ಮಕ್ಕಳು ಬಾಬಾಸಾಹೇಬರ ಚಿಂತನೆಗಳನ್ನು ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು: ಶ್ರೀಧರ್

 

ಟಿ.ನರಸೀಪುರ:14 ಆಗಸ್ಟ್ 2021

ಸಮಾಜವನ್ನು ಉತ್ತಮ ದಾರಿಯಲ್ಲಿ ಕೊಂಡೊಯ್ಯಲು ಶಿಕ್ಷಣ ಮಹತ್ತರ ಪಾತ್ರ ವಹಿಸುತ್ತದೆ.ಆ ನಿಟ್ಟಿನಲ್ಲಿ ಮಕ್ಕಳು ಬಾಬಾಸಾಹೇಬರ ಚಿಂತನೆಗಳನ್ನು ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದು ಬೌದ್ಧ ಮಹಾಸಭಾ ತಾಲ್ಲೂಕು ಅಧ್ಯಕ್ಞ  ಎಂ.ಶ್ರೀಧರ್ ಸಲಹೆ ನೀಡಿದರು.

ಪಟ್ಟಣದ ಮೆಗಾಸ್ಟಾರ್ ಡಾನ್ಸ್ ಕ್ಲಾಸ್ ಸಭಾಂಗಣದಲ್ಲಿ ಭಾರತೀಯ ಬೌದ್ಧ ಮಹಾಸಭಾ ತಾಲ್ಲೂಕು ಶಾಖೆ ವತಿಯಿಂದ ಎಸ್.ಎಸ್.ಎಲ್‌.ಸಿ. ಮತ್ತು ಪಿ‌.ಯು.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಉತ್ತೀರ್ಣರಾದ ಬೌದ್ಧ ಮಹಾಸಭಾ ಪ್ರತಿನಿಧಿಗಳ ಮಕ್ಕಳಿಗೆ  ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬುದ್ಧ- ಬಸವ-ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ,ಮೇಣದ ಬತ್ತಿಯನ್ನು ಹಚ್ಚುವುದರ ಮೂಲಕ ಅದ್ಯಕ್ಷರಾದ ಎಂ.ಶ್ರೀಧರ್ ಮತ್ತು ತಂಡ ಚಾಲನೆ ನೀಡಿದರು.

ನಂತರ ವಿದ್ಯಾರ್ಥಿಗಳಾದ ಶೃಂಗಾ ಎಸ್.ಎನ್.,ಪ್ರಜ್ಞಾ.ಎನ್.,ಮನೋಜ್ ಕುಮಾರ್.ಆರ್.ರವರನ್ನು ಬೌದ್ಧ ಮಹಾಸಭಾ ತಾಲ್ಲೂಕು ಅಧ್ಯಕ್ಞ  ಎಂ.ಶ್ರೀಧರ್ ಸನ್ಮಾನಿಸಿ ಮಾತನಾಡಿ,ನಮ್ಮ ಸಮುದಾಯದ ಮಕ್ಕಳಿಗೆ ಅವಕಾಶ ಸಿಕ್ಕರೆ ಎಲ್ಲಾ ರಂಗದಲ್ಲೂ ಸಾಧನೆ ಮಾಡಬಲ್ಲರು ಎಂಬುದಕ್ಕೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶಿಕ್ಷಕ ನಾಗೇಶ್ ರವರ ಪುತ್ರಿ  623 ಅಂಕಗಳಿಸಿರುವುದೇ ಸಾಕ್ಷಿಯಾಗಿದೆ.

ನಮ್ಮ ಸಮುದಾಯದ ಮಕ್ಕಳಿಗೆ ಅವಕಾಶ ಸಿಕ್ಕರೆ ಎಲ್ಲಾ ರಂಗದಲ್ಲೂ ಸಾಧನೆ ಮಾಡಬಲ್ಲರು ಎಂಬುದಕ್ಕೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶಿಕ್ಷಕ ನಾಗೇಶ್ ರವರ ಪುತ್ರಿ  623 ಅಂಕಗಳಿಸಿರುವುದೇ ಸಾಕ್ಷಿಯಾಗಿದೆ.ಸಮಾಜ ಎಲ್ಲಾ ರಂಗದಲ್ಲೂ ನಮ್ಮನ್ನು ಸಮಾನಾಂತರವಾಗಿ ಕಾಣಬೇಕು.ಆ ದಿಸೆಯಲ್ಲಿ ನಡೆದಾಗ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.

ಕೊಳ್ಳೇಗಾಲದ ಮುಖ್ಯ ಶಿಕ್ಷಕ ಮಹದೇವ್ ಕುಮಾರ್ ರವರು ಬಾಬಾಸಾಹೇಬರ ವಿಚಾರಧಾರೆಗಳನ್ನು ತಿಳಿಸುತ್ತಾ,ಪೂರ್ಣತಾಃ ಮೂಕ,ಕಿವುಡ ಹಾಗೂ ಅಂಧವಾಗಿದ್ದ ಅಸ್ಪೃಶ್ಯ ಸಮಾಜಕ್ಕೆ ಸ್ವಾಭಿಮಾನದಿಂದ ಬದುಕುವ ದಾರಿ ತೋರಿದವರು.ಅವರ ಮಾರ್ಗದರ್ಶನದಲ್ಲಿ ಅವರ ವಿಚಾರಧಾರೆಗಳನ್ನು ಸಂಪೂರ್ಣವಾಗಿ ಅಳವಡಿಸಿಕೊಂಡು ನಡೆದಾಗ ಮಾತ್ರ ನಾವು ಅವರಿಗೆ ಗೌರವ ಸಲ್ಲಿಸಿದಂತ್ತಾಗುತ್ತದೆಂದು ಹೇಳುತ್ತಾ ಅವರು ಬರೆದ ಭಾಷಣ,ಬರಹದ ಪುಸ್ತಕಗಳ ವಿಷಯಗಳ ಬಗ್ಗೆ ಮನನ ಮಾಡಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಮಹದೇವ ಸ್ವಾಮಿ,ಖಜಾಂಚಿ ಸೋಸ್ಲೆ ನಾಗೇಶ್,ಸಂಚಾಲಕ ನಾಗ್ರಾಜ್ಉತ್ತಂಬಳ್ಳಿ,ಸಂಘಟಕ ನಾರಾಯಣಮೂರ್ತಿ,ರಾಜಪ್ಪ,ಮುರುಳೀಧರ್,ಮಹೇಶ್ ಮೂರ್ತಿ,ಮಹದೇವಸ್ವಾಮಿ,ಮಂಜು ನಾಥ್,ನಾಗೇಂದ್ರ,ಪ್ರಸನ್ನ,ಸಿದ್ದರಾಜು,ಮೂಲನಿವಾಸಿಗಳ ಸಂಘಟನಾ ಸಂಚಾಲಕ ಮಹದೇವ್ ಕುಮಾರ್ ಮಣಗಳ್ಳಿ ಸೇರಿದಂತೆ ಪೋಷಕರು ಹಾಜರಿದ್ದರು.

Leave a Reply

Your email address will not be published. Required fields are marked *