ನಂದಿನಿ ಮೈಸೂರು
ಸಾವಯವ ಕೃಷಿಯಿಂದ
ಮಣ್ಣಿನ ಸಂರಕ್ಷಣೆ-ಸಿ.ಚಂದನ್ ಗೌಡಈ ಕಾಮರ್ಸ್ ವೆಬ್ ಸೈಟ್ ಮತ್ತು ರೈತ ಕಲ್ಯಾಣದ ಆ್ಯಪ್ ಬಿಡುಗಡೆ
ಮೈಸೂರು:ರಾಸಾಯನಿಕ ಬಳಕೆಯಿಂದಾಗಿ ಈಗಾಗಲೇ ಬೆಳೆ ಬೆಳೆಯುವ ಮಣ್ಣಿನ ಸತ್ವ ಕಳೆದುಹೋಗುತ್ತಿದ್ದು,
ಇನ್ನಾದರೂ ಇದನ್ನು ಅರಿತು, ಸಾವಯವ ಕೃಷಿ ಪದ್ದತಿಗೆ ರೈತರು ಮುಂದಾಗಬೇಕೆಂದು ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಸಿ.ಚಂದನ್ ಗೌಡ ಮನವಿ ಮಾಡಿದರು.
ಮಂಗಳವಾರ ಬೆಳಗ್ಗೆ
ಜೆಎಲ್ ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೃಷಿ ಯಶಸ್ವಿನಿ ಕಾರ್ಡ್ ಹಾಗೂ ರೈತ ಕಲ್ಯಾಣ ಸಂಘದ ಆ್ಯಪ್ ನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕರ್ನಾಟಕ ಕೃಷಿ ಕ್ಷೇತ್ರದ ಇತಿಹಾಸದಲ್ಲಿ ಹೊಸ ಮನ್ವಂತರ ಆರಂಭವಾಗಲಿದೆ.
ಮನುಕುಲದ ಹೊಟ್ಟೆಯ ಹಸಿವಿನ ಚೀಲವನ್ನು ನಿರಂತರವಾಗಿ ತುಂಬಿಸಿಕೊಂಡು ಬರುತ್ತಿರುವ
ಅನ್ಮದಾತನ ಏಳಿಗೆಗಾಗಿ ಜನ್ಮ ತಾಳಿದೆ ಈ ನಮ್ಮ ರೈತ ಕಲ್ಯಾಣ ಸಂಘ ಎಂದರು.
ಸಂಘ ಅನಾವರಣಗೊಂಡ ಮೊದಲ ದಿನದಿಂದಲೇ ರೈತರ ಅಭಿವೃದ್ದಿಗಾಗಿ ಹಾಗೂ ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆಗಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಲ್ಲದೇ
ಮಣ್ಣಿನ ಫಲವತ್ತತೆಗೋಸ್ಕರ,ಮತ್ತು ಮಣ್ಣಿನ ರಕ್ಷಣೆ ಹಾಗೂ ಪೋಷಣೆಗಾಗಿ ಹಗಲಿರುಳು ಸ್ಪಂದಿಸುತ್ತಾ ಅವರ ಕಷ್ಟದಲ್ಲಿ ಭಾಗಿಯಾಗಿ, ರೈತ ಕುಟುಂಬದ ಬೆನ್ನೆಲುಬಾಗಿ ರೈತ ಕಲ್ಯಾಣಕ್ಕಾಗಿ ಸಂಘ ಶ್ರಮಿಸುತ್ತಿದೆ ಎಂದ ಅವರು,
ಇದುವರೆಗಿನ ಶ್ರಮದ ಹೊರತಾಗಿಯೂ ಈಗ ಹೊಸ ಪ್ರಯತ್ನವಾಗಿ ರೈತರ ಒಳಿತಿಗಾಗಿ ಸಹಾಯಧನ ಮತ್ತು ಪ್ರೋತ್ಸಾಹ ಧನದ ರೂಪದಲ್ಲಿ ಅಗತ್ಯ ಕೃಷಿ ಸಲಕರಣೆ ಹಾಗೂ ಇತರೆ ಪದಾರ್ಥಗಳನ್ನು ನೀಡಲು ಉದ್ದೇಶಿಸಿ,ಕೃಷಿ ಯಶಸ್ವಿನಿ ಎಂಬುವ ಕಾರ್ಡ್ ಅನ್ನು ಸರ್ಕಾರದ ಯೋಜನೆಗಳನ್ನು ಹೊರತುಪಡಿಸಿ ರೈತ ಕಲ್ಯಾಣ ಸಂಘದ ವತಿಯಿಂದ ಸಿದ್ದಪಡಿಸಲಾಗಿದೆ.
ಅಲ್ಲದೇ ರೈತರಿಗೆ ಮೊಬೈಲ್ ಮೂಲಕವೇ ಸಾವಯವ ಕೃಷಿಯ ಅರಿವು ಮತ್ತು ರೈತ ಕಲ್ಯಾಣ ಸಂಘದ ಗುರಿಯನ್ನು ತಲುಪಿಸುವ ನಿಟ್ಟಿನಲ್ಲಿ ‘ರೈತ ಕಲ್ಯಾಣ’ ಆ್ಯಪ್ ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಿದರು.
ಆಧುನಿಕತೆ ಬೆಳೆದಂತೆ ರೈತ ಬಾಂಧವರನ್ನು ಕೂಡ ಡಿಜಿಟಲ್ ಮತ್ತು ಟೆಕ್ನಾಲಜಿ ತಂತ್ರಜ್ಞಾನದ ಮೂಲಕ ಕೃಷಿಯಲ್ಲಿ ಉತ್ತಮವಾದಂತಹ ಬದುಕನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ರೈತ ಕಲ್ಯಾಣದ ಆ್ಯಪ್ ಬಿಡುಗಡೆ ಮಾಡಲಾಗುತ್ತಿದೆ. ಸಿರಿವಂತರ ಸಾಲಿನಲ್ಲಿ ರೈತರು ಕೂಡ ಉದ್ಯಮಿಗಳನ್ನಾಗಿ ಮಾಡುವ ಮಹದಾಸೆ ಈ ಆ್ಯಪ್ ನ ಉದ್ದೇಶವಾಗಿದೆ.ಅನ್ನದಾತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರಿದರು.
ನಾನು ಮೂಲತ: ರೈತನಲ್ಲ.ಹಾಗೂ ನನ್ನ ಪೋಷಕರು ಕೂಡ ರೈತರಲ್ಲ.ಕಳೆದ ಮೂರು ವರ್ಷಗಳಲ್ಲಿ ಕೊರೊನಾ ಮಹಾಮಾರಿ ಹೊಡೆತಕ್ಕೆ ಸಿಲುಕಿ ಇಡೀ ಜಗತ್ತೆ ನಲುಗಿಹೋದದ್ದು ಎಲ್ಲರಿಗೂ ತಿಳಿದ ಸಂಗತಿಯೇ ಆಗಿದೆ.ಈ ವೇಳೆ ಮನೆಯಿಂದ ಹೊರಬಂದ ದುಡಿದು ಜನರ ಹೊಟ್ಟೆ ತುಂಬಿಸುವ ಕಾರ್ಯ ಮಾಡಿದ್ದು ಈ ನಮ್ಮ ಅನ್ನದಾತ ಬಂಧುಗಳು ಮಾತ್ರ.ಊರು ಬಿಟ್ಡು ಹೊರಗಿನ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದ ಸಾಕಷ್ಟು ವಿದ್ಯಾವಂತರೂ ಕೂಡ ಮತ್ತೆ ಊರಿಗೆ ಮರಳಿ ಕೃಷಿಯಲ್ಲಿ ತೊಡಗಿದ್ದಾರೆ.ಈ ಎಲ್ಲ ಸನ್ನಿವೇಶ ನನ್ನನ್ನು ಈ ಕ್ಷೇತ್ರದತ್ತ ಸೆಳೆಯಿತು ಎಂದ ಚಂದನ್ ಗೌಡ ಅವರು,
ಅನ್ನದಾತರ ಹಗಲಿರುಳು ಶ್ರಮಿಸುವುದು ರೈತ ಕಲ್ಯಾಣ ಸಂಘದ ಪರಮಗುರಿಯಾಗಿದ್ದು, ಪ್ರಯೋಗಲಯದಿಂದ ನೇರ ರೈತರ ಜಮೀನಿಗೆ ಸಾವಯವ ಕೃಷಿ ಪದ್ದತಿಗೆ ಅಗತ್ಯವಿರುವ ಸಲಕರಣೆಗಳು,ಗೊಬ್ಬರ ಸೇರಿದಂತೆ ಇನ್ನಿತರ ಪದಾರ್ಥಗಳನ್ನು ತಲುಪಿಸುವ ಕಾರ್ಯ ಪ್ರಾರಂಭವಾಗಿದೆ.ಯಾವುದೇ ಅಗತ್ಯತೆಗಳಿಗೆ ರೈತರು ರೈತ ಕಲ್ಯಾಣ ಸಂಘದ ಕಚೇರಿಯನ್ನು ಸಂಪರ್ಕಿಸಬೇಕೆಂದರು.
ಸಂದರ್ಭದಲ್ಲಿ ಸಂಘದ ಮುಖಂಡರು, ಪದಾಧಿಕಾರಿಗಳಾದ ಸ್ವಾಮಿಗೌಡ, ಹರೀಶ್ ಪಿ. ಗೌಡ, ಮೂರ್ತಿ ಕೋಟೆ, ಕಂದಸ್ವಾಮಿ, ಹೇಮಂತ್ ಗೌಡ,ನವೀನ್ ಗೌಡ, ಗೋವರ್ಧನ್, ಎಜಿಎಸ್ ಪಾಷಾ, ಈರಣ್ಣ,ಸಿದ್ದಲಿಂಗೇಗೌಡ,
ಉಮೇಶ್ ,ದಾಸೇಗೌಡ,
ಅಭಿ, ಪುನೀತ್, ಸಂಜಯ್, ಹರ್ಷ, ಶಿವಶಂಕರ್, ಚಂದ್ರು ಶಿವಣ್ಣ, ಕಳಲೆ ಮಹೇಶ್, ವಸಂತ್ ಕುಮಾರ್, ಪಳನಿಸ್ವಾಮಿ, ಪುಟ್ಟಮ್ಮ, ಮಣಿ, ನಾಗರತ್ನ ಹಾಗೂ ಪದಾಧಿಕಾರಿಗಳು ಮುಖಂಡರುಗಳು,ವಿವಿಧ ತಾಲೂಕಿನ ರೈತರು ಉಪಸ್ಥಿತರಿದ್ದರು.