ಸರಗೂರು:16 ಫೆಬ್ರವರಿ 2022
ನುಗು ಡ್ಯಾಂ ಹತ್ತಿರ ಇರುವ ಬೀರ್ವಾಳ್ ನಿಂದ ಮುಳ್ಳೂರು ವರಗೆ ಕಳಪೆ ರಸ್ತೆ ಕಾಮಗಾರಿ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗುತ್ತಿಗೆದಾರ ಕೋತ್ತೆಗಾಲದ ಶಾಂತಮಲ್ಲಪ್ಪ ಅವರು ಕಾಮಗಾರಿಯನ್ನು ಸರಿಯಾದ ರೀತಿಯಲ್ಲಿ ಕೆಲಸ ಮಾಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸಾರ್ವಜನಿಕರು ರಾತ್ರಿ ವೇಳೆ ಈ ಮಾರ್ಗದಲ್ಲಿ ಪ್ರಯಾಣ ಬೆಳೆಸಲು ತುಂಬಾ ಭಯಪಡವ ಪರಿಸ್ಥಿತಿ ನಿರ್ಮಾಣವಾಗಿದೆ.
ಸುಮಾರು 4. 30 ಲಕ್ಷ ವೆಚ್ಚದ ಕಾಮಗಾರಿಯನ್ನು ಸರಿಯಾಗಿ ಮಾಡದೇ ಗುತ್ತಿಗೆದಾರ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿಗೆ ಬಹಳ ಹತ್ತಿರವಿರುವುದರಿಂದ ಬಹುತೇಕ ರೋಗಿಗಳು ಈ ಮಾರ್ಗದ ಮೂಲಕವೇ ಸಂಚಾರ ಮಾಡುತ್ತಿದ್ದರು.
ಬಳಿಕ ಕೋತ್ತೇಗಾಲ ಗ್ರಾಪಂ ಸದಸ್ಯ ಮಹದೇವ ಮಾತನಾಡಿದರು.ಕಳಪೆ ಕಾಮಗಾರಿಯನ್ನು ನಡೆಸಿ ಸರ್ಕಾರಕ್ಕೆ ಹಾಗೂ ಇಲಾಖೆಗೆ ಮೋಸ ಮಾಡಿದ್ದಾರೆ. ಆದ್ದರಿಂದ ಸಂಬಂಧಪಟ್ಟವರು ಇದರ ಬಗ್ಗೆ ತನಿಖೆ ನಡೆಸಬೇಕು ಹಾಗೂ ಕಾಮಗಾರಿಯ ಅನುದಾನವನ್ನು ಬಿಡುಗಡೆ ಮಾಡದಿರುವುದೇ ಸೂಕ್ತ ಎಂದರು.
ಈ ಸಂದರ್ಭದಲ್ಲಿ ರವಿ.ಪುಟ್ಟೇಗೌಡ, ಶಿವರಾಜು.ಬೀರನಾಯಕ.ಮಲ್ಲಿಕಾರ್ಜುನ. ಮಾದಯ್ಯ.ಇನ್ನೂ ಗ್ರಾಮಸ್ಥರು ಭಾಗಿಯಾಗಿದ್ದರು.
ಸಂಜಯ್ ಕೆ ಬೆಳತೂರು ಜೊತೆ ನಂದಿನಿ ಭಾರತ್ ನ್ಯೂಸ್ ಟಿವಿ ಮೈಸೂರು