15 ದಿನಗಳಿಂದ ವಿಶ್ವ ಕೈ ತೊಳೆಯುವ ದಿನಾಚರಣೆ ಜಾಗೃತಿ ಅಭಿಯಾನ

 

ಮೈಸೂರು:11 ಅಕ್ಟೋಬರ್ 2021

ನ@ದಿನಿ

                           ಕಳೆದ 15 ದಿನಗಳಿಂದ
ಮೈಸೂರು ಮಕ್ಕಳ ಅಭಿವೃದ್ಧಿ ಕೇಂದ್ರವು ಚೈಲ್ಡ್ ಫಂಡ್ ಇಂಟರ್‌ನ್ಯಾಷನಲ್ ಹಾಗೂ ಯೂನಿಸೆಫ್‌ನ ಸಹಯೋಗದೊಂದಿಗೆ ವಿಶ್ವ ಕೈ ತೊಳೆಯುವ ದಿನಾಚರಣೆ ಜಾಗೃತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

                           ಪ್ರತಿದಿನ ಒಂದೊಂದು ಪ್ರದೇಶದ ಜನಸಾಮಾನ್ಯರಿಗೆ , ಶಾಲಾ ಮಕ್ಕಳಿಗೆ ಕೈ ತೊಳೆಯುವ ವಿಧಾನಗಳು ಮತ್ತು ಕೋವಿಡ್ ಸಮಯದಲ್ಲಿ ಇದರ ಮಹತ್ವದ ಕುರಿತು ಸಂಕ್ಷಿಪ್ತವಾಗಿ ತಿಳಿಸಿಕೊಡಲಾಗುತ್ತಿದೆ .

                            ಗಾಂಧಿನಗರದ ಎ.ಜೆ ಬ್ಲಾಕ್‌ನ ಅಂಗನವಾಡಿ ಕೇಂದ್ರ , ಪುಷ್ಪಗಿರಿಯ ಇನ್‌ಫೆಂಟ್ ಜೀಜಸ್ ಶಾಲೆ , ರಾಘವೇಂದ್ರನಗರದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಶಾಂತಿನಗರದ ಲಿಟಲ್ ಹಾರ್ಟ್ ಶಾಲೆ ಮತ್ತು ಶ್ರೀರಾಂಪುರ ಗ್ರಾಮ ಪಂಚಾಯಿತಿ ಕಛೇರಿಯ ಮುಂಭಾಗದಲ್ಲಿ ಅರಿವು ಕಾರ್ಯಕ್ರಮವನ್ನು ನಡೆಸಿ ಜಾಗೃತಿ ಮೂಡಿಸಲಾಯಿತ್ತು . ಇದರ ನಡುವೆ ಸಂಸ್ಥೆಯ ವತಿಯಿಂದ ಚೆಲುವಾಂಬ ಆಸ್ಪತ್ರೆಗೆ , ವೈದ್ಯಕೀಯ ಉಪಕರಣಗಳನ್ನು ವಿತರಿಸಲಾಯಿತ್ತು .

Leave a Reply

Your email address will not be published. Required fields are marked *