕಥೆ ಚಿತ್ರಕಥೆ ಸಾಹಿತ್ಯ ಸಂಭಾಷಣೆ ಮಂಜು ಕವಿ ರಚಿಸಿದ್ದಾರೆ ಡಿಸೆಂಬರ್ 16ಕ್ಕೆ ಕರ್ನಾಟಕ ರಾಜ್ಯದ್ಯಂತ ಟೆಂಪರ್ ಚಿತ್ರ ಬಿಡುಗಡೆಯಾಗುತ್ತಿದೆ ಕುಟುಂಬ ಸಮೇತರಾಗಿ ನೋಡುವಂತಹ ಚಿತ್ರಕ್ಕೆ ನಮ್ಮೆಲ್ಲರ ಶುಭ ಹಾರೈಕೆ ಇರಲಿ ಎಂದಿದ್ದಾರೆ.