ಮೈಸೂರು:10 ಅಕ್ಟೋಬರ್ 2021
ನ@ದಿನಿ
ವರುಣಾ ಪೊಲೀಸ್ ಠಾಣಾ ಸರಹದ್ದಿನ ವರಕೂಡು ಕ್ರಾಸ್ ಬಳಿ ಸಂಭವಿಸಿದ ಅಪಘಾತ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಚೇತನ್.ಆರ್. ಭೇಟಿ ನೀಡಿ ಪರಿಶೀಲಿಸಿದರು.
ಮೈಸೂರು ಟಿ.ನರಸೀಪುರ ವರಕೂಡು ಬಳಿ ನಡೆದ ಅಪಘಾತದ ಬಗ್ಗೆ ಠಾಣೆಯ ಸಬ್ ಇನ್ಸ್ಪೆಕ್ಟರ್ ಸೀತಾ ಲಕ್ಷ್ಮೀರವರಿಂದ ಮಾಹಿತಿ ಪಡೆದರು.
ಇದೇ ಸಂದರ್ಭದಲ್ಲಿ ಅಪರ ಪೊಲೀಸ್ ಅಧೀಕ್ಷಕರಾದ ಆರ್. ಶಿವಕುಮಾರ್, ಸಿಪಿಐ ಸುಮಿತ್ ಮಹೇಶ್ ರವರುಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಿದರು.
ಮೈಸೂರಿನ ವರಕೋಡು ರಸ್ತೆ ಬಳಿ ಚಲಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಗೂಡ್ಸ್ ಆಟೋ ನಡುವೆ ಡಿಕ್ಕಿಯಾಗಿದ್ದು,ಅಪಘಾತದ ತೀವ್ರತೆಗೆ ಮಧುಮಗ ಇಮ್ರಾನ್ ಪಾಷ (30), ಯಾಸ್ಮಿನ್ (28) ಹಾಗೂ ಅಫ್ನಾನ್ ( 2) ಎಂದು ಮೂವರು ಸಾವನ್ನಪ್ಪಿದ್ದಾರೆ.
ಗಾಯಗೊಂಡವನ್ನ ಕೂಡಲೇ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಈ ಸಂಬಂಧ ವರುಣಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.