ಜೂ.20ಕ್ಕೆ ಬೆಂಗಳೂರು ಅರಮನೆ ಮೈದಾನದಲ್ಲಿ ವಿಶ್ವಕರ್ಮ ಸಮಾಜದ ರಾಜ್ಯ ಮಟ್ಟದ ಮುಖಂಡರ ಸಮಾವೇಶ

ನಂದಿನಿ ಮೈಸೂರು

ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜದ ವತಿಯಿಂದ ವಿಶ್ವಕರ್ಮ ಸಮಾಜದ ಮಠಾಧಿಪತಿಗಳ ಹಾಗೂ ಪೀಠಾಧಿಪತಿಗಳ ಸಾರಥ್ಯದಲ್ಲಿ ರಾಜ್ಯ ಮಟ್ಟದ ಮುಖಂಡರ ಸಮಾವೇಶ ಮತ್ತು 1101 ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ರಾಮಚಂದ್ರ ಮಹಾಸ್ವಾಮಿ ಹಾಗೂ ಮಳವಳ್ಳಿ ಶ್ರೀನಿವಾಸ್ ತಿಳಿಸಿದರು.

ಮೈಸೂರಿನ ಜಲದರ್ಶಿನಿಯಲ್ಲಿ ಮಾತನಾಡಿದ ಅವರು ಜೂನ್ 20 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ
ವಿಶ್ವಕರ್ಮ ಸಮುದಾಯದಿಂದ ಇದೇ ಮೊದಲ ಬಾರಿಗೆ ಸಮಾವೇಶ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಸಚಿವರು,ಶಾಸಕರು,ಸ್ಥಳೀಯ ನಾಯಕರು ಭಾಗವಹಿಸಲಿದ್ದಾರೆ.ರಾಜ್ಯದಲ್ಲಿ 45 ಲಕ್ಷ ವಿಶ್ವಕರ್ಮ ಸಮುದಾಯದವರು ವಾಸವಿದ್ದಾರೆ.ನಮ್ಮ ಪಂಚ ಕಸೂಬುಗಳ ಮೂಲಕ ನಾಡಿಗೆ ಮತ್ತು ದೇಶಕ್ಕೆ ಅಪಾರ ಕೊಡುಗೆ ಕೊಟ್ಟಿದ್ದರು ಸಹ ಸ್ವತಂತ್ರ್ಯ ಬಂದು 75 ವರ್ಷಗಳು ಕಳೆದರು ಇಂದಿಗೂ ಸಾಮಾಜಿಕ ನ್ಯಾಯದಿಂದ ವಂಚಿತರಾಗಿ ಶಿಕ್ಷಣ, ಉದ್ಯೋಗ,ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಹಿಂದುಳಿದಿದ್ದು ಸಾಕಾಗಿದೆ.ಆದ್ದರಿಂದ ಸಮಾವೇಶದ ಮೂಲಕ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಿದ್ದೇವೆ ಎಂದರು.ಮುಂದುವೆರೆದು ಮಾತನಾಡಿ ಶಿಲ್ಪಿ ಅರುಣ್ ಯೋಗಿ ಸೇರಿದಂತೆ ಸಾಧಕರಿಗೆ ಸಮಾವೇಶದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.ರಾಜ್ಯದಲ್ಲಿ ಸಾವಿರಾರು ಜನರು ಭಾಗವಹಿಸುವ ನಿರೀಕ್ಷೇ ಇದೆ.ನೀವು ಬನ್ನಿ ನಿಮ್ಮವರನ್ನ ಕರೆತನ್ನಿ ಎಂದು ವಿಶ್ವಕರ್ಮ ಸಮುದಾಯದವರಿಗೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ
ಮಹೇಂದ್ರ ಮಹಾಸ್ವಾಮಿ,ಪಂಪಾಪತಿ ಮಹಾಸ್ವಾಮಿ,ಮಳವಳ್ಳಿ ಶ್ರೀನಿವಾಸ್,ವಸಂತ ಮುರಳಿ,ನಂದಕುಮಾರ್,ಮೊಗಣ್ಣಚಾರ್,ಗುರು ವಿಶ್ವಕರ್ಮ, ಗುಂಡುರಾವ್ ನಾಗರಾಜು,ಹೆಬ್ಬಾಳು ಸಿದ್ದಪ್ಪಾಜಿ,ಗಾಯತ್ರಿ ಚಂದ್ರಶೇಖರ್,ಗಿರೀಶ್,ಗೋವಿಂದಮ್ಮ,ಆಶಾ ಉಮೇಶ್ ಗುರೂಜಿ ಹಾಜರಿದ್ದರು.

Leave a Reply

Your email address will not be published. Required fields are marked *