ಡಾ.ರಾಜ್ ಕುಮಾರ್ 16ನೇ ವರ್ಷದ ಪುಣ್ಯಸ್ಮರಣೆ ಪ್ರತಿಮೆಗೆ ಮಾಲಾರ್ಪಣೆ

ಮೈಸೂರು:12 ಏಪ್ರಿಲ್ 2022

ನಂದಿನಿ ಮೈಸೂರು

ವಸ್ತುಪ್ರದರ್ಶನ ಆವರಣದಲ್ಲಿ ಡಾ.ರಾಜ್ ಕುಮಾರ್ ಸೇವಾ ಸಮಿತಿ ಆಯೋಜಿಸಿ ಡಾಕ್ಟರ್ ರಾಜ್ ಕುಮಾರ್ 16ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಡಾಕ್ಟರ್ ರಾಜ್ ಕುಮಾರ್ ತಮ್ಮ ಅಭಿನಯದ ಜತೆಗೆ ಸರಳತೆ ಸಜ್ಜನಿಕೆ ಪ್ರಬುದ್ಧ ನಡೆ ನುಡಿಗಳಿಂದ ನಾಡಿನ 1ತಲೆಮಾರನ್ನೇ ಪ್ರಭಾವಿಸಿದವರು .ಆ ಮೂಲಕ ಕನ್ನಡ ಚಿತ್ರರಂಗಕ್ಕೆ ಅಷ್ಟೇ ಅಲ್ಲ ಕನ್ನಡ ಜಗತ್ತಿಗೆ ವರವಾಗಿ ಬಂದವರು, 50 ವರ್ಷಗಳ ಕಾಲ ಕನ್ನಡ ಭಾಷೆಯ ಸಾಹಿತ್ಯ ಸಂಸ್ಕೃತಿಗೆ ಅಭಿನಯದ ಮೂಲಕ ಜೀವಂತಿಕೆ ತಂದುಕೊಟ್ಟ ಅದ್ವಿತೀಯ ವ್ಯಕ್ತಿ ಡಾಕ್ಟರ್ ರಾಜ್ ಕುಮಾರ್ ಎನ್ನುವುದು ಕನ್ನಡಿಗರಲ್ಲಿ ಸಂಚಲನ ಉಂಟು ಮಾಡುತ್ತದೆ ಎಂದು ಸಾಹಿತ್ಯಲೋಕ ಸಂಸ್ಥೆಯ ಅಧ್ಯಕ್ಷ ಡಾಕ್ಟರ್ ವೈ ಡಿ ರಾಜಣ್ಣ ಅಭಿಪ್ರಾಯಪಟ್ಟರು

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ಮಾತನಾಡಿ
ಡಾಕ್ಟರ್ ರಾಜ್ ಕುಮಾರ್ ತಮ್ಮ ನಟನಾ ಕೌಶಲ್ಯದ ಕಾರಣಕ್ಕೆ ಭಾರತದ ಇತರೆ ಭಾಷೆ ಚಿತ್ರಗಳಿಂದ ದೊಡ್ಡಮಟ್ಟದ ಆಹ್ವಾನ ಬಂದರೂ ತಿರಸ್ಕರಿಸಿದರು .ಬೇರೆ ಭಾಷೆಯ ಚಿತ್ರಗಳ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದರು ಆದರೆ ತನ್ನನ್ನು ಬೆಳೆಸಿದ ಕನ್ನಡ ಚಿತ್ರರಂಗ ಹಾಗೂ ಕನ್ನಡ ಭಾಷೆಯಿಂದ ದೂರವಾಗುವುದು ಅವರಿಗೆ ಇಷ್ಟವಾಗಿರಲಿಲ್ಲ .
ಆ ಕಾರಣಕ್ಕೆ ಇಲ್ಲಿಯ ಉಳಿದರು .ಡಾಕ್ಟರ್ ರಾಜ್ ಕನ್ನಡ ಸಿನಿಮಾ ನಿರ್ಮಾಣಕ್ಕೆ ಹೊಸ ವೇಗ ,ಹೊಸ ಸ್ಪರ್ಶವನ್ನು ನೀಡಿದರು ಕನ್ನಡ ಚಿತ್ರರಂಗ ಮದರಾಸ್ ನಿಂದ ಬೆಂಗಳೂರಿಗೆ ವರ್ಗಾವಣೆಯಾಯಿತು ,ನೂರಾರು ಕಲಾವಿದರು ತಂತ್ರಜ್ಞಾನರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಡಾಕ್ಟರ್ ರಾಜ್ ಕುಮಾರ್ ನೆರವಾದರು .ಡಾಕ್ಟರ್ ರಾಜ್ ಕೇವಲ ನಟನೆಗಷ್ಟೇ ಸೀಮಿತವಾಗದೆ ಕನ್ನಡ ನೆಲ ಜಲ ಭಾಷೆಗೆ ಸಂಕಟ ಬಂದಾಗಲೆಲ್ಲ ಧ್ವನಿ ಎತ್ತುವಲ್ಲಿ ಮುಂಚೂಣಿಯಲ್ಲಿದ್ದರು .
ಗೋಕಾಕ್ ಚಳುವಳಿ ಒಳಗೊಂಡಂತೆ ಹತ್ತಾರು ನಾಡುನುಡಿಯ ಸಮಸ್ಯೆಗಳಿಗೆ ಧ್ವನಿಯಾಗಿದ್ದರು .ಅದರಾಚೆಗೆ ಅವರ ವೈಯಕ್ತಿಕ ಬದುಕು ಪ್ರಾಮಾಣಿಕತೆ ನಡೆ ನುಡಿ ನಟನೆಯ ಬಗ್ಗೆ ಅವರಿಗಿದ್ದ ಬದ್ಧತೆ ,ಸ್ವಂತ ಶ್ರೇಷ್ಠ ಗಾಯಕರಾಗಿ ಅವರ ಹಾಡಿನ ಲಹರಿ ಕನ್ನಡ ಜನತೆಯನ್ನ ಅಭಿಮಾನದ ಹೊಳೆಯಲ್ಲಿ ತೇಲಿಸಿದ ಪರಿ ಅಪೂರ್ವ,ಆ ಕಾರಣಕ್ಕೆ ಡಾಕ್ಟರ್ ರಾಜ್ ಕುಮಾರ್ ಕನ್ನಡಿಗರ ಹೃದಯದಲ್ಲಿ ಸದಾ ವಿರಾಜಮಾನರಾಗಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡ ಎನ್ ಎಂ ನವೀನ್ ಕುಮಾರ್ ಮಾತನಾಡಿ
ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ ಆಗಿದ್ದವರು ಡಾ॥ ರಾಜ್ ,ಕನ್ನಡ ಭಾಷೆಯ ಸೊಬಗು ಮತ್ತು ಸೊಗಡನ್ನು ಹೆಚ್ಚಿಸಿದವರು ,ಅಭಿನಯದ ಶ್ರೇಷ್ಠ ಅಭಿನಯದ ಜೊತೆ ಜೊತೆಗೆ ಎಷ್ಟು ವ್ಯಕ್ತಿತ್ವದ ಶ್ರೇಷ್ಠ ವ್ಯಕ್ತಿತ್ವದ ಮೂಲಕ ಜನರಲ್ಲಿ ಕನ್ನಡ ಪ್ರೀತಿಯನ್ನು ಬೆಳೆಸಿದವರು, ಅವರ ಬದುಕು
ಇಂದಿನ ಯುವಕರಿಗೆ ದಾರಿ ಹಾಗೂ ಮಾದರಿ ಆಗಬೇಕು ಎಂದು ಅಭಿಪ್ರಾಯಪಟ್ಟರು.

ಅಖಿಲ ಕರ್ನಾಟಕಡಾಕ್ಟರ್ ರಾಜ್ ಕುಮಾರ್ ಅಭಿಮಾನಿ ಬಳಗದ ಸಂಸ್ಥಾಪಕ ಅಧ್ಯಕ್ಷರಾದ ರಾಮೇಗೌಡ ಮಾತನಾಡಿ
ಡಾಕ್ಟರ್ ರಾಜ್ ಕುಟುಂಬ ನೇತ್ರದಾನದ ಕುಟುಂಬ ಎಂದೇ ಪ್ರಸಿದ್ಧರಾಗಿದ್ದಾರೆ,
ಡಾಕ್ಟರ್ ರಾಜ್ ರವರಿಗೆ ಭಾರತರತ್ನ ನೀಡಲಿ ಎಂದು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ,ಸಾಹಿತ್ಯ ಲೋಕ ಮೈಸೂರು ಸಂಸ್ಥೆಯ ಅಧ್ಯಕ್ಷರಾದ ಡಾ ವೈ ಡಿ ರಾಜಣ್ಣ ,ಕಾಂಗ್ರೆಸ್ ಯುವ ಮುಖಂಡ ಎನ್ ಎಂ ನವೀನ್ ಕುಮಾರ್ ,ಅಖಿಲ ಕರ್ನಾಟಕಡಾಕ್ಟರ್ ರಾಜ್ ಕುಮಾರ್ ಅಭಿಮಾನಿ ಬಳಗದ ಸಂಸ್ಥಾಪಕ ಅಧ್ಯಕ್ಷರಾದ ರಾಮೇಗೌಡ ,ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ,ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ ,ಕೆ ಆರ್ ಎಸ್ ಗ್ರಾಮ ಪಂಚಾಯಿತಿ ಸದಸ್ಯರಾದ ವಿಜಯ್ ಕುಮಾರ್ ,ಯುವ ಕಲಾವಿದ ಲೋಹಿತ್ ,ವಿನಯ್ ಕಣಗಾಲ್ ,ರಾಜೇಶ್ ,
ರಾಜ್ ಕುಮಾರ್ ಅಭಿಮಾನಿ ಬಳಗದ ರಮೇಶ್ ,ಚಕ್ರಪಾಣಿ ,ಪ್ರಕಾಶ್ , ಮಲ್ಲೇಶ್ ,ವಾಸು, ಹಾಗೂ ಇನ್ನಿತರರು ಹಾಜರಿದ್ದರು

Leave a Reply

Your email address will not be published. Required fields are marked *