ಮೈಸೂರು:15 ಆಗಸ್ಟ್ 2021
ನ@ದಿನಿ
75 ನೇ ಸ್ವಾತಂತ್ರ್ಯ ದಿನಾಚರಣೆ ದಿನದಂದು ನೂತನವಾಗಿ ಪ್ರಧಾನ ಮಂತ್ರಿ ಜನ ಔಷಧಿ ಕೇಂದ್ರ ಆರಂಭವಾಗಿದೆ.
ಮೈಸೂರು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಗಣ್ಯರು ದೀಪ ಬೆಳಗಿಸಿ,ಟೇಪ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ನಟರಾಜ ಪ್ರತಿಷ್ಠಾನ ಪ್ರಿನ್ಸಿಪಲ್ ನಾಗಮಣಿ ಹಾಗೂ
ಹರ್ಷ ಮಾತನಾಡಿ ಮೊದಲ ಬಾರಿಗೆ ಮೈಸೂರು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಪ್ರಧಾನ ಮಂತ್ರಿ ಜನ ಔಷಧಿ ಕೇಂದ್ರ ಆರಂಭಿಸಿದ್ದೇವೆ.ಬಡವರಿಗೆ ಅನುಕೂಲವಾಗಲೆಂದು ಕೇಂದ್ರ ಆರಂಭವಾಗಿದೆ.ಅತೀ ಕಡಿಮೆ ದರದಲ್ಲಿ ಔಷಧೀ ಸಿಗಲಿದೆ.ಮನೆಯ ಬಾಗಿಲಿಗೆ ಅಗತ್ಯ ಔಷಧಿ ತಲುಪಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಜನರು ಸದುಪಯೋಗಪಡಿಸಿಕೊಳ್ಳಿ ಎಂದು ಮನವಿ ಮಾಡಿದರು.