ದ.ಪ ಕ್ಷೇತ್ರದ ಚುನಾವಣೆಗೆ ಹೆಚ್.ಕೆ.ರಾಮು ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಸಭೆಯಲ್ಲಿ ಒಮ್ಮತದ ಒಪ್ಪಿಗೆ:ಕೆಟಿ ಶ್ರೀಕಂಠೇಗೌಡ

ಮೈಸೂರು:22 ಏಪ್ರಿಲ್ 2022

ನಂದಿನಿ ಮೈಸೂರು

ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಗೆ ಹೆಚ್. ಕೆ. ರಾಮು ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಸಭೆಯಲ್ಲಿ ಒಮ್ಮತದ ಒಪ್ಪಿಗೆ ಸೂಚಿಸಲಾಯಿತು ಎಂದು ವಿಧಾನ ಪರಿಷತ್ ಸದಸ್ಯ ಶ್ರೀ ಕಂಠೇಗೌಡ ತಿಳಿಸಿದರು.

ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಇಂದು ಮೈಸೂರು ನಗರದ ಮತ್ತು ಗ್ರಾಮಾಂತರ ಜೆ.ಡಿ.ಎಸ್. ಪ್ರಮುಖರ ಸಮ್ಮುಖದಲ್ಲಿ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ ಹಾಗೂ ಜನತಾ ಜಲಧಾರೆ ಕಾರ್ಯಕ್ರಮ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಎಚ್. ಕೆ. ರಾಮು ಅವರನ್ನೇ ಮೈಸೂರು ಭಾಗದ ಅಭ್ಯರ್ಥಿಯನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಕೃಷಿ ಗೆ ಹೆಚ್ಚಿನ ಯೋಜನೆ ಜಾರಿಗೆ ತಂದ ಪಕ್ಷ ಜೆಡಿಎಸ್.ಜನತಾ ಜಲದಾರೆ ಜಿಲ್ಲೆಗಳಲ್ಲಿ ಮಿಂಚಿನ ಸಂಚಲನ ಮೂಡಿಸುತ್ತಿದೆ‌. ಸರ್ಕಾರಿ ನೌಕರರ ಸಂಘದ ಮಾರ್ಚ್ 8 ಅಧ್ಯಕ್ಷ ಹಾಗೂ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣಾ ಅಭ್ಯರ್ಥಿ H.k. ರಾಮು, ಬೀರಿಹುಂಡಿ ಬಸವಣ್ಣ, ಕೆ. ಟಿ. ಚೆಲುವೆಗೌಡ, ವಿಕ್ರಾಂತ್ ಪೀ. ದೇವೇಗೌಡ ಸರಿದಂತೆ ಇನ್ನು ಹಲವಾರು ಮುಖಂಡರುಗಳ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಇದೇ ತಿಂಗಳ 29 ರಂದು ಮೈಸೂರು ನಗರದಲ್ಲಿ ಯಶಸ್ವಿ ಜನತಾ ಜಲದಾರೆ ಕಾರ್ಯಕ್ರಮ ನಡೆಸಲಾಗುವುದು.
ಅದಕ್ಕಾಗಿ ಹೆಚ್ಚು ಕಾರ್ಯಕರ್ತರು ಆಗಮಿಸಲಿದ್ದಾರೆ ಎಂದರು.

ಅಭ್ಯರ್ಥಿಯಾಗಿರುವ ಎಚ್.ಕೆ.ರಾಮು ತಮ್ಮ ಪ್ರಣಾಳಿಕೆ ಬಗ್ಗೆ ಮಾತನಾಡಿದರು.

ಇದೇ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ನೂರಾರು ಕಾರ್ಯಕರ್ತರು ಪದಾಧಿಕಾರಿಗಳು, ಪ್ರಮುಖರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *