ನಂದಿನಿ ಮೈಸೂರು
*ಭಾಷ್ಯಂ ಸ್ವಾಮೀಜಿಗಳ ಸಂಕಲ್ಪದಂತೆ ಹೊಸ ವರ್ಷಕ್ಕೆ 2 ಲಕ್ಷ ಲಡ್ಡು ವಿತರಣೆ*
*1994 ರಿಂದ ಸಂಕಲ್ಪದಂತೆ ಯೋಗನರಸಿಂಹಸ್ವಾಮಿ ದೇವಾಲಯದಲ್ಲಿ 2 ಲಕ್ಷ ವಿಶೇಷ ಲಡ್ಡು ತಯಾರಿ.
*2 ಕೆಜಿ ತೂಕದ 10 ಸಾವಿರ ,150 ಗ್ರಾಂ ತೂಕದ 2 ಲಕ್ಷ ಲಡ್ಡು ತಯಾರಿ*
*ಆಡಳಿತಾಧಿಕಾರಿ ಶ್ರೀನಿವಾಸ್ ಉಸ್ತುವಾರಿಯಲ್ಲಿ ನುರಿತ 60 ಬಾಣಸಿಗರಿಂದ
ಲಡ್ಡು ತಯಾರಿ*
ಸಾಲೂ ಸಾಲಾಗಿ ಜೋಡಿಸಿರುವ ಎರಡು ಕೆಜಿ ತೂಕದ ಲಡ್ಡುಗಳು ಒಂದು ಕಡೆಯಾದರೇ ಮತ್ತೊಂದು ಕಡೆ 150 ಗ್ರಾಂ ತೂಕದ ಲಡ್ಡು ತಯಾರಿಯಲ್ಲಿ ತೊಡಗಿರುವ ಬಾಣಸಿಗರು.ಅಯ್ಯೋ ಇಷ್ಟೋಂದು ಲಡ್ಡು ತಯಾರಿಸುತ್ತಿರೋದಾದ್ರೂ ಯಾಕೆ ಅಂತೀರಾ ಈ ವಿಡಿಯೋ ನೋಡಿ.
ಲಡ್ಡು ಅಂದ್ರೇ ನೆನಪಾಗೋದು ತಿರುಪತಿ ತಿಮ್ಮಪ್ಪನ ಲಡ್ಡು.ಹೊಸ ವರ್ಷಕ್ಕೆ ಭಕ್ತಾದಿಗಳಿಗೆ 2 ಲಕ್ಷ ಲಡ್ಡು ವಿತರಿಸಲು ಮೈಸೂರಿನ ವಿಜಯನಗರದಲ್ಲಿರುವ ಶ್ರೀ ಯೋಗಾನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಸಿದ್ದತೆ ಭರದಿಂದ ಸಾಗಿದೆ.
ದೇವಸ್ಥಾನದ ಸಂಸ್ಥಾಪಕರಾದ ಶ್ರೀ ಭಾಷ್ಯಂ ಸ್ವಾಮೀಜಿ ನೇತೃತ್ವದಲ್ಲಿ ಸಿದ್ದತಾ ಕಾರ್ಯ ನೆರವೇರುತ್ತಿದೆ.ಸುಮಾರು 60 ಕ್ಕೂ ಹೆಚ್ಚು ಬಾಣಸಿಗರು ಸಿದ್ದತಾ ಕಾರ್ಯದಲ್ಲಿ ತೊಡಗಿದ್ದಾರೆ.
1994 ರಲ್ಲಿ ಒಂದು ಸಾವಿರ ಲಡ್ಡು ವಿತರಣೆಯಿಂದ ಪ್ರಾರಂಭವಾದ ಈ ಕೈಂಕರ್ಯ ಇಂದು 2 ಲಕ್ಷ ಲಡ್ಡು ವಿತರಿಸುವ ಹಂತಕ್ಕೆ ಮುಟ್ಟಿದೆ.
ಹೊಸ ವರ್ಷದಂದು ಮುಂಜಾನೆ ಸುಮಾರು 4 ಗಂಟೆಗೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಪ್ರಸಾದವಾಗಿ ಲಡ್ಡು ವಿತರಣೆ ಆರಂಭವಾಗಲಿದೆ.2 ಕೆಜಿ ತೂಕದ 10 ಸಾವಿರ ಲಡ್ಡುಗಳು,150 ಗ್ರಾಂ ತೂಕದ ಎರಡು ಲಕ್ಷ ಲಡ್ಡುಗಳು ತಯಾರಾಗುತ್ತಿದೆ.
ಲಡ್ಡು ತಯಾರಿಕೆಗೆ ಬಳಸಿದ ಆಹಾರ ಸಾಮಗ್ರಿಗಳು ಇಂತಿವೆ.
ಲಡ್ಡು ತಯಾರಿಕೆಗೆ 75 ಕ್ವಿಂಟಾಲ್ ಕಡ್ಲೆಹಿಟ್ಟು, 200 ಕೆಜಿ ಸಕ್ಕರೆ,6000 ಲೀಟರ್ ಖಾದ್ಯ ತೈಲ,200 ಕೆಜಿ ಗೋಡಂಬಿ,200 ಕೆಜಿ ಒಣದ್ರಾಕ್ಷಿ,100 ಕೆಜಿ ಬಾದಾಮಿ,500 ಕೆಜಿ ಡೈಮಂಡ್ ಸಕ್ಕರೆ,1000 ಕೆಜಿ ಬೂರಾ ಸಕ್ಕರೆ,20 ಕೆಜಿ ಪಿಸ್ತಾ,50 ಕೆಜಿ ಏಲಕ್ಕಿ,10 ಕೆಜಿ ಪಚ್ಚ ಕರ್ಪೂರ,100 ಕೆಜಿ ಲವಂಗ ಬಳಸಲಾಗಿದೆ.ಜನವರಿ 1 ರ ಮುಂಜಾನೆ ದೇವರಿಗೆ ವಿಶೇಷ ಪೂಜೆ ನೆರವೇರಿದ ನಂತರ ಲಡ್ಡು ವಿತರಣೆಯಾಗಲಿದೆ.ರಾತ್ರಿ ವರೆಗೂ ಪ್ರಸಾದ ವಿತರಿಸಲಾಗುತ್ತದೆ ಎಲ್ಲರೂ ದೇವರ ದರ್ಶನ ಪಡೆದು ಲಡ್ಡು ಸ್ವೀಕರಿಸುವಂತೆ ಮನವಿ ಮಾಡಿದರು.
ಆಡಳಿತಾಧಿಕಾರಿ ಶ್ರೀನಿವಾಸ್ ಉಸ್ತುವಾರಿಯಲ್ಲಿ ಲಡ್ಡು ತಯಾರಿಕಾ ನಿರ್ವಹಣೆ ಸಾಗುತ್ತಿದ್ದು ನಂತರ ಮಾತನಾಡಿದ ಅವರು ಶ್ರೀಯೋಗನರಸಿಂಹಸ್ವಾಮಿ ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಎರಡು ಲಕ್ಷ ಲಡ್ಡು ವಿತರಣೆ ಸಂಕಲ್ಪ ಮಾಡಿದ್ದೇವೆ.ಅದರಂತೆ ಬಾಣಸೀಗರಿಂದ ಲಡ್ಡು ಸಿದ್ದತೆ ನಡೆಯುತ್ತಿದೆ.ಚಾಮರಾಜನಗರದ ಕಿಚ್ಚುಗುತ್ತ್ ಮಾರಮ್ಮ ದೇವಸ್ಥಾನದಲ್ಲಿ ನಡೆದ ಘಟನೆಯಿಂದ ಭಕ್ತರಲ್ಲಿ ಇಂದಿಗೂ ಆತಂಕ ಇದೆ.ಆದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮೈಸೂರು ಮಹಾನಗರ ಪಾಲಿಕೆ ಲಡ್ಡುಗಳನ್ನ ಪರಿಶೀಲನೆ ಮಾಡಿ ತೆರಳಿದ್ದಾರೆ.ಯಾವುದೇ ಅಹಿತಕರ ಘಟನೆ ನಡೆಯದಂತೆ ಪೋಲಿಸ್ ಬಂದೋಬಸ್ತ್ ಮಾಡಲಾಗುತ್ತಿದೆ.ಮಹಿಳೆಯರಿಗೆ,ಪುರುಷರಿಗೆ,ಅಂಗವಿಕಲರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಕೊರೋನಾ
ನಾಲ್ಕನೇ ಅಲೆ ಭೀತಿ ಇರುಯುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಧರಿಸುವಂತೆ ಭಕ್ತರಿಗೆ ಮನವಿ ಮಾಡಿದರು.