ನಂದಿನಿ ಮೈಸೂರು
ಮಳವಳ್ಳಿಯಲ್ಲಿ ಶಿಕ್ಷಕನಿಂದ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಬಾಲಕಿ ನಿವಾಸಕ್ಕೆ ಸಿನಿಮಾ ನಟ ಪ್ರಥಮ್ ಭೇಟಿ ನೀಡಿ ಸಾಂತ್ವನ ಹೇಳಿದರು.
ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಇರುವ ಮೃತ ಬಾಲಕಿ ದಿವ್ಯಳಾ ಮನೆಗೆ ತೆರಳಿದ ಪ್ರಥಮ್ ದಿವ್ಯಾಳ ತಾಯಿ ತಂದೆ ಹಾಗೂ ಅಜ್ಜಿಗೆ ಸಾಂತ್ವನ ಹೇಳಿ ಮರುಕ ವ್ಯಕ್ತಪಡಿಸಿದ್ದಾರೆ.
ಸಮಾಜದಲ್ಲಿ ಶಿಕ್ಷಕರು, ವೈದ್ಯರು ಹಾಗೂ ಪೊಲೀಸರು ತಪ್ಪು ಮಾಡಬಾರದು, ಶಿಕ್ಷಕರು ತಪ್ಪು ಮಾಡಿದರೇ ಸಮಾಜ ಹಾಳಾಗುತ್ತದೆ, ವೈದ್ಯರು
ಮೈಮರೆತರೇ ರೋಗಿಯ ಪ್ರಾಣ ಹೋಗುತ್ತಿದೆ, ಪೊಲೀಸರು ತಪ್ಪು ಮಾಡಿದರೇ ನಿರಾಪರಾಧಿ
ಅಪರಾಧಿಯಾಗುತ್ತಾರೆಂದು ಹೇಳಿದರು.
ಬಾಲಕಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಹಾಗೂ ವಿರೋಧ
ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳಲಾಗುವುದು,
ವಕೀಲರು ಆರೋಪಿಯ ಪರ ನಿಲ್ಲದೇ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು
ಒತ್ತಾಯಿಸಿದರು.