ಮೈಸೂರು:19 ಮಾರ್ಚ್ 2022
ನಂದಿನಿ ಮೈಸೂರು
ಸಿಂಡಿಕೇಟ್ ನಿಂದ ಕುಲಪತಿಗಳಿಗೆ ದತ್ತವಾದ ಅಧಿಕಾರಕ್ಕನುಗುಣವಾಗಿ ಮತ್ತು ಪರೀಕ್ಷಾ ಮಂಡಳಿಯ ಶಿಫಾರಸಿನ ಮೇರೆಗೆ ಡಾ.ದಯಾನಂದ ಮಾನೆ ಮಾರ್ಗದರ್ಶನದಲ್ಲಿ ರಮ್ಯಾ ವೈ ಎನ್ ಅವರು ಸಂಶೋಧನೆ ನಡೆಸಿ ಸಾದರಪಡಿಸಿದ ‘Political Dynamism and Development Administration of Shri D.K.Shivakumar ; An Analysis’ ಎಂಬ ಮಹಾಪ್ರಬಂಧವನ್ನು ಸಾರ್ವಜನಿಕ ಆಡಳಿತದ ವಿಷಯದಲ್ಲಿ ಪಿಹೆಚ್ ಡಿ ಪದವಿಗಾಗಿ 2017 ಮೈಸೂರು ವಿವಿಯ ಪಿಹೆಚ್ ಡಿ ನಿಯಮಾವಳಿಗಳಡಿಯಲ್ಲಿ ಅಂಗೀಕರಿಸಲಾಗಿದೆ.
ರಮ್ಯಾ ವೈ ಎನ್ ಅವರು ಪ್ರಬಂಧವನ್ನು ಆಂಗ್ಲ ಭಾಷೆಯಲ್ಲಿ ಸಿದ್ಧಪಡಿಸಿರುತ್ತಾರೆ. ಪಿಹೆಚ್ ಡಿ ಪದವಿಯನ್ನು ಮುಂದೆ ನಡೆಯುವ ವಾರ್ಷಿಕ ಘಟಿಕೋತ್ಸವದಲ್ಲಿ ಪಡೆಯಬಹುದಾಗಿದೆ ಎಂದು ಪರೀಕ್ಷಾಂಗ ಕುಲಸಚಿವ ಪ್ರೊ.ಎ. ಪಿ.ಜ್ಞಾನಪ್ರಕಾಶ್ ತಿಳಿಸಿದ್ದಾರೆ.