ಸರ್ಕಾರಿ ನೌಕರರ ರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಿಗೆ ಸಹಾಯ ಹಸ್ತ

ಮೈಸೂರು:19 ಮಾರ್ಚ್ 2022

ನಂದಿನಿ ಮೈಸೂರು

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಷ್ಟ್ರೀಯ ಮಟ್ಟದ ಕಬ್ಬಡ್ಡಿ ಮತ್ತು ಅಟ್ಲೇಟಿಕ್ಸ್ ಕ್ರೀಡಾಕೂಟ ನಡೆಯುತ್ತಿದ್ದು ಜಿಲ್ಲೆಯಿಂದ ಆಯ್ಕೆಯಾದ ಕ್ರೀಡಾಪಟುಗಳಿಗೆ ಮೈಸೂರಿನ ಸರ್ಕಾರಿ ನೌಕರರ ಸಂಘ ಹಾಗೂ ಮಾಲಂಗಿ ಸುರೇಶ್ ಸ್ನೇಹಿತರಾದ ಪ್ರವೀಣ್ ಬಿಲ್ಡರ್ಸ್ ರವರು ಇಂದು ಕ್ರೀಡಾಪಟುಗಳಿಗೆ
ಸಹಾಯ ಧನಕ್ಕೆ ಮುಂದಾಗಿದ್ದಾರೆ.

ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗೋವಿಂದರಾಜು ರವರು ಕ್ಯಾಪ್ಟನ್ ಪ್ರೀತಿರವರಿಗೆ 30 ಸಾವಿರ ರೂಗಳನ್ನ ಹಸ್ತಾಂತರಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು
ಹರಿಯಾಣದಲ್ಲಿ ಮಾ. 28 ರಿಂದ ನಾಲ್ಕು ದಿನ ಕಾಲ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ನಡೆಯುತ್ತಿದೆ.ಮೈಸೂರು
ಜಿಲ್ಲೆಯಿಂದ ಆಯ್ಕೆಯಾದ
ಪ್ರೀತಿ ಮತ್ತು ತಂಡ,ಸರೋಜಾ ಮತ್ತು ತಂಡ
ಅಯ್ಯಪ್ಪ ಸೇರಿದಂತೆ ಇನ್ನೂ ಹಲವರು ತೆರಳುತ್ತಿದ್ದಾರೆ.ಕ್ರೀಡಾಪಟುಗಳಿಗೆ ಅಲ್ಲಿ ಸರಿಯಾದ ವ್ಯವಸ್ಥೆ ಸಿಗೋದಿಲ್ಲ.ಆಗಾಗಿ ನಮ್ಮ ಸಂಘದ ಪದಾಧಿಕಾರಿಗಳು, ಸದಸ್ಯರು,ಬಿಲ್ಡರ್ ಪ್ರವೀಣ್ ಹಣ ನೀಡಿದ್ದಾರೆ.ಅದನ್ನ ಸಂಗ್ರಹಿಸಿ ಹಣದ ಅವಶ್ಯಕತೆ ಇರುವ ತಂಡಗಳಿಗೆ ಸಹಾಯ ಮಾಡುತ್ತಿದ್ದೇವೆ.ಅದಲ್ಲದೇ
ಟ್ರ್ಯಾಕ್ ಸೂಟ್ ವ್ಯವಸ್ಥೆ ಮಾಡಲು ಮುಂದಾಗಿದ್ದೇವೆ. ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ನಮ್ಮ ತಂಡ ಗೆದ್ದುಬರಲಿ ಎಂದು ಕ್ರೀಡಾ ತಂಡಗಳಿಗೆ ಶುಭಕೋರಿದರು.

ಇದೇ ಸಂದರ್ಭದಲ್ಲಿ
ರೇವಣ್ಣ,ವರದನಾಯಕ,ರಮೇಶ್,ಆನಂದ್,
ಶೈಲಶ್ರೀ,ವಸಂತ,ಸುನಂದ,ಶಿಲ್ಪಶ್ರಿ,ಅನುಪಮ ಹಾಗೂ ವಾಣಿ ಹಾಜರಿದ್ದರು.

Leave a Reply

Your email address will not be published. Required fields are marked *