ಸರಗೂರು: 4 ಜನವರಿ 2022
ನಂದಿನಿ
H.D ಕೋಟೆ H.D ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ 15 ರಿಂದ 18 ವರ್ಷದವರ ಕೋವ್ಯಾಕ್ಸಿನ್ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಶಾಸಕರಾದ ಅನಿಲ್ ಚಿಕ್ಕಮಾದು ರವರು ತಹಶೀಲ್ದಾರ್ ನರಗುಂದ್ , ಸರಗೂರು ತಹಶೀಲ್ದಾರ್ ಚೆಲುವರಾಜ್ , ತಾಲ್ಲೂಕು ಆರೋಗ್ಯಾಧಿಕಾರಿಗಳು ಡಾ”ಟಿ.ರವಿಕುಮಾರ್, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಗಳಾದ ಡಾ” ಸೋಮಣ್ಣ , ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ H.C ನರಸಿಂಹಮೂರ್ತಿ ರವರು ದೀಪ ಬೆಳಗುವುದರ ಮೂಲಕ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಶಾಸಕರಾದ ಅನಿಲ್ ಚಿಕ್ಕಮಾದು ಮಾತನಾಡಿ ಎಲ್ಲಾ ಮಕ್ಕಳು ಕಡ್ಡಾಯವಾಗಿ ಕೋವಿಡ್ ಲಸಿಕೆ ಯನ್ನೂ ಪಡೆಯಬೇಕು ಹಾಗೂ ನಿಮ್ಮ ಪೋಷಕರು ಸಹ ಲಸಿಕೆ ಪಡೆಯಲು ತಿಳಿಸಿ ಮತ್ತು ಮೊದಲನೇ ಡೋಸ್ ಪಡೆದವರು ಕಡ್ಡಾಯವಾಗಿ 2ನೇ ಡೋಸ್ ಪಡೆಯಬೇಕು ಹಾಗೂ ಮೊದಲನೇ ಅಲೆಯಲ್ಲಿ ಹೆಚ್ಚು ಸಾವುನೋವು ಸಂಭವಿಸಿರುತ್ತದೆ ಆದಕಾರಣ ಪ್ರತಿಯೊಬ್ಬರೂ ಪಡೆದುಕೊಳ್ಳಿ ಎಂದು ತಿಳಿಸಿದರು.
ತಾಲ್ಲೂಕು ಆರೋಗ್ಯಧಿಕಾರಿ ಗಳಾದ ಡಾ”.ಟಿ ರವಿಕುಮಾರ್ ರವರು ಮಾತನಾಡಿ ರಾಜ್ಯಾದ್ಯಂತ 15-18 ವರ್ಷ ದವರಿಗೆ ಕೋ ವ್ಯಾಕ್ಸಿನ್ ಲಸಿಕೆಯನ್ನು ಹಾಕುತ್ತಿದೇವೆ ಇದರಿಂದ ಯಾವುದೇ ಅಡ್ಡ ಪರಿಣಾಮಗಳೂ ಇರುವುದಿಲ್ಲ ಆದುದರಿಂದ ಎಲ್ಲಾ ಮಕ್ಕಳು ಲಸಿಕೆ ಯನ್ನೂ ತಪ್ಪದೇ ಹಾಕಿಸಿ ಕೊಳ್ಳಿ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣ ಅಧಿಕಾರಿ ಗಳಾದ, ಚಂದ್ರಕಾಂತ್, ಕಾಲೇಜಿನ ಪ್ರಾಂಶುಪಾಲರಾದ, ಜಯಚಾಮರಾಜ ಅರಸು ತಾಲೂಕ್ ಆರೋಗ್ಯ ಅಧಿಕಾರಿಗಳ ಕಚೇರಿಯ ಆರೋಗ್ಯ ನಿರೀಕ್ಷಣ ಅಧಿಕಾರಿಗಳಾದ ನಾಗೇಂದ್ರ, ರವಿರಾಜ್, ಕಾಡ ಶೆಟ್ಟಿ, ಹನುಮಂತು, ಅಶೋಕ, ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ ವರ್ಗದವರು, ಕಾಲೇಜಿನ ಎಲ್ಲ ಉಪನ್ಯಾಸಕರು ಹಾಗೂ ಮಕ್ಕಳು ಹಾಜರಾಗಿದ್ದರು.