ಮೈವಿವಿ ಕುಲಪತಿ,ಕುಲಸಚಿವರು ನಡೆಸುತ್ತಿರುವ ಭ್ರಷ್ಟಚಾರ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ

ಮೈಸೂರು:21 ಏಪ್ರಿಲ್ 2022

ನಂದಿನಿ ಮೈಸೂರು

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿಗಳು ಕುಲಸಚಿವರು ನಡೆಸುತ್ತಿರುವ ಭ್ರಷ್ಟಚಾರವನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಿದರು.

ಮೈಸೂರಿನ ಮುಕ್ತ ವಿಶ್ವವಿದ್ಯಾಲಯದ ಮುಂಭಾಗ ಜಮಾಹಿಸಿದ ಪ್ರತಿಭಟನಾಕಾರರು ಕುಲಪತಿ,ಕುಲಸಚಿವರ ವಿರುದ್ದ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್ ಮಾತನಾಡಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪೋ. ವಿದ್ಯಾಶಂಕರ್ ಹಾಗೂ ಕುಲ ಸಚಿವರಾದ ಆರ್ . ರಾಜಣ್ಣ ರವರು ತಾತ್ಕಾಲಿಕ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುತ್ತಿರುವುದು ಸರ್ಕಾರ ಆದೇಶದ ಉಲ್ಲಂಘನೆ ಮತ್ತು ಕಾನೂನು ಬಾಹಿರವಾಗಿದೆ ಎಂದು ತಿಳಿದಿದ್ದರು .ಒಂದು ಗಂಟೆಯಲ್ಲಿ 25 ಕ್ಕೂ ಹೆಚ್ಚು ಜನರನ್ನು ಸಂದರ್ಶನ ಮಾಡಿದ್ದಾರೆ.ಇವರು ಸುಮಾರು 100 ಕ್ಕೂ ಹೆಚ್ಚು ಜನರನ್ನು ಆದೇಶವಿಲ್ಲದೇ ನೇಮಕ ಮಾಡಿದ್ದಾರೆ. ಮೇಲ್ನೋಟಕ್ಕೆ ಭ್ರಷ್ಟಚಾರ ಕಂಡುಬರುತ್ತಿದೆ.
ಈ ಕೂಡಲೇ ಸರ್ಕಾರ ಗಮನ ಹರಿಸಿ ಕ್ರಮಕೈಗೊಳ್ಳಬೇಕು.ಇಲ್ಲವಾದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ 50 ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *