ಪ್ರತಾಪ್ ಸಿಂಹ ನನ್ನ ವಿರುದ್ದ ಮಾನಹಾನಿ ಕೇಸ್ ಹಾಕಿದ್ದಾರೆ:ಲಕ್ಷ್ಮಣ್

 

ಮೈಸೂರು:13 ಆಗಸ್ಟ್ 2021
ನ@ದಿನಿ

ಸಂಸದ ಪ್ರತಾಪ್ ಸಿಂಹ ನನ್ನ ವಿರುದ್ಧ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಮಾನಹಾನಿ ಕೇಸ್ ಹಾಕಿ ಪೊಲೀಸಿನವರ ಮೂಲಕ ಧಮ್ಕಿ ಹಾಕುತ್ತಿದ್ದಾರೆ ಎಂದು
ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ತಿಳಿಸಿದರು.

ಸ್ಟೆಪ್ ಡೌನ್ ಆಸ್ಪತ್ರೆ ಎರಡು ತಿಂಗಳ ಹಿಂದೆ ಸುದ್ದಿಗೋಷ್ಠಿ ನಡೆಸಿದ್ದೆ.ರೋಹಿಣಿ ಸಿಂಧೂರಿ ಡಿಸಿ ಆಗಿದ್ದಾಗ 16ಕೋವಿಡ್ ಸೆಂಟರ್ ಬಂದ್ ಆಗಿದ್ವು.
ಖಾಸಗಿ ಹೋಟೆಲ್ ಗಳಲ್ಲಿ ಸ್ಪೆಪ್ ಡೌನ್ ಆಸ್ಪತ್ರೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗಿತ್ತು.ಈ ಕೋವಿಡ್ ಸೆಂಟರ್ ಗಳು ಜಿಲ್ಲಾಡಳಿತ ಹಾಗೂ ಸರ್ಕಾರದ ಅನುಮತಿ ಪಡೆಯದೇ ಜನರಿಂದ ಹೆಚ್ಚಿನ ಹಣ ಪಡೆಯುವ ವಿಚಾರವಾಗಿ ಆಸ್ಪತ್ರೆ ಬಂದ್ ಮಾಡಿಸಲಾಗಿತ್ತು.ಆಗಿನ ಡಿಸಿ ರೋಹಿಣಿ ಸಿಂಧೂರಿ ಸ್ಪೆಪ್ ಡೌನ್ ಆಸ್ಪತ್ರೆ ಬಂದ್ ಮಾಡಿದ್ದರು.ಈ ಆಸ್ಪತ್ರೆ ತೆರೆಯಲು ಸಂಸದರ ಕೃಪಾ ಕಟಾಕ್ಷ ಇದೆ ಎಂಬುದನ್ನ ನಾವು ಸಾಬೀತು ಮಾಡಿದ್ದೆವು.
ಈ ವಿಚಾರವಾಗಿ ನನ್ನ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಮೂಲಕ ನನ್ನ ಧ್ವನಿ ಅಡಗಿಸಲು ಮುಂದಾಗಿದ್ದಾರೆ.
ಈ ರೀತಿಯ ರಾಜಕೀಯ ಮಾಡುವವರು ನೀವು ಸಂಸದರಾಗಲು ಯೋಗ್ಯರಾ!
ನಾನೊಬ್ಬ ರಾಷ್ಟ್ರೀಯ ಪಕ್ಷದ ರಾಜ್ಯ ವಕ್ತಾರ.ರಾಜ್ಯದ ವಿರೋಧ ಪಕ್ಷದಲ್ಲಿರುವ ನಾವು ಜನರಿಗೆ ಸತ್ಯ ತಿಳಿಸುತ್ತೇವೆ.ನಾನು ಸಾಕಷ್ಟು ಬಾರಿ ನಿಮಗೆ ಸವಾಲು ಮಾಡಿದ್ದೇನೆ.
ಲಕಳೆದ 7ವರ್ಷದಿಂದ ಕೊಟ್ಟಿರುವ ನಿಮ್ಮ ಕೊಡುಗೆ ಬಗ್ಗೆ ತಿಳಿಸಿ.ನ್ಯಾಷನಲ್ ಹೈವೆ,ಮೇಕೆದಾಟು ಯೋಜನೆ ನಿಮ್ಮ ಕೆಲಸವಾ.!?ನಿಮಗೆ ಧೈರ್ಯ ಇದ್ದರೆ ಚರ್ಚೆಗೆ ಬನ್ನಿ ಎಂದು ಆಹ್ವಾನಿಸಿದ್ದಾರೆ.

ಕಾಂಗ್ರೆಸ್ ಬಗ್ಗೆ ಸಚಿವ ಈಶ್ವರಪ್ಪ ಅವಾಚ್ಯಶಬ್ದ ಬಳಕೆ ವಿಚಾರ.
ಈಶ್ವರಪ್ಪ ಬಿಜೆಪಿ ಮೇಲಿರುವ ಕೋಪವನ್ನ ಕಾಂಗ್ರೆಸ್ ಮೇಲೆ ತೋರುತ್ತಿದ್ದಾರೆ.ಇವರಿಗೇನಾದ್ರೂ ಸಂಸ್ಕೃತಿ, ಕಾಮನ್ಸೆಸ್ಸ್ ಇದೆಯಾ.?ಈಶ್ವರಪ್ಪಗೆ ಮಾನ ಮರ್ಯಾದೆ ಇದೆಯಾ ಎಂಬುದನ್ನ ಮೊದಲು ತಿಳಿಸಿ.
ನಿಮ್ಮ ಮಗ ಕಾಂತೇಶ್ ಬೆಂಗಳೂರಿನ ಪೀಣ್ಯ ಇಂಡಸ್ಟ್ರೀಯಲ್ ನಲ್ಲಿ ಸೈಟ್ ಖರೀದಿಸಿದ್ದಾರೆ.4 ಇಂಡಸ್ಟ್ರಿಯಲ್ ಸೈಟು ಖರೀದಿಸಿದ್ದೀರಿ, ಅದರಲ್ಲಿ ಏನು ಮಾಡ್ತಿದ್ದೀರಿ..?ಒಬ್ಬರಿಗೆ ನಾಲ್ಕು ಸೈಟ್ ಹೇಗೆ ನೀಡ್ತಾರೆ.? ಇದರ ಒಟ್ಟು ಬೆಲೆ ಎಷ್ಟು..?
ಇಡಿ, ಐಟಿ ಯಾಕೆ ಇವರ ಬಗ್ಗೆ ತನಿಖೆ ಮಾಡ್ತಿಲ್ಲ.ಕೇವಲ ಕಾಂಗ್ರೆಸ್ ನಾಯಕರ ಮೇಲೆ ಮಾತ್ರಾ ರೈಡ್ ಮಾಡೋದಾ..!?
ಈ ಬಗ್ಗೆ ನನ್ನ ಬಳಿ ಸಂಪೂರ್ಣ ದಾಖಲಾತಿ ಇದೆ.ಈಶ್ವರಪ್ಪ ಸರ್ಕಾರದ ವ್ಯವಸ್ಥೆ ದುರುಪಯೋಗ ಮಾಡಿಕೊಂಡಿದ್ದಾರೆ.
ನಿಮ್ಮ ಮಗ ಭ್ರಷ್ಟಾಚಾರ ಮಾಡಿದ್ದಾರೆ.ಇದರ ಬಗ್ಗೆ ಇಡಿ ಹಾಗೂ ಐಟಿಗೆ ದೂರು ನೀಡುತ್ತಿದ್ದೇವೆ.ಯಾವ ರೀತಿ ತನಿಖೆ ಮಾಡ್ತಾರೋ ನೋಡ್ತಿವಿ.
ಈಶ್ವರಪ್ಪ ಮೊದಲು ಹುಚ್ಚರ ರೀತಿ ಮಾತಮಾಡೊದನ್ನ ಬಿಡಲಿ.ಈಶ್ವರಪ್ಪ ಮೀರ್ ಸಾದಕ್ ಕೆಲಸ ಮಾಡ್ತಿದ್ದಾರೆ.
ಜನರ ದಿಕ್ಕುತಪ್ಪಿಸಲು ಈ ರೀತಿ ಹೇಳಿಕೆ ನೀಡ್ತಿದ್ದಾರೆ.

ಸಿ.ಟಿ.ರವಿ ಒಬ್ಬ ಕೊಲೆಗಡುಕ
2019ರಲ್ಲಿ ಕುಣಿಗಲ್ ಅತ್ರ ಕಡಿದು ಕಾರು ಚಲಾಯಿಸಿದ್ದ.
ಇಬ್ಬ ವ್ಯಕ್ತಿಯನ್ನ ಕೊಂದು ಹೋಗಿ ಮದ್ರಾಸ್ ನಲ್ಲಿ ಅವಿತುಕೊಂಡಿದ್ದ.
ಇವನು ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುತ್ತಾನೆ.
ಸಿ.ಟಿ.ರವಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಏಕವಚನದಲ್ಲೇ ಹರಿಹಾಯ್ದರು.
ಕೇಂದ್ರ ಬಿಜೆಪಿ ಮೇಕೆದಾಟು ಯೋಜನೆಯಲ್ಲಿ ನಮಗೆ ಮೋಸ ಮಾಡ್ತಿದೆ‌.
ನಾವು ಮೊದಲು ಭಾರತೀಯರು ನಂತರ ಕನ್ನಡಿಗರು ಅಂತ ಸಿ.ಟಿ.ರವಿ ಹೇಳ್ತಿದ್ದಾನೆ.
ಸಿ.ಟಿ.ರವಿಗೆ ನಾಚಿಕೆಯಾಗಬೇಕು.
ಮೇಕೆದಾಟು ವಿಚಾರದಲ್ಲಿ ಬಿಜೆಪಿ ಡಬಲ್ ಸ್ಟ್ಯಾಂಡರ್ಡ್
ಇದರಲ್ಲಿ ನಿಮ್ಮ ನಿಲುವೇನು ಎಂಬುದನ್ನ ತಿಳಿಸಿ.ಇದರಲ್ಲಿ ಬೇಕು ಅಂತಲೇ ಬಿಜೆಪಿ ರಾಜಕೀಯ ಮಾಡ್ತಿದೆ‌.ತಮಿಳುನಾಡಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ.
ಬೆಂಗಳೂರಿನಲ್ಲಿ ಸತೀಸ್ ರೆಡ್ಡಿ ಕಾರಿಗೆ ಬೆಂಕಿ ಹಚ್ಚಿಸಿದ್ದು ಬಿಜೆಪಿಯವ್ರೆ..!
ಬೆಂಗಳೂರಿನಲ್ಲಿ ಬೆಡ್ ಲಾಕ್ ಧಂಧೆ ಮಾಡ್ತಿದ್ದವನು ಸತೀಶ್ ರೆಡ್ಡಿ.ಅದನ್ನ ಬಿಜೆಪಿಯವ್ರೆ ಬಯಲು ಮಾಡಿ ನಾಟಕವಾಡ್ತಿದ್ದಾರೆ.
ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು.ಬೆಂಕಿಹಚ್ಚಿದು ಯಾರು ಅಂತ ಪೊಲೀಸರು ಬಹಿರಂಗ ಪಡಿಸಲಿ ಎಂದು
ಸುದ್ದಿಗೋಷ್ಠಿಯಲ್ಲಿ ಎಂ.ಲಕ್ಷ್ಮಣ್ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *