ಸಾವು ಆಕಸ್ಮಾಕವೋ ಅಥವಾ ವಾಮಾಚಾರವೋ ಸ್ನೇಹಿತನ ಬಲಿ ಪಡೆದ ಚಡ್ಡಿ ದೋಸ್ತಿಗಳು

ನಂಜನಗೂಡು:3 ಜನವರಿ 2022

ನಂದಿನಿ 

ಅದೊಂದು ಕೆರೆ. ಕೆರೆ ಬಳಿ ಗೊಂಬೆ,ಕೋಳಿ,ಮಡಿಕೆ,ಬಟ್ಟೆ ಒಂದು ಕಡೆ ಬಿದ್ದಿದ್ರೇ ಮತ್ತೊಂದು ಕಡೆ ಅಪ್ರಾಪ್ತನ  ಮೃತ ದೇಹ ನೋಡಿ ಕುಟುಂಬಸ್ಥರು ಗೋಳಾಡುತ್ತಿದ್ರೂ.ಇಷ್ಟಾರ್ಥ ಸಿದ್ದಿಗಾಗಿ ಅಲ್ಲೊಂದು ವಾಮಾಚಾರ ಮೂಲಕ ಬಾಲಕನ ಬಲಿ ಕೊಟ್ಟಿದ್ರಾ ಎಂಬ ಅನುಮಾನ ಮೇಲ್ನೋಟಕ್ಕೆ ಕಂಡು ಬಂತು. 
ಹೌದು, ಧನುರ್ ಮಾಸದ ಅಮಾವಾಸ್ಯೆ ದಿನದಂದು ಕೆರೆ ಬಳಿ ವಾಮಾಚಾರ ಮಾಡಿದ ಸ್ನೇಹಿತರು ಅಮಾಯಕ ಬಾಲಕನನ್ನ ಬಲಿ ಪಡೆದಿದ್ದಾರೆ.

ನಂಜನಗೂಡು ತಾಲೂಕು ಹಳೆಪುರ ಗ್ರಾಮದ ಕೆರೆಯಲ್ಲಿ ಬಾಲಕನ ಮೃತದೇಹ ದೊರೆತಿದೆ.ಎಸ್.ಎಸ್.ಎಲ್.ಸಿ.ಓದುತ್ತಿದ್ದ ಮಹೇಶ್@ಮನು(16) ಸ್ನೇಹಿತರ ಸಂಚಿಗೆ ಬಲಿಯಾದ ಬಾಲಕ.ನಿನ್ನೆ ಧನುರ್ ಮಾಸದ ಅಮಾವಾಸ್ಯೆಯ ದಿನದ ಮಟಮಟ ಮಧ್ಯಾಹ್ನ ನಡೆದಿರುವ ಕೃತ್ಯ. ವಾಮಾಚಾರ ಹೆಸರಲ್ಲಿ ಹತ್ಯೆಗೈದ ಮೂವರು ಸ್ನೇಹಿತರನ್ನ ಕೌಲಂದೆ ಪೊಲೀಸರು ಬಂಧಿಸಿದ್ದಾರೆ.ಮೃತ ಮಹೇಶ್ ಹಾಗೂ ಅಪ್ರಾಪ್ತ ಆರೋಪಿಗಳು ಸ್ನೇಹಿತರು.ಈ ಪೈಕಿ ಒಬ್ಬ ಆರೋಪಿ ಚಿಕ್ಕ ವಯಸ್ಸಿನಲ್ಲೇ ತಾತನಿಂದ ವಾಮಾಚಾರ ಮಾಡುವುದನ್ನ ಕಲಿತಿದ್ದನಂತೆ.ಧನುರ್ ಮಾಸದ ಅಮಾವಾಸ್ಯೆ ದಿನ ಬಲಿ ಕೊಟ್ಟರೆ ಇಷ್ಟಾರ್ಥ ಸಿದ್ದಿಗಳು ನೆರವೇರುತ್ತವೆ ಎಂಬ ನಂಬಿಕೆ.ಇದೇ ದೃಷ್ಟಿಯಿಂದ ನಿನ್ನೆ ಮಹೇಶ್ ನನ್ನು ಪುಸಲಾಯಿಸಿದ ಮೂವರು ಆರೋಪಿಗಳು ಕೆರೆ ಬಳಿಗೆ ಕರೆತಂದಿದ್ದಾರೆ.ಸ್ಥಳದಲ್ಲಿ ಗೊಂಬೆಯೊಂದನ್ನ ತಯಾರಿಸಿ ಅದರ ಮೇಲೆ ಮಹೇಶ್ ಹೆಸರು ಬರೆದು ನಂತರ ಭೀಕರವಾಗಿ ಪೂಜೆ ಮಾಡಿದ್ದಾರೆ.ಸ್ನೇಹಿತರ ಉದ್ದೇಶ ಅರಿಯದ ಅಮಾಯಕ ಮಹೇಶ್ ಜೊತೆಗೆ ಬಂದಿದ್ದಾನೆ.ಪೂಜೆ ನಂತರ ಮಹೇಶ್ ನನ್ನು ಆರೋಪಿಗಳು ಕೆರೆಗೆ ತಳ್ಳಿದ್ದಾರೆ.ಕೃತ್ಯವೆಸಗಿದ ನಂತರ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಮಹೇಶ್ ಕೆರೆಗೆ ಬಿದ್ದಿದ್ದಾನೆ ಎಂದು ಸ್ನೇಹಿತನೊಬ್ಬ ಗ್ರಾಮದ ಹಿರಿಯರಿಗೆ ಮಾಹಿತಿ ತಿಳಿಸಿದ್ದಾನೆ.ಗ್ರಾಮದ ಜನ ಕೆರೆಯಲ್ಲಿ ಶೋಧನೆ ಮಾಡಿದಾಗ ಮಹೇಶ್ ಮೃತದೇಹ ದೊರೆತಿದೆ.ಅಲ್ಲದೆ ಕೆರೆ ಬಳಿ ವಾಮಾಚಾರ ಪೂಜೆ ಮಾಡಿದ ಕುರುಹುಗಳು ಪತ್ತೆಯಾಗಿದೆ.
ಕೌಲಂದೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಸಧ್ಯ ಮೂವರು ಆರೋಪಿಗಳು ಅಪ್ರಾಪ್ತರೆಂದು ಹೇಳಲಾಗಿದ್ದು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *