ನಂದಿನಿ ಮೈಸೂರು
ಎನ್ ಆರ್ ಐ ನಿರ್ಮಾಪಕರಾದ (ಇಂಡಿಯಾ vls ಇಂಗ್ಲೆಂಡ್ ) ಖ್ಯಾತಿಯ ಗೋಪಾಲ್ ಕುಲಕರ್ಣಿ ನಿರ್ಮಾಣದ ಹಾಗೂ ಸತ್ಯರತ್ನಮ್ ನಿರ್ದೇಶನದಲ್ಲಿ ಮೂಡಿ ಬಂದಿರುವ “ಕಥಾಲೇಖನ” ಚಿತ್ರವು ಅಕ್ಟೋಬರ್ 21ರಂದು ರಾಜ್ಯಾದ್ಯಂತ ಹಾಗೂ ವಿಶ್ವದ ಹಲವು ಕಡೆ ತೆರೆ ಕಾಣಲಿದೆ.
ಮೈಸೂರಿಗೆ ಆಗಮಿಸಿದ ಕಥಾಲೇಖನಾ ಚಿತ್ರ ತಂಡ ಸಿನಿಮಾದ ಟ್ರೈಲರ್ ಹಾಗೂ ಹಾಡುಗಳನ್ನು ಪ್ರದರ್ಶಿಸಿ ಸಿನಜಮಾ ಬಗ್ಗೆ ಪತ್ರಕರ್ತರಿಗೆ ಮಾಹಿತಿ ನೀಡಿದರು.
ಜಿ. ಕೆ ಎಂಟರ್ಟೈನ್ಮೆಂಟ್ ಸಂಸ್ಥೆಯ ಅಡಿಯಲ್ಲಿ ನಿರ್ಮಾಣಗೊಂಡಿರುವ ಕಥಾಲೇಖನ ಚಿತ್ರ ಅ.21 ರಂದು ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ.
ಚಿತ್ರದ ನಟ ಅರ್ಫತ್, ನಟಿ ಕಾವ್ಯ ಭಗವಂತ್, ಮುಖ್ಯ ತಾರಾಗಣದಲ್ಲಿ
ಗೋಪಾಲ್ ಕುಲಕರ್ಣಿ.ಹಾಸ್ಯ ಕಲಾವಿದ ಚಂದ್ರಪ್ರಭಾ, ನಾಗೇಂದ್ರ ಅರಸ್, ಸ್ವಪ್ನ ರಾಜ್, ಪಲ್ಟಿ ಗೋವಿಂದ, ಜಗಪ್ಪ ಮಂಜುಪಾವಗಡ ಮುಖ್ಯ ಭೂಮಿಕೆಯಲ್ಲಿದ್ದು ಇನ್ನೂ ಹಲವು ಹೊಸ ಪ್ರತಿಭೆಗಳು ಕೂಡ ನಟಿಸಿದ್ದಾರೆ, ಚಿತ್ರಕ್ಕೆ ಕರ್ಣಂ ಶ್ರೀ ರಾಘವೇಂದ್ರರ ಸಂಗೀತ, ರಂಗಸ್ವಾಮಿ.ಎಸ್. ರವರ ಕ್ಯಾಮೆರಾ ಕೈ ಚಳಕವಿದ್ದು, ಶ್ರೀವರ್ಕಲರ ಸಂಕಲನ, ರಾಜು ರವರ ನೃತ್ಯ ಸಂಯೋಜನೆ ಇದೆ.ಸತ್ಯರತ್ನಮ್ ಹಾಗೂ ಹರ್ಷರ್ಧನ್ ನಿಟ್ಟೂರು ರವರ ಸಾಹಿತ್ಯ ಚಿತ್ರಕ್ಕಿದೆ, ಹೆಸರಾಂತ ಗಾಯಕರಾದ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್, ಗೌತಮ್ ಭಾರದ್ವಾಜ್, ಅನುರಾಧ ಭಟ್ ರವರ ಕಂಠ ಸಿರಿಯಲ್ಲಿ ಹಾಡುಗಳು ಮೂಡಿಬಂದಿದೆ.ಸಿನಿಮಾದಲ್ಲಿ ಒಳ್ಳೆಯ ಕಥೆ ಇದೆ.ಒಂದು ಹೆಣ್ಣಿನ ಸುತ್ತ ಕಥೆ ಎಣೆಯಲಾಗಿದೆ.ಫೈಟಿಂಗ್ ಈ ಚಿತ್ರದಲ್ಲಿ ಇರುವುದಿಲ್ಲ.ಇನ್ನೂಳಿದ ಪ್ರೀತಿ,ಪ್ರೇಮ,ತಂದೆ ಪ್ರೀತಿ ಹಾಸ್ಯ ಎಲ್ಲವೂ ಕಥಾಲೇಖನ ಚಿತ್ರದಲ್ಲಿ ಮೂಡಿಬಂದಿದೆ ಎಂದು ಗೋಪಾಲ್ ಕುಲಕರ್ಣಿ ತಿಳಿಸಿದರು.