ಮಹರ್ಷಿ ವಾಲ್ಮೀಕಿ ಮತ್ತು ವ್ಯಾಸ ಅಧ್ಯಯನ ಪೀಠದ ಉದ್ಘಾಟನಾ ಸಮಾರಂಭದ ವಿರುದ್ದ ಪ್ರತಿಭಟನೆ

ಮೈಸೂರು:22 ಏಪ್ರಿಲ್ 2022

ನಂದಿನಿ ಮೈಸೂರು

ಮಹರ್ಷಿ ವಾಲ್ಮೀಕಿ ಮತ್ತು ವ್ಯಾಸ ಅಧ್ಯಯನ ಪೀಠದ ಉದ್ಘಾಟನಾ ಸಮಾರಂಭದಲ್ಲಿ ಪರಿಶಿಷ್ಟ ಪಂಗಡದ ಸ್ವಾಮೀಜಿ, ನಾಯಕರು,ಮುಖಂಡರನ್ನ ಆಹ್ವಾನಿಸದಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಿದರು.

ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ಸರಸ್ವತಿಪುರಂ ನಲ್ಲಿರುವ ಡಾ.ಎಸ್.ರಾಧಾಕೃಷ್ಣನ್ ತತ್ವಶಾಸ್ತ್ರದ ಮತ್ತು ಭಾರತೀಯ ಸಂಸ್ಕೃತಿ ಕೇಂದ್ರದ ಮುಂಭಾಗ ಜಮಾಹಿಸಿದ ಪ್ರತಿಭಟನಾಕಾರರು
ಕಾರ್ಯಕ್ರಮ ಮುಗಿಸಿ ಹೊರಟ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಹೇಮಂತ್ ಕುಮಾರ್ ರವರ ಕಾರನ್ನು ಅಡ್ಡಗಟ್ಟಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನನಂದಾ ಮಹಾಸ್ವಾಮಿಗಳು,
ಸಚಿವ ಶ್ರೀರಾಮುಲು ಹಾಗೂ ನಾಯಕರನ್ನು ಆಹ್ವಾನಿಸದೆ ಕಾರ್ಯಕ್ರಮ ಮಾಡುತ್ತಿರುವುದು ಖಂಡನೀಯ ಎಂದು
ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮೈಸೂರು ವಿವಿಯಲ್ಲಿಯೇ ವಾಲ್ಮೀಕಿ ಮತ್ತು ವ್ಯಾಸ ಅಧ್ಯಯನ ಪೀಠ ಆಗಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ವೇದಿಕೆ ಅಧ್ಯಕ್ಷರಾದ ದ್ಯಾವಪ್ಪನಾಯಕ.ಪ್ರಭಾಕರ ಹುಣಸೂರು,ವಕೀಲ ಪಡುವಾರಹಳ್ಳಿಯ ಎಂ ರಾಮಕೃಷ್ಣ.ಎಂ
ಶಿವಪ್ರಕಾಶ್.ಮಾದೇಶ್.ಮಂಜುನಾಥ್.ನಗರ ಕಾಂಗ್ರೆಸ್ ಪಕ್ಷದ ST ಘಟಕದ ಅದ್ಯಕ್ಷ ಎಸ್. ರೋಹೀತ್.ರವಿನಾಯಕ.ಮುಂತಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *