ಟಿ.ನರಸೀಪುರ:14 ಆಗಸ್ಟ್ 2021
ಕೊರೊನ ಮೂರನೇ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ತೆಗೆದುಕೊಂಡಿರುನ ವೀಕೆಂಡ್ ಕರ್ಫ್ಯೂಗೆ ಪಟ್ಟಣ ಜನತೆಯಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ಕದ್ದು ಮುಚ್ಚಿ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ.
ಪೊಲೀಸರು ಬಾಗಿಲು ಮುಚ್ಚುವಂತೆ ಮೈಕ್ನ್ನಲ್ಲಿ ಪ್ರಚಾರ ಮಾಡುತ್ತಿದ್ದು,ಅವರು ಎದುರು ಬಂದಾಗ ಬಾಗಿಲು ಮುಚ್ಚುವಂತೆ ನಾಟಕವಾಡಿ ಮುಂದೆ ಹೋದಾಗ ಬಾಗಿಲು ತೆರೆದು ವ್ಯಾಪಾರ ಮಾಡುತ್ತಿದ್ದಾರೆ.
ಪೊಲೀಸರು ರಸ್ತೆಗಿಳಿಯದ ಹೊರತು ಸ್ವ ಇಚ್ಛೆಯಿಂದ ವೀಕೆಂಡ್ ಕರ್ಫ್ಯೂಗೆ ಬೆಂಬಲ ನೀಡದ ಜನತೆ…ಮಧ್ಯಾಹ್ನ ೩-೩೦ ರಿಂದ ಸಂಜೆ ೦೪ ಗಂಟೆ ಸುಮಾರಿನವರೆಗೂ ಪೊಲೀಸರು ರೌಂಡ್ ಹಾಕಿ ಬಾಗಿಲು ಮುಚ್ತಿಸುವುದೇ ಆಗಿತ್ತು. ಆದರೂ ಅವರು ಮುಂದ ಹೋದಾಗ ಅಂಗಡಿ ಕೆಲಸದವರನ್ನು ಆಚೆ ನಿಲ್ಲಿಸಿ ಮತ್ತೊಂದು ಬಾಗಿಲ ಮೂಲಕ ವ್ಯಾಪಾರ ಮಾಡುತ್ತಿರುವುದು ಕಂಡು ಬಂದಿತು.ಪೊಲೀಸರು ಇಂತಹವರ ಮೇಲೆ ಕಟ್ಚು ನಿಟ್ಟಿನ ಕ್ರಮ ಕೈಗೊಂಡರೆ,ಮುಂದಿನ ದಿನಗಳಲ್ಲಿ ಬೇರೆಯವರಿಗೆ ಎಚ್ಚರಿಕೆ ಆಗುತ್ತದೆ.