ನಟ ದರ್ಶನ್ ಅಂಡ್ ಗ್ಯಾಂಗ್ ನಿಂದ ಹತ್ಯೆಯಾದ ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವಾನ ಹೇಳಿ ಪರಿಹಾರ ನೀಡಿದ ಮೈಸೂರಿನ ಜನರು

ನಂದಿನಿ ಮೈಸೂರು

ಬೆಂಗಳೂರಿನಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ನಿಂದ ಹತ್ಯೆಯಾದ ರೇಣುಕಾಸ್ವಾಮಿ ಕುಟುಂಬಕ್ಕೆ ಮೈಸೂರಿನ ಜನರು ಸಾಂತ್ವಾನ ಹೇಳಿ ಪರಿಹಾರ ನೀಡಿದ್ದಾರೆ.

ಅಶೋಕ ರೋಡ್ ನಲ್ಲಿರುವ
ಶ್ರೀ ರವಿ ಜುವೆಲೆರಿ ಅಂಡ್ ಜೆಮ್ಸ್ ಮಾಲೀಕರಾದ ರವಿ ಪ್ರಕಾಶ್ , ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಘಟಕದ ನಿಕಟಪೂರ್ವ ಅಧ್ಯಕ್ಷರ ಗೆಜ್ಜಗಳ್ಳಿ ಮಹೇಶ್,ಚಿನ್ನ ಬೆಳ್ಳಿ ವ್ಯಾಪಾರಿ ರಾಘವೇಂದ್ರ ಶೇಠ್, ಲಯನ್ ಟಿ ಸುರೇಶ್ ಗೋಲ್ಡ್ ,ಗುರು ಡೈಮಂಡ್ಸ್ ಸ್ನೇಹಿತರು ಎಲ್ಲರೂ ಕೂಡಿ ಶನಿವಾರ ಬೆಳಗ್ಗೆ ಮೈಸೂರಿನಿಂದ ಚಿತ್ರದುರ್ಗಕ್ಕೆ ಹೊರಟು ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು.ತದ ನಂತರ
60 ಸಾವಿರ ಪರಿಹಾರದ ಚೆಕ್ ನೀಡಿದರು.

ಚಿತ್ರದುರ್ಗದ ನಿವಾಸಿ ರೇಣುಕಾಸ್ವಾಮಿ ಕುಟುಂಬಕ್ಕೆ ಪರಿಹಾರ ನೀಡಿದ್ದು ಆರ್ಥಿಕ ಪರಿಹಾರ ನೀಡಿ ಸಾಂತ್ವಾನ ಮಾಡಿದವರಲ್ಲಿ ಮೈಸೂರಿನವರೇ ಮೊದಲಿಗರಾಗಿದ್ದಾರೆ. ತದನಂತರ ಸ್ಥಳೀಯ ಶಾಸಕರು,ಕರ್ನಾಟಕ ರಾಜ್ಯ ವಾಣಿಜ್ಯ ಮಂಡಳಿ ಹಾಗೂ ಇತರರು ಪರಿಹಾರ ಮಾಡಲು ಮುಂದೆ ಬಂದಿದ್ದಾರೆ. ಚಿತ್ರದುರ್ಗದ ವಕೀಲರ ಸ್ನೇಹ ಬಳಗ ಮೈಸೂರಿನಿಂದ ಬಂದು ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವಾನ,ಪರಿಹಾರ ನೀಡಿದ್ದಕ್ಕೆ ವಕೀಲರೂ ತಮ್ಮ ಕಚೇರಿಗೆ ಆಹ್ವಾನಿಸಿ ಸನ್ಮಾನಿಸಿದ್ದಾರೆ. ಮೈಸೂರಿನ ಜನತೆಗೆ ಬಗ್ಗೆ
ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸುದ್ದಿಗೋಷ್ಠಿಯಲ್ಲಿ ರಾಜಮಾರ್ಗ ಹೋಟೆಲ್ ಮಾಲೀಕರು ಸಿದ್ದರಾಜು , ಮಹೇಶ್ ಯಾದವ್ ಹಾಜರಿದ್ದರು.

Leave a Reply

Your email address will not be published. Required fields are marked *