ಮೇ1 ರಂದು ಗೋ – ಗ್ರೀನ್ ಗೋ – ಕ್ಲೀನ್ ” ರಸ್ತೆ ಓಟ ಕಾರ್ಯಕ್ರಮ:ಸುರೇಶ್

ಮೈಸೂರು:22 ಏಪ್ರಿಲ್ 2022

ನಂದಿನಿ ಮೈಸೂರು

ಕಾರ್ಮಿಕ ದಿನಾಚರಣೆಯ ಅಂಗವಾಗಿ ದಿವಂಗತ ಡಾ ||ಪುನೀತ್ ರಾಜ್‌ಕುಮಾರ್ ರವರ ಸ್ಮರಣಾರ್ಥವಾಗಿ ಗೋ – ಗ್ರೀನ್ ಗೋ – ಕ್ಲೀನ್ ” ರಸ್ತೆ ಓಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್ ಮಾಹಿತಿ ನೀಡಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ , ಮಾನವ್ ಟ್ರಸ್ಟ್ ಹಾಗೂ ಡೆಕತ್ಲಾನ್ ಇವರ ಸಹಯೋಗದಲ್ಲಿ ಮೇ 1 ರಂದು
05 ಕಿ.ಮೀ. ರಸ್ತೆ ಓಟ ಹಮ್ಮಿಕೊಂಡಿದ್ದು , ಜಿಲ್ಲಾ ಉಸ್ತುವಾರಿ ಸಚಿವರು , ಜನಪ್ರತಿನಿಧಿಗಳು ಹಾಗೂ ಪ್ರಖ್ಯಾತ ಹಿರಿಯ ಕ್ರಿಕೆಟ್ ಕ್ರೀಡಾಪಟು ಶ್ರೀ ಜಾವಗಲ್ ಶ್ರೀನಾಥ್ ರವರನ್ನು ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದೇವೆ.ರಸ್ತೆ ಓಟವೂ
ಚಾಮುಂಡಿ ವಿಹಾರ ಅಥ್ಲೆಟಿಕ್ಸ್ ಕ್ರೀಡಾಂಗಣ -ಉತ್ತರ ದ್ವಾರದಿಂದ ಎಸ್.ಪಿ , ಆಫೀಸ್ ಸರ್ಕಲ್ ಎಡಕ್ಕೆ ತಿರುಗಿ – ಹಾರ್ಡಿಂಗ್ ಸರ್ಕಲ್ ಬಲಕ್ಕೆ ಕೋಟೆ ಆಂಜನೇಯಾ ದೇವಸ್ಥಾನದ ಮುಖಾಂತರ – ಕೆ.ಆರ್‌ . ಸರ್ಕಲ್ ಎಡಕ್ಕೆ ಮೈಸ ಮಹಾನಗರ ಪಾಲಿಕೆ ವೃತ್ತದ ಎಡಕ್ಕೆ ಕೋಟೆ ಮಾರಮ್ಮನ ದೇವಸ್ಥಾನದ ಮುಖಾಂತರ – ಅರಮನೆ ಬಲರಾಮ ದ್ವಾರ ರಸ್ತೆ ಮುಖಾಂತರ ಹಾರ್ಡಿಂಗ್ ಸರ್ಕಲ್ ಎಡಕ್ಕೆ ತಿರುಗಿ , ಪೊಲೀಸ್ ಆಯುಕ್ತರ ಕಛೇರಿ ಮುಖಾಂತರ – ನಜರ್‌ಬಾದ್ ಪೊಲೀಸ್ ಠಾಣೆ ಮುಖಾಂತರ ಚಾಮುಂಡಿ ವಿಹಾರ ಕ್ರೀಡಾಂಗಣದ ಮುಖ್ಯ ದ್ವಾರದ ಮುಖಾಂತರ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ಮುಕ್ತಾಯಗೊಳ್ಳಲಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು,  ಸುಮಾರು 300 ರಿಂದ 500 ಕ್ರೀಡಾಪಟುಗಳು , ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು. 

ಸುದ್ದಿಗೋಷ್ಟಿಯಲ್ಲಿ ಸಾಗರ್ , ವಿವೇಕ್, ಸಚಿನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *