ಮೈಸೂರು:19 ಮಾರ್ಚ್ 2022
ನಂದಿನಿ ಮೈಸೂರು
ಮಾರ್ಚ್ 22 ರಿಂದ ಏಪ್ರಿಲ್ 4 ರವರೆಗೆ ಜೆಎಸ್‌ಎಸ್ ಮೈಸೂರು ಅರ್ಬನ್ ಹಾತ್‌ನಲ್ಲಿ ವಿಶೇಷ ಕೈಮಗ್ಗ ಮೇಳ – ಸಂಸ್ಕೃತಿ -2022 ‘ ಮತ್ತು ಕರಕುಶಲ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ ಎಂದು ಮಹಾದೇವಸ್ವಾಮಿ ತಿಳಿಸಿದರು.
ಜವಳಿ ಅಭಿವೃದ್ಧಿ ಆಯುಕ್ತರು ( ಕೈಮಗ್ಗ ) ಜವಳಿ ಮಂತ್ರಾಲಯ , ನವದೆಹಲಿ ಇವರ ಸಹಯೋಗದೊಂದಿಗೆ ಜವಳಿ ಅಭಿವೃದ್ಧಿ, ಕೈಮಗ್ಗ ಮತ್ತು ಜವಳಿ ಇಲಾಖೆ , ಸಹಕಾರಿ ಕೈಮಗ್ಗ ನೇಕಾರರ ಮಹಾಮಂಡಳಿ ನಿಯಮಿತ ಇವರುಗಳ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ 22 ರಿಂದ ಏಪ್ರಿಲ್ 4 ರವರೆಗೆ
ಈ ವಿಶೇಷ ಕೈಮಗ್ಗ ಮೇಳ ನಡೆಯಲಿದೆ.ಮಾ 22 ರಂದು ಅರ್ಬನ್ ಹಾತ್ ನಲ್ಲಿ ಮೇಳ ಉದ್ಘಾಟನೆಗೊಳ್ಳಲಿದೆ.
ವಿಶೇಷ ಕೈಮಗ್ಗ ಮೇಳದಲ್ಲಿ ಉತ್ತರ ಭಾರತದ ಮಧ್ಯ ಪ್ರದೇಶ , ಉತ್ತರ ಪ್ರದೇಶ ಮತ್ತು ದಕ್ಷಿಣ ಭಾರತದ ಪ್ರದೇಶ ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳ ಕೈಮಗ್ಗ ನೇಕಾರ ಸಹಕಾರಿ ಸಂಘಗಳಲ್ಲಿ ಕೈಮಗ್ಗ ನೇಕಾರರು ತಯಾರಿಸಿದ ರೇಷ್ಮೆ , ಹತ್ತಿ ಮತ್ತು ಉಣ್ಣೆ ಹಾಗೂ ವಿವಿಧ ಮಿಶ್ರಿತ ನೂಲುಗಳಿಂದ ತಯಾರಿಸಲಾದ ಕೈಮಗ್ಗ ಉತ್ಪನ್ನಗಳನ್ನು ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಲಾಗಿದೆ .
ಮೇಳದಲ್ಲಿ ಪ್ರದರ್ಶನಗೊಳ್ಳುತ್ತಿರುವ ಉತ್ಪನ್ನಗಳು : ರೇಷ್ಮೆ ಸೀರೆ , ಮೊಳಕಾಲೂರು ಸೀರೆ , ಇಳಕಲ್ ಸೀರೆ , ಕಸೂತಿ ಸೀರೆ , ತಮಿಳುನಾಡಿನ ಬಾಜವರ ಸೀರೆ , ಬಿಹಾರದ ತಪರ್ ಸೀರೆ , ಕಾಂತ ಸೀರೆ , ವಿಲಚುರಿ ಸೀರೆ , ಬುಟಿಕ್ ಸೀರೆ , ಪಶ್ಚಿಮಬಂಗಾಳದ ಬೆಂಗಾಲಿ ಕಾಟನ್ ಸೀರೆ , ಉತ್ತರಪ್ರದೇಶದ ಬನಾರಸ್ ಸೀರೆ , ಚಿಕನ್ ಎಂಬ್ರಾಯ್ಡರಿ ಸೀರೆ , ಮಧ್ಯಪ್ರದೇಶದ ಚಂದೇರಿ , ಮಹೇಶ್ವರಿ ಸೀರೆ , ಒರಿಸ್ಸಾ ರಾಜ್ಯದ ಸಂಬಲ್‌ಪುರಿ ಸೀರೆ , ಇಕ್ಕಟ್ , ಬೊಂಕಾಯಿ ಸೀರೆ , ಶಾಶ್ಮೀರ ರಾಜ್ಯದ ಪಶ್ಮಿನಾ ಶಾಲ್ , ಆಂದ್ರಪ್ರದೇಶದ ಗೊಡ್ ವಾಲ್ ರೇಷ್ಮೆ ಸೀರೆ , ಕಲ್ಮಕಾರಿ ಸೀರೆ , ಪೊಚಂಪಲ್ಲಿ ಸೀರೆಗಳು ಮತ್ತು ಮಧುರೈ ಜೈ ಅಂಡ್ ಡ್ಯ , ಗುಜರಾತ್ ರಾಜ್ಯದ ಪಟೇಲ ರೇಷ್ಮೆ ಸೀರೆಗಳು ಇತರೆ ಎಲ್ಲಾ ರಾಜ್ಯದ ರೇಷ್ಮೆ ಹಾಗೂ ಕಾಟನ್ ಸೀರೆಗಳು , ನೈಸ್ ಮೆಟೀರಿಯಲ್‌ಗಳು , ಕಸೂತಿ ವಸ್ತ್ರಗಳು , ಟವಲ್‌ಗಳು , ಮೇಲು ಹಾಸು ಮತ್ತು ಹೊದಿಕೆಗಳು , ನೆಲಹಾಸು ಮತ್ತು ಇತರೆ ಕೈಮಗ್ಗ ಉತ್ಪನ್ನಗಳು ಒಂದೇ ಸೂರಿನಡಿ ದೊರೆಯುತ್ತವೆ.ಕೋವಿಡ್ ಹಿನ್ನಲೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.ಸಾರ್ವಜನಿಕರು ಮೇಳಕ್ಕೆ ಆಗಮಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ಶಿವನಂಜಸ್ವಾಮಿ,ಸುನೀಲ್ ಕುಮಾರ್ ಹಾಜರಿದ್ದರು.