ಮೈಸೂರು:21 ಏಪ್ರಿಲ್ 2022
ನಂದಿನಿ ಮೈಸೂರು
ಮೈಸೂರಿನಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜನ್ನು ಶ್ರೀಘ್ರದಲ್ಲಿ ಪ್ರಾರಂಭಿಸಬೇಕೆಂದು ಒತ್ತಾಯಿಸಿ ಇಂದು ಕರ್ನಾಟಕ ಸೇನಾಪಡೆಯಿಂದ ಪ್ರತಿಭಟನೆ ನಡೆಯಿತು.
ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಹಿಸಿದ ಪ್ರತಿಭಟನಾಕಾರರು ಸರ್ಕಾರಕ್ಕೆ ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಮಾತನಾಡಿ ಮೈಸೂರು ನಗರದಲ್ಲಿ ಲಕ್ಷಾಂತರ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಇದ್ದಾರೆ.ಆದರೇ ಮೈಸೂರಿನಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಇಲ್ಲದಿರುವುದು ಅತ್ಯಂತ ನೋವಿನ ಸಂಗತಿ.
ಮೈಸೂರಿನಲ್ಲಿರುವ ಬಡವಿದ್ಯಾರ್ಥಿಗಳಿಗೆ ಅಗತ್ಯವಾದ ಸುಸಜ್ಜಿತ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಕಾಲೇಜಿನಲ್ಲಿ ಹಾಸ್ಟೆಲ್, ಪ್ರಯೋಗಾಲಯ, ಗ್ರಂಥಾಲಯ ಸೇರಿದಂತೆ ಅತ್ಯಾಧುನಿಕ ರೀತಿಯಲ್ಲಿ, ಶೈಲಿಯಲ್ಲಿ ಕಾಲೇಜು ತಲೆಯೆತ್ತಬೇಕು. ಈ ನೂತನ ಕಾಲೇಜಿನಿಂದ ಮೈಸೂರು ಮತ್ತು ಸುತ್ತಮುತ್ತಲಿನ ಗ್ರಾಮೀಣ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ವೃತ್ತಿ ಶಿಕ್ಷಣ ಪಡೆಯಲು ಅನುಕೂಲವಾಗಬೇಕು. ಇದರಲ್ಲಿ ಜಾಗತಿಕ ಗುಣಮಟ್ಟದ ಬೋಧನೆ ಇದ್ದು ಸ್ಥಳೀಯ ಸಮುದಾಯಕ್ಕೆ ಇದರ ಲಾಭ ದೊರಕುವಂತಾಗಬೇಕು ಎಂದು ಒತ್ತಾಯಿಸಿ ಮೈಸೂರು ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇವೆ ಎಂದರು.
ಪ್ರತಿಭಟನೆಯಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಸಿ. ಜಿ ಗಂಗಾಧರ್, ಡಾ. ಶಾಂತರಾಜೇಅರಸ್, ಮರಿಸ್ವಾಮಿ, ಮೊಗಣ್ಣಾಚಾರ್,ಪ್ರಜೀಶ್ ಪಿ, ದರ್ಶನ್ ಗೌಡ, ಬಂಗಾರಪ್ಪ, ಎಳನೀರು ರಾಮಣ್ಣ, ಯೋಗೀಶ್ ಉಪ್ಪಾರ, ವಿಜಯೇಂದ್ರ, ಮಧುವನಚಂದ್ರು, ಡಾ ರಾಜ್ ಸೇನೆಯ ಮಹದೇವಸ್ವಾಮಿ, ಬಸವರಾಜು, ರಘು, ಅನಿಲ್, ಮಂಜುನಾಥ,ರಾಮನಾಯಕ್,ಅಂಬಾ ಅರಸ್, ರಾಧಾಕೃಷ್ಣ, ಸುಜಾತದುರ್ಗೇಶ್ ಪಿಎಸ್, ನಂದ ಕುಮಾರ್ ಸಿಎಂಆರ್, ಇಂದಿರಾ, ಶ್ರೀನಿವಾಸ್, ಪ್ರಭಾಕರ, ಗಣೇಶ್ ಪ್ರಸಾದ್, ಸುಂದರಪ್ಪ, ಗೊರೂರು ಮಲ್ಲೇಶ್, ದೀಪಕ್, ಮನುನಾಯಕ, ಸುಬ್ಬೇಗೌಡ, ಜಗದೀಶ್ ಪಿ, ವಿಜಯದೇವರಾಜೇಅರಸ್, ಕಲೀಂ, ರಮೇಶ್, ಪಣ್ಯದುಂಡಿ ರಾಜು ಉಪಸ್ಥಿತರಿದ್ದರು.