ವಿಶೇಷ ಚೇತನರನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಜನಧ್ವನಿ ಸಮುದಾಯ ಬಾನುಲಿ ಕೇಂದ್ರದಲ್ಲಿ ನೇರ ಫೋನ್ ಇನ್ ಕಾರ್ಯಕ್ರಮ

ಸರಗೂರು:16 ಫೆಬ್ರವರಿ 2022

ಇಂದು ವಿಶೇಷಚೇತನರಿಗಾಗಿ ಸಮಗ್ರ ಆರೈಕೆ, ಬೆಂಬಲ ಮತ್ತು ಚಿಕಿತ್ಸೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಜನಧ್ವನಿ ಸಮುದಾಯ ಬಾನುಲಿ ಕೇಂದ್ರದಲ್ಲಿ ವಿಶೇಷ ಚೇತನರನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ನೇರ ಫೋನ್ ಇನ್ ಕಾರ್ಯಕ್ರಮ ಆಯೋಜಿಸಲಾಯಿತು.

ಬಳಿಕ ಎಸ್.ವಿ.ವೈ.ಎಮ್ ನ ಜೀವನಾಧಾರ ಆಯ್ಕೆಗಳು ಮತ್ತು ಸಮನ್ವಯತೆಯ ಸಂಯೋಜಕಿ ಮಮತ ಅವರು ಮಾತನಾಡಿದರು.ವಿಶೇಷ ಚೇತನರನ್ನು ಸಬಲೀಕರಣಗೊಳಿಸುವ ಸಲುವಾಗಿ ತರಬೇತಿ ಮಾಡಲಾಗುತ್ತದೆ.ಹೆಚ್ ಡಿ ಕೋಟೆ ತಾಲೂಕಿನ ಕೆಂಚನಹಳ್ಳಿ ಗ್ರಾಮದಲ್ಲಿ ತರಬೇತಿ ನಡೆಸಲಾಗುತ್ತದೆ.ಒಟ್ಟು 3 ರೀತಿಯಲ್ಲಿ ವಿಶೇಷ ಚೇತನರಿಗೆ ವೃತ್ತಿಪರ ತರಬೇತಿಯನ್ನು ನೀಡಲಾಗುತ್ತಿದೆ.ದಯವಿಟ್ಟು ವಿಶೇಷ ಚೇತನರು ತರಬೇತಿಯನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುವಲ್ಲಿ ಮುಂದಾಗಬೇಕು ಎಂದರು.

ಇದೇ ವೇಳೆ ಸಿ.ಸಿ.ಎಸ್.ಟಿ. ಕಾರ್ಯಕ್ರಮದ ವ್ಯವಸ್ಥಾಪಕರಾದ ಎಂ.ಪಿ. ರಮೇಶ್, ವಿ.ಆರ್.ಎಲ್.ಸಿ ವ್ಯವಸ್ಥಾಪಕ ಪಿ.ಡಿ ನಾಯಕ್ ಹಾಗೂ ಜನಧ್ವನಿ ಸಮುದಾಯ ಬಾನುಲಿ ಕೇಂದ್ರದ ವ್ಯವಸ್ಥಾಪಕ ನಿಂಗರಾಜು ಹಾಗೂ ಇನ್ನಿತರರು ಇದ್ದರು.

ಸಂಜಯ್ ಬೆಳತೂರು ಜೊತೆ ನಂದಿನಿ ಭಾರತ್ ನ್ಯೂಸ್ ಟಿವಿ ಮೈಸೂರು

Leave a Reply

Your email address will not be published. Required fields are marked *