ತಿ.ನರಸೀಪುರ.:04 ಜನವರಿ 2022
ವರದಿ:ಶಿವು
ಕ್ರೀಡೆಯಿಂದ ದೇಹ ಹಾಗೂ ಮನಸ್ಸು ಶಕ್ತಿಶಾಲಿಯಾಗುತ್ತದೆ. ಅಲ್ಲದೆ, ಕ್ರೀಡೆ ಮನಸ್ಸಿಗೆ ಉಲ್ಲಾಸ ತರುವುದರ ಜೊತೆಗೆ ಏಕಾಗ್ರತೆಯನ್ನು ಹೆಚ್ಚಿಸಿ ಆತ್ಮವಿಶ್ವಾಸ ಮೂಡಿಸುತ್ತದೆ ಎಂದು ಕಾಂಗ್ರೇಸ್ ಯುವ ಮುಖಂಡ ಸುನಿಲ್ ಬೋಸ್ ತಿಳಿಸಿದರು.
ತಾಲ್ಲೂಕಿನ ನಿಲಸೋಗೆ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕಲಾ ಸಾಂಸ್ಕ್ರತಿಕ ಮತ್ತು ಕ್ರೀಡಾ ಯುವಕರ ಸಂಘದವರು ತಿಬ್ಬಾದೇವಿ ಅಮ್ಮನವರ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಟೆನ್ನೀಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ದೀಪ ಬೆಳಗಿಸುವುದರ ಜೊತೆಗೆ ಆಟ ಆಡುವ ಮೂಲಕ
ಉದ್ಘಾಟಿಸಿ ಮಾತನಾಡಿದ ಅವರು ಪ್ರತಿನಿತ್ಯ ನಮ್ಮ ಜೀವನ ಜಂಜಾಟದಲ್ಲಿ ಕ್ರೀಡೆ ಒಂದು ಅವಿಭಾಜ್ಯ ಅಂಗವಾಬೇಕು ಎಂದರು.
ನಮ್ಮ ಆಯುಷ್ಯನ್ನು ವೃದ್ಧಿ ಮಾಡಲು, ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಹಾಗೂ ದೈಹಿಕವಾಗಿ ಸದೃಢರಾಗಲು ಕ್ರೀಡೆ ಅತೀ ಅವಶ್ಯಕ. ಕ್ರೀಡೆಯಿಂದ ಆರೋಗ್ಯ ವೃದ್ಧಿಗೊಳ್ಳುವುದಲ್ಲದೆ ಮಾನಸಿಕವಾಗಿ ಶಕ್ತರಾಗುತ್ತೇವೆ ಜೊತೆಗೆ ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ಸೌಹಾರ್ದ ಮನೋಭಾವ ಬೆಳೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಮನುಷ್ಯನ ದೇಹ ಮತ್ತು ಮನಸ್ಸಿನ ಸಮತೋಲನ ಸಾಧಿಸುವಲ್ಲಿ ಕ್ರೀಡೆಯ ಪ್ರಾಮುಖ್ಯ ಬಹಳಷ್ಟಿದೆ ಚಿಕ್ಕಂದಿನಲ್ಲೇ ಕ್ರೀಡೆಗಳಲ್ಲಿ ಸಕ್ರಿಯವಾಗಿ ತೊಡಗಿಸಿದರೆ ಸದೃಢವಾದ ವ್ಯಕ್ತಿ ಮತ್ತು ವ್ಯಕ್ತಿತ್ವ ರೂಪಿಸಿ ಕೊಳ್ಳಲು ಸಾಧ್ಯವಾಗುವುದಲ್ಲದೆ ಏಕಾಗ್ರತೆ, ಶಿಸ್ತು, ಸಮಯ ಪ್ರಜ್ಞೆ ಪ್ರತಿಯೊಬ್ಬರಲ್ಲೂ ಒಂದೊಂದು ಕಲೆ ಅಡಗಿರುತ್ತದೆ. ಕ್ರೀಡೆಯು ಸಹ ಒಂದು ಕಲೆಯಂತೆಯೇ ಕಾಣಬಹುದು. ಕ್ರೀಡೆಯಿಂದ ದೈಹಿಕ ಆರೋಗ್ಯದ ಜೊತೆಯಲ್ಲಿ ಜ್ಞಾನ ವಿಕಸನವು ಆಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾದಾಪುರ ಗ್ರಾ.ಪಂ.ಅಧ್ಯಕ್ಷೆ ಸುಶೀಲಮ್ಮ ವಹಿಸಿದ್ದರು ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯರಾದ ಮಹದೇವಮ್ಮ,ನಳಿನಿ ಸೋಮಣ್ಣ,ಬಸವರಾಜು, ಪಿ.ರೇವಣ್ಣ,ರೇಖಾ,ಮಹೇಶ್,ಮೇಘನ, ಮಾಜಿ.ತಾ.ಪಂ.ಸದಸ್ಯ ಬಸವರಾಜು, ಲೋಲಾಕ್ಷಿ ಜವರಯ್ಯ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಎಲ್.ನಂಜುಂಡ ಸ್ವಾಮಿ ಮುಖಂಡರಾದ ಶೇಖರಪ್ಪ,ಸುಧಾಕರ್, ಸಿದ್ದರಾಜು, ಸಿದ್ದಯ್ಯ ಕಾರ್ಯಕ್ರಮ ಅಯೋಕರಾದ ಸಿದ್ದರಾಜು,ಮಹದೇವ ಸ್ವಾಮಿ,ಲೋಕೇಶ್ , ವಿಜಯಕುಮಾರ್, ಅವಿನಾಶ್, ಪ್ರದೀಪ್, ಭಾಗ್ಯರಾಜ್,ಸತೀಶ್,ಮಹೇಶ್,ಹರೀಶ್, ಮತ್ತಿತರರು ಹಾಜರಿದ್ದರು.