ದೈಹಿಕ, ಮಾನಸಿಕ ಆರೋಗ್ಯದತ್ತ ವಿದ್ಯಾರ್ಥಿಗಳ ಹೆಜ್ಜೆ’ ವಿದ್ಯಾವರ್ಧಕ ತಾಂತ್ರಿಕ ಮಹಾವಿದ್ಯಾಲಯಯಿಂದ ವಿಶ್ವ ಮಾನಸಿಕ ಆರೋಗ್ಯ ದಿನ ವಿಭಿನ್ನ ಕಾರ್ಯಕ್ರಮ

ನಂದಿನಿ ಮೈಸೂರು

‘ದೈಹಿಕ, ಮಾನಸಿಕ ಆರೋಗ್ಯದತ್ತ ವಿದ್ಯಾರ್ಥಿಗಳ ಹೆಜ್ಜೆ’ ವಿದ್ಯಾವರ್ಧಕ ತಾಂತ್ರಿಕ ಮಹಾವಿದ್ಯಾಲಯಯಿಂದ ವಿಶ್ವ ಮಾನಸಿಕ ಆರೋಗ್ಯ ದಿನ ವಿಭಿನ್ನ ಕಾರ್ಯಕ್ರಮ

ಮೈಸೂರು: ‘ ವ್ಯಾಯಾಮದಿಂದ ದೈಹಿಕ, ಮಾನಸಿಕ ಆರೋಗ್ಯ’ ಎಂಬ ದ್ಯೇಯದೊಂದಿಗೆ ಹೆಜ್ಜೆ ಹಾಕಿದ್ದಲ್ಲದೇ ಬೀದಿ ನಾಟಕದ ಮೂಲಕವೂ ಅರಿವು ಮೂಡಿಸುವ ಕೆಲಸವನ್ನು ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಮಾಡಿದರು.

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ವಿದ್ಯಾವರ್ಧಕ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಜತೆಗೂಡಿ ಮೆಟ್ಟಿಲು ಹತ್ತಿ ಹಾಗೂ ನಾಟಕವನ್ನು ಪ್ರಸ್ತುತ ಪಡಿಸಿ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ನಡೆಸಿದರು. 8ಮಂದಿಗೆ ಒಬ್ಬರಲ್ಲಿ ಮಾನಸಿಕ‌ ಆರೋಗ್ಯ ಸಮಸ್ಯೆಯಿದೆ. ಪ್ರತಿ 40 ಸೆಕೆಂಡಿಗೆ ಒಬ್ಬರ ಆತ್ಮಹತ್ಯೆ ನಡೆಯುತ್ತಿದೆ ಎಂಬ ಆಘಾತಕಾರಿ ಅಂಶ ಸಂಶೋದನೆಗಳು ತಿಳಿಸಿಕೊಟ್ಟಿವೆ. ಹೀಗಾಗಿ 1992 ರಲ್ಲಿ ಮೊದಲ ಬಾರಿಗೆ ಈ ದಿನವನ್ನು ಆಚರಿಸಲಾಯಿತು. ಎಲ್ಲರಲ್ಲೂ ಮಾನಸಿಕ ಕಾಯಿಲೆಎ ಅಲ್ಪ ಪ್ರಮಾಣದಲ್ಲಿ ಇರುತ್ತದೆ. ಶೇ.12 ರಷ್ಟು ಪ್ರಮಾಣದ ಮಾನಸಿಕ‌ ಖಿನ್ನತೆ ಹಾಲ್ಕೋ ಹಾಲ್ ಹಾಗೂ ಡ್ರಗ್ ಸೇವನೆಯಿಂದ ಆಗುತ್ತಿರುವ ಬಗ್ಗೆ ವರದಿಗಳಿವೆ ಎಂಬುದನ್ನು ಕಾರ್ಯಕ್ರಮದಲ್ಲಿ ತಿಳಿಸಿಕೊಡುವ ಮೂಲಕ ಜನಜಾಗೃತಿ ಮೂಡಿಸಿದರು.

ಈ ವೇಳೆ ವಿದ್ಯಾವರ್ಧಕ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಬಿ. ಸದಾಶಿವೇಗೌಡ, ಆಪ್ತ ಸಮಾಲೋಚಕರಾದ ಎಂ.ಆರ್. ಶಂಭಾವಿ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *