20 ಸಾವಿರಕ್ಕೂ ಹೆಚ್ಚು ಬೆಲೆಬಾಳುವ ಹುಲ್ಲಿನ ಮೇದೆಗೆ ಬೆಂಕಿಯಿಟ್ಟ ಕಿಡಿಗೇಡಿಗಳು ಕಣ್ಣೀರಿಟ್ಟ ವಿಕಲಚೇತನ ಕುಟುಂಬ

ಸರಗೂರು:4 ಜನವರಿ 2021

ಸಂಜಯ್ ಕೆ ಬೆಳತೂರು

ನಾವು ತುಂಬ ಬಡವರಾಗಿದ್ದೇವೆ ನಾವು ಬೇರೆಯವರ ಜಮೀನನ್ನ ವಾರಕ್ಕೆ ತೆಗೆದುಕೊಂಡು ಭತ್ತ ಬೆಳೆದಿದ್ದೇವು.ಭತ್ತ ಒಕ್ಕಣೆ ಮಾಡಿ ಹುಲ್ಲಿನ ಮೇದೆಯನ್ನ ಒಂದು ಕಡೆ ಶೇಖರಣೆ ಮಾಡಿದ್ವೀ ಯಾರೋ ಕಿಡಿಗೇಡಿಗಳು ಹುಲ್ಲಿನ ಮೇದೆಗೆ ಬೆಂಕಿ ಇಟ್ಟು ಓಡಿ ಹೋಗಿದ್ದಾರೆ.ಜಮೀನಿನಲ್ಲಿ ಕೆಲಸ ಮಾಡಿದ ಕೆಲಸಗಾರರಿಗೆ ಇನ್ನೂ ಸಹ ಸಂಬಳ ನೀಡಿಲ್ಲ. ಈ ಹುಲ್ಲಿನ ಮೇದವನ್ನು ಮಾರಿ ಕೆಲಸಗಾರರಿಗೆ ಹಣ ಕೊಡಬೇಕಿತ್ತು ಹೀಗ ಏನ್ ಮಾಡೋದು ಎಂದು ವಿಕಲಚೇತನ ಕುಟುಂಬ ಕಣ್ಣೀರು ಹಾಕುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಹೌದು
ಸರಗೂರು ತಾಲೂಕಿನ ಕೆ ಬೆಳತೂರು ಗ್ರಾಮದಲ್ಲಿ
20,000 ರೂ ಬೆಲೆ ಬಾಳುವ ಹುಲ್ಲಿನ ಮೇದಕ್ಕೆ ಕೀಡಿಗೇಡಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಮಧ್ಯರಾತ್ರಿ 2 ಘಂಟೆಯ ಸಮಯದಲ್ಲಿ ಬೆಂಕಿ ಹಚ್ಚಿರಬಹುದು ಎಂದು ಶಂಕೆ ವ್ಯಕ್ತವಾಗುತ್ತಿದೆ. ಹುಲ್ಲಿನ ಮೇದೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು ವಿಕಲಚೇತನ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

ವಿಕಲಚೇತನ ರೈತ ಸಿದ್ದನಾಯಕ ಮಾತನಾಡಿ ನಾನು ಒಬ್ಬ ಹುಟ್ಟಿನಿಂದಲೂ ವಿಶೇಷಚೇತನನಾಗಿದ್ದು, ನಮಗೆ ಯಾವದೇ ರೀತಿಯ ಸ್ವಂತ ಜಮೀನಾಗಲಿ, ಆಸ್ತಿಯಾಗಲಿ ಇಲ್ಲ. ಬೇರೆಯವರ ಜಮೀನಿನಲ್ಲಿ ಹುಳಿಮೆ ಮಾಡಿ ಬದುಕು ನಡೆಸುತ್ತೀದೆವೆ. ವಾರದ ಹಿಂದೆಯಷ್ಟೇ ಭತ್ತವನ್ನು ಹೊಕ್ಕಣೆ, ನಡೆಸಿ ಹುಲ್ಲನ್ನು ಸಂಗ್ರಹಿಸಲಾಗಿತ್ತು ಆದರೆ ಇಂದು ಕೀಡಿಗೇಡಿಗಳು ಈ ರೀತಿಯ ಕೆಲಸ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ. ದಯವಿಟ್ಟು ಸಂಬಂಧಪಟ್ಟವರು ಸ್ಥಳ ಪರಿಶೀಲನೆ ನಡೆಸಿ ಪರಿಹಾರ ಒದಗಿಸಿ, ಅಪರಾಧ ಎಸಗಿದವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಮನವಿ ಮಾಡಿದರು.

ಕಷ್ಟ ಪಟ್ಟು ದುಡಿದು ಕೈಗೆ ಬಂದ ತುತ್ತು ಬಾಯಿಗೆ ಬರುವ ಮುನ್ನವೇ ಕಿಡಿಗೇಡಿಗಳು ಹುಲ್ಲಿನ ಮೆದೆಗೆ ಬೆಂಕಿ ಹಚ್ಚಿರೋದನ್ನ ಕಂಡ ವಿಕಲಚೇತನರ ಕುಟುಂಬ ಗೋಳಾಡುತ್ತಿರುವ ದೃಶ್ಯ ಎಲ್ಲರ ಕಣ್ಣಂಚಿನಲ್ಲಿ ನೀರು ತರಿಸುತ್ತದೆ.

Leave a Reply

Your email address will not be published. Required fields are marked *