ನಂದಿನಿ ಮೈಸೂರು
ಸಿಎಂ ಮಾಡೋದು ಗೊತ್ತು ಇಳಿಸುವುದು ಗೊತ್ತು ಎಂದು
ವಿಧಾನ ಪರಿಷತ್ ಸದಸ್ಯರಾದ ಬಿ ಕೆ ಹರಿಪ್ರಸಾದ್ ರವರ ಹೇಳಿಕೆ ಖಂಡನೀಯ.ಈ ಕೂಡಲೇ ಪಕ್ಷದಿಂದ ವಜಾ ಮಾಡುವಂತೆ ಕೆಪಿಸಿಸಿ ಕಾರ್ಯದರ್ಶಿ ವರುಣಾ ಮಹೇಶ್ ಒತ್ತಾಯಿಸಿದ್ದಾರೆ.
ಬಿಕೆ ಹರಿಪ್ರಸಾದ್ ರವರು.ಒಂದು ಗ್ರಾಮ ಪಂಚಾಯಿತಿಯಲ್ಲೂ ಸಹ ಗೆಲ್ಲೋದಕ್ಕೆ ಆಗದ ವ್ಯಕ್ತಿ. ಇಂತಹ ವ್ಯಕ್ತಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಬಗ್ಗೆ ಒಬ್ಬ ಮುಖ್ಯಮಂತ್ರಿ ಇಳಿಸುವುದು ಗೊತ್ತು ಎಂದು ಕೀಳು ಮಟ್ಟದಲ್ಲಿ ಮಾತನಾಡಿರುವುದು ಸಿದ್ದರಾಮಯ್ಯನವರ ಅಭಿಮಾನಿಗಳಿಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ನೋವು ಉಂಟು ಮಾಡಿದೆ. ಪಕ್ಷದಲ್ಲಿ ಇಂಥವರನ್ನ ವಿಧಾನಪರಿಷತ್ತಲ್ಲಿ ಸದಸ್ಯರಾಗಿ ಮುಂದುವರೆಸುವುದು ಸರಿಯಲ್ಲ. ಆದ್ದರಿಂದ ಕೂಡಲೇ ಕೆಪಿಸಿಸಿ ಅಧ್ಯಕ್ಷರು, ಎಐಸಿಸಿ ಅಧ್ಯಕ್ಷರು ಬಿಕೆ ಹರಿಪ್ರಸಾದ್ ರವರನ್ನ ಪಕ್ಷದಿಂದ ಉಚ್ಚಾಟನೆ ಮಾಡಬೇಕೆಂದು ವರುಣಾ ಮಹೇಶ್ ಒತ್ತಾಯಿಸಿದ್ದಾರೆ.