ಮೊತ್ತ ಗ್ರಾಮದ ರಸ್ತೆ ನೋಡಿ ಕಣ್ಮುಂಬಿಕೊಳ್ಳಿ

ಎಚ್‌ಡಿ ಕೋಟೆ:3 ಜನವರಿ 2022

ನಂದಿನಿ

ಎಚ್ ಡಿ ಕೋಟೆ ಪಟ್ಟಣದಿಂದ ಕೇವಲ 4 ಕಿಲೋಮೀಟರ್ ದೂರದಲ್ಲಿರುವ ಮೊತ್ತ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು ರಿಪೇರಿ ಮಾಡಿಸುವಂತೆ ಶಾಸಕರು ಮತ್ತು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಕಳೆದ ಇಪ್ಪತ್ತು ವರ್ಷಗಳ ಹಿಂದೆ ಮಾಡಿಸಿರುವ ರಸ್ತೆ ಇದಾಗಿದ್ದು ಕೋಟೆಯಿಂದ ಅಂತರಸಂತೆ ಕಡೆ ಪ್ರಯಾಣಿಸುವ ಬಹುತೇಕ ವಾಹನಗಳು ಇದೇ ರಸ್ತೆಯನ್ನು ಅವಲಂಬಿ‌ಸಿದ್ದು, ಕಟ್ಟೆಮನುಗನಹಳ್ಳಿ , ಆಲತ್ತಾಳಲಹುಂಡಿ ಗ್ರಾಮಗಳನ್ನೂ ಕೂಡಾ ಸಂಪರ್ಕಿಸುತ್ತದೆ. ಪ್ರತಿನಿತ್ಯ ನೂರಾರು ಶಾಲಾ ಕಾಲೇಜು ವಿದ್ಯಾರ್ಥಿಗಳು ಸಂಚರಿಸುತ್ತಿದ್ದು, ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಹೋಗಬೇಕಾದರೆ ಈ ರಸ್ತೆಯಲ್ಲಿ ನರಕದರ್ಶನವಾಗುತ್ತದೆ.

ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಶಾಸಕರಿಗೆ ಮನವಿ ಮಾಡಿದ್ದು ರಸ್ತೆ ರಿಪೇರಿ ಮಾಡಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *