ಮೈಸೂರು: 12 ಏಪ್ರಿಲ್ 2022
ನಂದಿನಿ ಮೈಸೂರು
ಮಹಾತ್ಮ ಗಾಂಧಿ ಸೇವಾ ಟ್ರಸ್ಟ್ ವತಿಯಿಂದ
ಏ.14 ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನದ ಅಂಗವಾಗಿ
ಮಾನವ ಧರ್ಮ ಶ್ರೇಷ್ಠ ಧರ್ಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಣಿ ಪ್ರಭಾ ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು
ಶ್ರೀ ವಿನಯ್ ಗುರೂಜಿ ಅಶೋಕಪುರಂನ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ವಿಶೇಷ ಆಶೀರ್ವಚನ ನೀಡುವರು.ನಂತರ ಜಯಂತಿ ಅಂಗವಾಗಿ ಪ್ರಾಣಿದತ್ತು ಸ್ವೀಕಾರ ಕಾರ್ಯಕ್ರಮ ನಡೆಯಲಿದ್ದು, ಮಧ್ಯಾಹ್ನ 2ಕ್ಕೆ ಸುತ್ತೂರು ಶಾಖಾ ಮಠದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳನ್ನು ಭೇಟಿ ಮಾಡುವರು. ಸಂಜೆ 4 ಕ್ಕೆ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ದ ಘಟಿಕೋತ್ಸವ ಭವನದಲ್ಲಿ ‘ ಮಾನವ ಧರ್ಮ- ಶ್ರೇಷ್ಠ ಧರ್ಮ’ ವಿಷಯ ಕುರಿತ ವಿಶೇಷ ಪ್ರವಚನ ನಡೆಸಿಕೊಡುವರು.ಕಿಕ್ ಬಾಕ್ಸಿಂಗ್ ನಲ್ಲಿ 12 ಚಿನ್ನದ ಪದಕ ಪಡೆದುಕೊಂಡ ಬಡ ವಿದ್ಯಾರ್ಥಿಗೆ ನೆರವನ್ನು ಸಹ ಗುರೂಜಿಯವರು ಅಂದು ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಸುಮಿತ್ರ, ಷಣ್ಮುಖ, ಮಹಾತ್ಮ ಗಾಂಧಿ ಸೇವಾ ಟ್ರಸ್ಟ್ ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನಿರಿತ್ ಹಾಜರಿದ್ದರು.