ಸಿದ್ಧಾರ್ಥ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕರೋನಾ ವಾರಿರ್ಯಸ್ ಗೆ ಅಭಿನಂದನೆ

 

ಮೈಸೂರು:15 ಆಗಸ್ಟ್ 2021

                   75ನೇ ಭಾರತ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸಿದ್ಧಾರ್ಥ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕರೋನಾ ವಾರಿರ್ಯಸ್ ಗಳಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

                   ಕುರುಬರಹಳ್ಳಿ ಜಂಕ್ಷನ್ ಕೆಸಿ ಬಡಾವಣೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾಕ್ಟರ್ಸ್ ಸಿಬ್ಬಂದಿ ವರ್ಗದವರು, ಪೌರಕಾರ್ಮಿಕರು,ಹೆಲ್ತ್ ಸಿಸ್ಟಮ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಚ್ ಶ್ರೀನಿವಾಸ್ ಗೌಡ ,ಛಾಯಾಗ್ರಹಕರಾದ ಮಧುಸೂಧನ್.ಆರ್ ಹಾಗೂ ಶ್ರೀಧರ್ ರವರನ್ನು  ಅಭಿನಂದಿಸಲಾಯಿತು.

                    ಕ್ಲಬ್ಬಿನ ಅಧ್ಯಕ್ಷರಾದ ಸುರೇಶ್ ಗೌಡ ಮಾತನಾಡಿ ಕರೋನ ಹಾವಳಿಯಿಂದ ಕಳೆದೆರಡು ವರ್ಷದ ಕ್ಲಬ್ಬು ಅಪಾರ ನಷ್ಟವನ್ನುಂಟು ಮಾಡುತ್ತಿದೆ ಇದರ ನಡುವೆಯೂ ಜೀವದ ಹಂಗನ್ನು ತೊರೆದು ಕರೋನಾ ಅವೇರ್ನೆಸ್ ವ್ಯಾಕ್ಸಿನ್ ನೀಡುವಲ್ಲಿ ಕುರುಬರಹಳ್ಳಿ ಪಿಯಇ ಆಸ್ಪತ್ರೆಯ ಡಾಕ್ಟರ್ ನವೀನ್ ಮತ್ತು ತಂಡದವರು ಯಶಸ್ವಿ ಇದ್ದಾರೆಂದು ನುಡಿದರು ಬದುಕಿನಲ್ಲಿ ಡಾಕ್ಟರ್ ಗಳ ಪಾತ್ರ ಅಪಾರವಾದುದು ಜೀವದ ಭಯವನ್ನು ಇಟ್ಟುಕೊಂಡಿದ್ದು ಪರರ ಬದುಕಿಗಾಗಿ ಅಪಾರ ಶ್ರಮವಹಿಸಿರುವ ಡಾಕ್ಟರ್ ಮಧು ಸಿಬ್ಬಂದಿಗಳಿಗೆ ನಮ್ಮ ಕ್ಲಬ್ಬು ಈ ಸಂದರ್ಭದಲ್ಲಿ ಅಭಿನಂದಿ ಸಿದೆ ಎಂದರು ಸ್ವಚ್ಛತೆ ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಅಪಾರವಾದುದ್ದು ಕರೋನಾ ಸಾಂಕ್ರಾಮಿಕ ರೋಗ ರುದ್ರಾವತಾರ ವಿದ್ದಾಗ ಪೌರಕಾರ್ಮಿಕರು ಅತ್ಯಂತ ಜವಾಬ್ದಾರಿಯಿಂದ ಮೈಸೂರು ನಗರವನ್ನು ಸ್ವಚ್ಛತೆಯನ್ನು ಕಾಪಾಡಿದ್ದಾರೆ ಎಂದು ಪ್ರಶಂಸಿದರು .

                ಕಾರ್ಯದರ್ಶಿಯಾದ ಬುಲೆಟ್ ನಾಗರಾಜು ಧ್ವಜಾರೋಹಣದಲ್ಲಿ ಭಾಗವಹಿಸಿ ನಮ್ಮ ಕ್ಲಬ್ಬು ಸರ್ಕಾರದ ಕರೋನ ನೀತಿ-ನಿಯಮಗಳನ್ನು ಪಾಲಿಸುವಲ್ಲಿ ಯಶಸ್ವಿಯಾಗಿದೆ ಎಂದರು.

                 ಬಿಲ್ಡಿಂಗ್ ಕಮಿಟಿಯ ಚೇರ್ಮನ್ ಈ ಎಸ್ ನಾಗರಾಜು ಮಾತನಾಡಿ ಪೂರ್ವದಿಕ್ಕಿನಲ್ಲಿ ನಜೀರ್ ಬಾದ್ ಇಂದ ದೇವೇಗೌಡ ಸರ್ಕಲ್ ವರೆಗೂ ಯಾವುದೇ ಇಷ್ಟೊಂದು ಸುಸಜ್ಜಿತವಾದ ಕ್ಲಬ್ ಇರುವುದಿಲ್ಲ ಈ ಕಮಿಟಿಯು ಒಗ್ಗಟ್ಟಿನಿಂದ ಕರ್ತವ್ಯ ನಿರ್ವಹಿಸುತ್ತಿದ್ದು ಹಲವು ಅಭಿವೃದ್ಧಿ ಕೆಲಸವನ್ನು ಮಾಡಿರುತ್ತದೆ ಜೊತೆಗೆ ಕರೋನ ವಿಷಯದಲ್ಲಿ ಸಾರ್ವಜನಿಕ ತಿಳುವಳಿಕೆಯಲ್ಲಿ ಮುಂಚೂಣಿಯಲ್ಲಿರುತ್ತವೆ ಎಂದರು.

                 ನಗರ ಪಾಲಿಕೆ ಮಾಜಿ ಪೌರರಾದ  ಸಂದೇಶ ಸ್ವಾಮಿ ಮಾತನಾಡಿ ಕುರುಬರಹಳ್ಳಿ ಪ್ರಾಥಮಿಕ ಆಸ್ಪತ್ರೆಯ ಡಾಕ್ಟರ್ ನವೀನ್ ಮತ್ತು ಅವರ ಸಿಬ್ಬಂದಿಯ ಶಿಸ್ತುಬದ್ಧ ಸೇವೆಯನ್ನು ಪ್ರಶಂಸಿದರು. ಲಸಿಕೆ ಹಾಕುವಲ್ಲಿ ತಾರತಮ್ಯವಿಲ್ಲದೆ ಈ ಭಾಗದ ಹೆಚ್ಚು ಜನರಿಗೆ ಅನುಕೂಲವನ್ನು ಮಾಡಿಕೊಂಡಿದ್ದಾರೆ.ಕರೋನಾ ಬಗ್ಗೆ ಪತ್ರಿಕೋದ್ಯಮ ಶ್ರಮವಹಿಸಿ ಆಸ್ಪತ್ರೆಗಳಲ್ಲಿ ಓಡಾಡಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬಣ್ಣಿಸಿದರು .

               ಕಾರ್ಯಕ್ರಮದಲ್ಲಿ ಕ್ಲಬ್ಬಿನ ಖಜಾಂಚಿ ಪುಟ್ಟಸ್ವಾಮಿ,ಪದಾಧಿಕಾರಿಗಳಾದ ಎಂಜಿ ನಾಗರಾಜು ,ಲಾವಣ್ಯ, ನಾಗರಾಜು, ಅಶೋಕ್, ಈರಣ್ಣ, ವೆಂಕಟೇಶ್, ಇನ್ನು ಹಲವಾರು ಸದಸ್ಯರುಗಳು ಭಾಗವಹಿಸಿದ್ದರು. 

Leave a Reply

Your email address will not be published. Required fields are marked *