ಮೈಸೂರು:19 ಮಾರ್ಚ್ 2022
ನಂದಿನಿ ಮೈಸೂರು
ಏರ್ ಇಂಡಿಯಾ ೯೦೮ ರಲ್ಲಿ
ವಿಮಾನದ ಪ್ರಯಾಣದಲ್ಲಿ ಸುಮಾರು ೬೦ ಜನ ಕೂದಳೆಲೆ ಅಂತರದಲ್ಲಿ ಪ್ರಾಣ ಉಳಿಸಿಕೊಂಡಿದ್ದಾರೆ.
ಇಂದು ಮಧ್ಯಾಹ್ನ ಕೊಚ್ಚಿನಿಂದ ಮೈಸೂರಿಗೆ ಬರುತ್ತಿದ್ದ ವಿಮಾನ ಮೋಡಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೈಸೂರಿನ ವಿನಯ್ ಸೇರಿ ಸುಮಾರು ೬೦ ಜನ ಪ್ರಯಾಣಿಸುತ್ತಿದ್ರು.
ವಿಮಾನದಲ್ಲಿ ಮೈಸೂರಿಗೆ ಪ್ರಯಾಣಿಸುತ್ತಿದ್ದ ಮೈಸೂರಿನ ಶಾರದ ದೇವಿ ನಗರದ ನಿವಾಸಿ ವಿನಯ್ ಅರಸ್ ಫಟನೆ ಬಗ್ಗೆ ವಿವರಿಸಿದ್ದಾರೆ. ನಾನು ಕೊಚ್ಚಿನ್ ಯಿಂದ ಮೈಸೂರಿಗೆ ಏರ್ ಇಂಡಿಯಾ ೯೦೮ ರಲ್ಲಿ ಪ್ರಯಾಣ ಮಾಡುತ್ತಿದ್ದೆ ಮಧ್ಯದಲ್ಲಿ ವಿಮಾನ ಬಾರಿಗಾತ್ರದ ಮೋಡಕ್ಕೆ ಡಿಕ್ಕಿ ಹೊಡೆದಂತಾಯಿತು.ಹಲವಾರು ಪ್ರಯಾಣಿಕರ ಸೀಟ್ ಬೆಲ್ಟ್ ಕೂಡ ಕಿತ್ತು ಹೊರಬಂದವು. ಒಮ್ಮೆಲೆ ಎಲ್ಲಾರೂ ಚಿರ ತೊಡಗಿದರು .ನನ್ನ ಜೀವನ ಮುಗಿಯಿತು ಎಂದು ಭಾವಿಸಿದ್ದೇ. ಆದರೆ ತಾಯಿ ಚಾಮುಂಡೇಶ್ವರಿ ನನ್ನ ಉಳಿಸಿದ್ದಾಳೆ ಎಂದು ತಮ್ಮ ದಿಗಿಲನ್ನು ಹೊರಹಾಕಿದ್ದಾರೆ.