ದೇವಾಲಯದ ವರಮಾನ ದೇವಾಲಯಗಳ ಅಭಿವೃದ್ಧಿ ಗೆ ಮೀಸಲು ನಿರ್ಣಯದ ಸರ್ಕಾರ ಕ್ರಮಕ್ಕೆ ಜೋಗಿಮಂಜು ಸ್ವಾಗತ

ಮೈಸೂರು:4 ಜನವರಿ 2022

ನಂದಿನಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರು ಇತ್ತಿಚೆಗೆ ಕರ್ನಾಟಕದ ಎಲ್ಲಾ ದೇವಸ್ಥಾನ ಗಳನ್ನು ಸರ್ಕಾರದ ನಿಯಂತ್ರಣ ದಿಂದ ಮುಕ್ತ ಗೊಳಿಸುವ ನಿರ್ಧಾರ ಮಾಡಿದ್ದಾರೆ,ಹಾಗೂ ಮುಂದಿನ‌ ಅಧಿವೇಶನದಲ್ಲಿ ವಿಶೇಷ ಕಾನೂನು ಕೂಡ ಮಂಡಿಸಲಿದ್ದಾರೆ,ಈ ನಿರ್ಧಾರವನ್ನು ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೊರ್ಚಾ ದ ಮೈಸೂರು ನಗರದ ಅಧ್ಯಕ್ಷರಾದ ಜೋಗಿಮಂಜು ಸ್ವಾಗತಿಸಿದರು.

ಕರ್ನಾಟಕ ದ ವಿಧಾನ ಸಭೆ ಚುನಾವಣೆಗೂ ಮುನ್ನ ಭಾ.ಜ.ಪ.ಚುನಾವಣಾ ಪ್ರಣಾಳಿಕೆ ಯಲ್ಲಿ ಘೋಷಿಸಿತು,
ಕಳೆದ 75 ವರ್ಷಗಳಲ್ಲಿ ದೇಶದಲ್ಲಿ ಮಸೀದಿ ಹಾಗೂ ಚರ್ಚ್ ಗಳನ್ನು ಸರಕಾರಿಕರಣದ ಬಗ್ಗೆ ಚಕಾರ ವೆತ್ತದ ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ದೇವಸ್ಥಾನ ಗಳ ಮೇಲಿನ ಸರ್ಕಾರಿ ನಿಯಂತ್ರಣ ಗಳನ್ನು ತೆಗೆದು ಹಾಕುವುದನ್ನು ತೀವ್ರವಾಗಿ ವಿರೋಧಿಸಿದೆ,ದೇವಸ್ಥಾನ ಗಳನ್ನು ಸರಕಾರಿಕರಣದಿಂದ ಮುಕ್ತ ಗೊಳಿಸುವುದುದನ್ನು ಕಾಂಗ್ರೆಸ್ ವಿರೋಧಿಸಿತ್ತಿರುವುದು ದುರದೃಷ್ಟಕರವಾಗಿದ್ದು ಕಾಂಗ್ರೆಸ್ ವಿನಾಶಕಾಲೆ ವಿಪರೀತ ಬುದ್ದಿಯಾಗಿದೆ.

ಪ್ರಥಮ ಪ್ರಧಾನಿ ಜವಹರಲಾಲ್ ನೆಹರುರವರು ಗುಜರಾತ್‌ ನ ಸೋಮನಾಥ ಮಂದಿರ ಕಟ್ಟಲು ವಿರೋಧಿಸಿದ್ದರು ಆದರೆ ಸರ್ದಾರ್ ವಲ್ಲಭಭಾಯಿ ಪಟೇಲ್ ರವರ ಸತತ ಪ್ರಯತ್ನ ದಿಂದ ಉದ್ಘಾಟನೆ ಯಾಯಿತು,ಮಂದಿರ ಕಟ್ಟಲು ವಿರೋಧಿಸಿ ದ ಜವಹರಲಾಲ್ ನೆಹರು ರವರು ಅದೆ ಮಸೀದಿ ನಿರ್ಮಿಸಲು ಸರ್ಕಾರದಿಂದ ಸಾಕಷ್ಟು ಅನುದಾನವನ್ನು ನೀಡಿದರು ಹಾಗಿಂದಲೂ ಅನೇಕ ದೇವಾಲಯಗಳು ದುಸ್ಥಿತಿಯಲ್ಲಿ ಇದ್ದರು ಮುಜರಾಯಿ ಇಲಾಖೆಯಿಂದ ಪುನರುಜ್ಜೀವನ ಗೊಳಿಸಿರುವುದು ಬಹಳ ಕಡಿಮೆ.
ಈ ಮುಜರಾಯಿ ಇಲಾಖೆಯ ಹಣ ಮುಸಲ್ಮಾನರ ಹಜ್ ಯಾತ್ರೆ ಗೆ ಸರ್ಕಾರ ವಿನಯೊಗಿಸುತ್ತಿರುತ್ತದೆ,ಭಾರತ ದಂತಹ ಸರ್ವ ಧರ್ಮ ಸಮನ್ವಯ ಜಾತ್ಯಾತೀತ ರಾಷ್ಟ್ರದಲ್ಲಿ ಮಂದಿರ ಗಳು ಸ್ವತಂತ್ರ ಇಲ್ಲ.ಆದರೆ ಮಸೀದಿ ಚರ್ಚ್ ಗಳು ಯಾವುದೇ ನಿರ್ಬಂಧ ವಿಲ್ಲ ಸಮಾನತೆ ಬಯಸುವವರು ಮಂದಿರಗಳು ಮುಜರಾಯಿ ಇಲಾಖೆಯಿಂದ ಮುಕ್ತಮಾಡಿ,ಅಥವಾ ಮಸೀದಿ ಚರ್ಚ್‌ ಗಳನ್ನು ಸರ್ಕಾರದ ವ್ಯಾಪ್ತಿಯಲ್ಲಿ ತರಬೇಕು, ಈ ದಿಸೆಯಲ್ಲಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ರವರ ಸರ್ಕಾರ ದೇವಾಲಯಗಳು ಸ್ವತಂತ್ರ ಮಾಡುವುದಾಗಿ ಹೇಳಿರುವುದು ನಿಜಕ್ಕೂ ಶ್ಲಾಘನೀಯ ನಿರ್ಧಾರ….

Leave a Reply

Your email address will not be published. Required fields are marked *