ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಬಗ್ಗೆ ತನಿಖೆಗೆ ನಾನೇ ಒತ್ತಾಯಿಸಿದ್ದೇನೆ:ಸಚಿವ ಕೆ.ಎಸ್. ಈಶ್ವರಪ್ಪ

108 Views

ಮೈಸೂರು:12 ಏಪ್ರಿಲ್ 2022

ನಂದಿನಿ ಮೈಸೂರು

ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಅವನು ಬರೆದಿದ್ದಾನೇ ಎನ್ನಲಾದ ಡೆತ್ ನೋಟ್ ನಲ್ಲಿ ಸಿಗ್ನೇಚರ್ ಇಲ್ಲ.
ವಾಟ್ಸಾಪ್ ಮೇಸೆಜ್ ಹರಿದಾಡ್ತಿದೆ.ಆತ್ಮಹತ್ಯೆ
ಬಗ್ಗೆ ತನಿಖೆ ನಡೆಸುವಂತೆ ನಾನೇ ಸಿಎಂ ಗೆ ಒತ್ತಾಯಿಸಿದ್ದೇನೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ರಾಜಿನಾಮೆಗೆ ಆಗ್ರಹಿಸಿದ ಸಿದ್ದರಾಮಯ್ಯ ವಿರುದ್ದ ವಾಗ್ಧಾಳಿ ನಡೆಸಿ ಈಶ್ವರಪ್ಪ ಸಿದ್ದರಾಮಯ್ಯ ಯಾವುದು ಕಾನೂನು ಬದ್ಧ ಇರುವುದು ಮಾಡ್ತಾರೆ? ಎಂದು ಪ್ರಶ್ನಿಸಿದರು.
ನ್ಯಾಯಾಲಯದ ತೀರ್ಪಿನ ವಿರುದ್ದ ಮಾತನಾಡಿದ ಮೊದಲ ವಿಪಕ್ಷ ನಾಯಕ ಸಿದ್ದರಾಮಯ್ಯ.
ಹರ್ಷ, ಚಂದ್ರು ಕೊಲೆ ಬಗ್ಗೆ ಆರೋಪಿಗಳ ಬಂಧನದ ಬಗ್ಗೆ ಮಾತನಾಡಿಲ್ಲ.
ಪರಿಹಾರದ ಹಣ ನೀಡಿದ ವಿಚಾರ ಮಾತನಾಡ್ತಾರೆ.
ಇವರಿಗೆ ಕಾನೂನು ಮೇಲೆ ಗೌರವ ಇಲ್ಲ.
ನಮ್ಮ ಬಗ್ಗೆ ಮಾತನಾಡಲು
ನೈತಿಕತೆ ಇಲ್ಲ‌.

ಕಾಂಗ್ರೆಸ್ ನವರು ಹೇಳಿದ ಪ್ರಕಾರ ಕೇಳಿದ್ರೆ ನೂರು ಬಾರಿ ರಾಜೀನಾಮೆ ನೀಡಬೇಕಿತ್ತು.
ನಾವು ಅವರನ್ನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ.
ನಾನೇ ಘಟನೆ ಬಗ್ಗೆ ತನಿಖೆ ಮಾಡಿ‌ ಎಂದು ಸಿಎಂಗೆ ಒತ್ತಾಯ ಮಾಡಿದ್ದೇನೆ ಎಂದರು.

Leave a Reply

Your email address will not be published. Required fields are marked *