ಏ.23 ರಂದು ಹನುಮ ಜಯಂತೋತ್ಸವ ಉತ್ಸವ:ಮಹೇಶ್

ಮೈಸೂರು:21 ಏಪ್ರಿಲ್ 2022

ನಂದಿನಿ ಮೈಸೂರು

ಕರುನಾಡ ವಿಜಯ ಸೇನೆಯ ರಾಜ್ಯ ಯುವ ಘಟಕದ ವತಿಯಿಂದ
ಏ.23 ರಂದು ನಡೆಯಲಿರುವ ಹನುಮ ಜಯಂತೋತ್ಸವ ಉತ್ಸವದ ಪೋಸ್ಟರ್ ಬಿಡುಗಡೆಗೊಂಡಿತು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ
ರಾಜ್ಯ ಯುವ ಘಟಕದ ಅಧ್ಯಕ್ಷರಾದ ಮಹೇಶ್ ಆರ್ ಎಸ್ ಪೋಸ್ಟರ್ ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಅವರು ರಾಜ್ಯದಲ್ಲಿ ಸುಮಾರು ವಿಜಯ ಸೇನೆಯಲ್ಲಿ 1 ವರೆ ಲಕ್ಷ ಜನ ಕಾರ್ಯಕರ್ತರಿದ್ದಾರೆ.ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಹನುಮ ಜಯಂತೋತ್ಸವ ಉತ್ಸವ ಆರಂಭಿಸಿದ್ದೇವೆ.ಏ.23 ರಂದು ಮೈಸೂರಿನ ಮಹಾರಾಜ ಮೈದಾನದಿಂದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದವರೆಗೂ ಹನುಮ ಜಯಂತೋತ್ಸವ ಉತ್ಸವವನ್ನು ಆಯೋಜಿಸಿದ್ದೆವೆ. ಈಗಿನ ಉತ್ಸವದಲ್ಲ 5 ಹನುಮನ ಮೂರ್ತಿಗಳು ಮತ್ತು ಅನೇಕ ಕಲಾತಂಡಗಳು ಭಾಗವಹಿಸುತ್ತವೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಮಂಟಪವನ್ನು ನಿರ್ಮಿಸಿ ಆಂಜನೇಯಸ್ವಾಮಿಗೆ ಪುಷ್ಪಾರ್ಚನೆ‌ ಮಾಡಲಿದ್ದೇವೆ.ನಟ ಧ್ರುವ ಸರ್ಜಾ ಉತ್ಸವಕ್ಕೆ ಮೆರಗು ನೀಡಲಿದ್ದಾರೆ.3 ರಿಂದ 5 ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದರು.

ರಾಜ್ಯ ಉಪಾಧ್ಯಕ್ಷ ಸಚ್ಚಿದಾನಂದ, ವಿಜಯಕುಮಾರ್,ಸುರೇಶ್ ಆರ್,
ಮಂಜುನಾಥ್ ಪಟೇಲ್ ,ಸಂಜಯ್ ಜಿ , ಜೀವನ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *