ಹನಗೋಡು ಹೋಬಳಿಯ ಹೆಗ್ಗಂದೂರು ಕೃಷಿ ಪತ್ತಿನ ಸಹಕಾರ ಸಂಘದ ನವೀಕೃತ ಕಟ್ಟಡ ಉದ್ಘಾಟನೆ

 

ದಾ ರಾ ಮಹೇಶ್ ಹುಣಸೂರು

ರೈತರು ಸಹಕಾರಿ ಬ್ಯಾಂಕ್‌ಗಳಲ್ಲಿ ಶೂನ್ಯ ಬಡ್ಡಿದರದ ಸಾಲ- ಸೌಲಭ್ಯವನ್ನು ಪಡೆದುಕೊಂಡು ಸಕಾಲದಲ್ಲಿ ಮರುಪಾವತಿ ಮಾಡಿಕೊಂಡು ತಮ್ಮ ಆರ್ಥಿಕಾಭಿವೃದ್ದಿ ಜೊತೆಗೆ ಸಹಕಾರ ಸಂಘಗಳ ಬೆಳವಣಿಗೆಗೆ ಸಹಕಾರಿಯಾಗಬೇಕೆಂದು ಮಾಜಿ ಸಚಿವರು ಹಾಗೂ ರಾಜ್ಯ ಸಹಕಾರ ಮಹಾ ಮಂಡಲದ ಅಧ್ಯಕ್ಷರಾದ ಶಾಸಕ ಜಿ.ಟಿ ದೇವೇಗೌಡ ತಿಳಿಸಿದರು.

ಹನಗೋಡು ಹೋಬಳಿಯ ಹೆಗ್ಗಂದೂರು ಕೃಷಿ ಪತ್ತಿನ ಸಹಕಾರ ಸಂಘದ ನವೀಕೃತ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿ ರೈತರು ತಾವು ಪಡೆದ ಸಾಲವನ್ನು ಕೃಷಿ ಚಟುವಟಿಕೆಗಳಿಗೆ ಉಪಯೋಗಿಸಿ ಕಡಿಮೆ ಖರ್ಚಿನಲ್ಲಿ ಮಿಶ್ರ ಬೇಸಾಯದೊಂದಿಗೆ ತರಕಾರಿ, ಹೈನುಗಾರಿಕೆ ಸೇರಿದಂತೆ ತೋಟಗಾರಿಕ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸದೃಢರಾಗಬೇಕೆಂದು ಸಲಹೆ ನೀಡಿ ನಾನು ಕೂಡ ಸಹಕಾರ ಸಂಘದ ಕಾರ್ಯದರ್ಶಿಯಾಗಿ ಮತ್ತು ರೈತನಾಗಿ . ರೈತರ ಕಷ್ಟ-ಸುಖ ಬಹಳ ಹತ್ತಿರದಿಂದ ಬಲ್ಲವನಾಗಿದ್ದೇನೆ, ಸಹಕಾರ ಸಂಘದ ಕಾರ್ಯದರ್ಶಿಗಳು ರೈತರ ಕಷ್ಟಸುಖಗಳಲ್ಲಿ ಭಾಗಿಯಾಗಿ ಅವರ ಅನುಕೂಲಕ್ಕೆ ತಕ್ಕಂತೆ ಹೈನುಗಾರಿಕೆ, ಟ್ಯಾಕ್ಟರ್, ಪಂಪ್‌ಸೆಟ್ ಸಾಲ ಸೇರಿದಂತೆ ಇನ್ನಿತರೆ ಸಾಲ ಸೌಲಭ್ಯಗಳನ್ನು ನೀಡಿ ರೈತರ ಕಣ್ಣೀರು ಒರೆಸುವ ಕೆಲಸವನ್ನು ಸಹಕಾರ ಸಂಘದ ಕಾರ್ಯದರ್ಶಿಗಳು ಮಾಡಬೇಕೆಂದು ಕಿವಿಮಾತು ಹೇಳಿದರು.

ಹುಣಸೂರು ತಾಲೋಕು ಅಭಿವೃದ್ದಿಗೆ ಶ್ರಮ;
ಈ ಹಿಂದೆ ನಾನು ಹುಣಸೂರಿನಿಂದ ಎರಡು ಬಾರಿ ಶಾಸಕನಾಗಿದ್ದ ವೇಳೆ ಅಂದಿನ ಹಣಕಾಸು ಮಂತ್ರಿ ಹಾಗೂ ಉಪಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನವರ ಅವಧಿ ಹಾಗೂ ನಾನು ಸಹಕಾರ ಸಚಿವನಾಗಿದ್ದ ವೇಳೆ ಹುಣಸೂರು ತಾಲೂಕಿಗೆ ಒಂದೇ ಆದೇಶದಲ್ಲಿ 220 ಹಳ್ಳಿಗಳಿಗೆ 75 ಕುಡಿಯುವ ನೀರಿನ ಟ್ಯಾಂಕ್‌ಗಳು, 16 ಪ್ರೌಢಶಾಲೆ 4 ಕೆಇಬಿ ಸಬ್‌ಸ್ಟೇಷನ್‌ಗಳು, ಮಂಜೂರು ಮಾಡಿಸಿದ್ದಲ್ಲದೆ 6 ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಆಸ್ಪತ್ರೆಗಳನ್ನು 4 ಪಶುಆಸ್ಪತ್ರೆಗಳನ್ನು ನನ್ನ ಅಧಿಕಾರ ಅವಧಿಯಲ್ಲಿ ಮಂಜೂರು ಮಾಡಿಸಿದ ತೃಪ್ತಿ ನನಗಿದೆ ಮತ್ತು ಸುಮಾರು 35 ಸಾವಿರ ಎಕರೆ ಪ್ರದೇಶವನ್ನು ಸಣ್ಣ ನೀರಾವರಿ ಇಲಾಖೆಯಿಂದ ಹಾರಂಗಿ ಇಲಾಖೆಗೆ ವರ್ಗಾವಣೆ ಮಾಡಿಸಿ ಹಾರಂಗಿ ಕಾಲುವೆಗಳ ಮೂಲಕ ರೈತರ ಭೂಮಿಗೆ ನೀರುಣಿಸುವ ಕಾಮಗಾರಿ ಆಧ್ಯತೆ ನೀಡಿದ್ದೆ, ಇದಲ್ಲದೆ ನೋಂದ ಬಡಜನತೆ ಅನುಕೂಲವಾಗಲೆಂದು ಪ್ರತಿ ಹಳ್ಳಿಗಳಿಗೆ ತಾಲೋಕು ಆಧಿಕಾರಿಗಳೊಂದಿಗೆ ಭೇಟಿ ನೀಡಿ ವಿಧವೆ, ವೃದ್ಧಾಪ್ಯ, ಅಂಗವಿಕಲ ವೇತನ ಮಂಜೂರಾತಿ ಪತ್ರವನ್ನು ಸ್ಥಳದಲ್ಲೇ ವಿತರಣೆ ಇನ್ನೂ ಹತ್ತು ಹಲವು ಸರ್ಕಾರಿ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕಾರ್ಯವನ್ನು ಕೈಗೊಂಡು ತಾಲೋಕು ಆಭಿವೃದ್ದಿಗೆ ಶ್ರಮಿಸಿದ್ದೇನೆಂದರು.ಅಲ್ಲಾದೆ ನನ್ನ ಪತ್ನಿ ಲಲಿತಾ ರವರು ಹನಗೋಡು ಜಿಲ್ಲಾ ಪಂಚಾಯತ್ ಸದಸ್ಯರಾಗಿ 1300ಕ್ಕೂ ಹೆಚ್ಚು ಮನೆಗಳನ್ನು ಮಂಜೂರು ಮಾಡಿಸಿದ್ದಲ್ಲದೆ ಈ ಭಾಗದ ರಸ್ತೆಗಳ ತುಂಬಾ ಹಾಳಾಗಿದ್ದ ಸಂದರ್ಭದಲ್ಲಿ ಸರ್ಕಾರದ ಗಮನಕ್ಕೆ ತಂದು ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡಿದ್ದರು ನನ್ನ ಮಗ ಜಿ ಡಿ ಹರೀಶ್ ಗೌಡನಿಗೂ ರಾಜಕೀಯವಾಗಿ ನೆಲೆ ನೀಡಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ನಿಮ್ಮಗಳ ಸೇವೆ ಮಾಡಲು ಅವಕಾಶ ಮಾಡಿ ಕೊಟ್ಟಿರುವುದು ನಮಃ ಕುಟುಂಬ ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು.

ಹನಗೋಡು ನನ್ನ ತವರೂರು;
ಹುಣಸೂರು ತಾಲೂಕಿನ ಜನ ನನ್ನ ಕುಟುಂಬಕ್ಕೆ ರಾಜಕೀಯವಾಗಿ ಎಲ್ಲಾ ರೀತಿಯ ಶಕ್ತಿ ನೀಡಿದೆ, ಹಾಗಾಗಿ ನಾನು ಮತ್ತು ನನ್ನ ಕುಟುಂಬ ಯಾವಾಗಲೂ ಚಿರಋಣಿಯಾಗಿರುತ್ತೇವೆ. ಹನಗೋಡು ಹೋಬಳಿಯನ್ನು ನಾನು ಈ ಹಿಂದೆ ನಮ್ಮ ತವರೂರು ಎಂದು ಹೇಳಿದ್ದೆ ಇಂದಿಗೂ ಸಹ ಅದು ನನ್ನ ತವರೂರ ಆ ರೀತಿಯಲ್ಲಿ ಜನ ಪ್ರೋತ್ಸಾಹದೊಂದಿಗೆ ಸಹಕಾರ ನೀಡಿದ್ದಾರೆ.

ದುಂದು ವೆಚ್ಚಕ್ಕೆ ಕಡಿವಾಣ ಹಾಕಿ;
ರೈತರು ತಮ್ಮ ಮಕ್ಕಳ ಮದುವೆ ಸೇರಿದಂತೆ ಹಬ್ಬ-ಹರಿದಿನಗಳಿಗೆ ಬಡ್ಡಿ ಸಾಲ ಮಾಡಿ   ದುಂದುವೆಚ್ಚ ಮಾಡಬೇಡಿ, ತಮ್ಮ ಹೆಣ್ಣುಮಕ್ಕಳ ಮದುವೆ ಮಾಡಲು ಆಸ್ತಿ ಮಾರಿ ಮಧುವೆ ಮಾಡುವ ಬದಲು ಅದೇ ಆಸ್ತಿಯನ್ನು ನಿಮ್ಮ ಮಗಳ ಹೆಸರಿಗೆ ಬರೆದು ಸರಳ ಮಧುವೆ ಮಾಡಿಕೊಟ್ಟು ಅವರ ಉತ್ತಮ ಜೀವನ ಮಟ್ಟ ರೂಪಿಸಲು ಸಹಕಾರಿಯಾಗಿ ಎಂದರು.

ಕಾರ್ಯಕ್ರಮದಲ್ಲಿ ಸಂಘದ ಆಧ್ಯಕ್ಷ ಬೆಟ್ಟೆಗೌಡ, ಮಾಜಿ ಆಧ್ಯಕ್ಷರಾದ ರವಿಗೌಡ, ಲಿಂಗರಾಜಪ್ಪ, ವೆಂಕಟರಾಮಶೆಟ್ಟಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಚಂದ್ರೇಗೌಡ, ಜಿಲ್ಲಾ ಸಹಕಾರ ಬ್ಯಾಂಕ್ ನಿರ್ಧೇಶಕ ನಾಗಪ್ರಸಾದ್, ಎಪಿಎಂಸಿ ಮಾಜಿಆಧ್ಯಕ್ಷರಾದ ಮುದಗನೂರು ಸುಭಾಷ್, ಕಿರಂಗೂರು ಬಸವರಾಜ್, ನಗರಸಭಾ ಸದಸ್ಯ ಸತೀಶ್, ತಾ.ಪಂ ಮಾಜಿ ಸದಸ್ಯ ಎಚ್ ಆರ್ ರಮೇಶ್, ಬ್ಯಾಂಕಿನ ಸಹಾಯಕ ಪ್ರಭಂಧಕ ಭರತ್‌ಕುಮಾರ್, ಮೇಲ್ವಿಚಾರಕ ರಮೇಶ್, ಹನಗೋಡು ಸಹಕಾರಬ್ಯಾಂಕ್ ಆದ್ಯಕ್ಷ ಹನುಮರವಿಕುಮಾರ್, ಮುಖಂಡರಾದ ಶ್ರೀನೀವಾಸ್, ಜವರೇಗೌಡ, ವೀರಭದ್ರಪ್ಪ, ರಾಗಿಶಿವಣ್ಣ, ತಿಮ್ಮೇಗೌಡ, ಚಲುವೇಗೌಡ ಸೇರಿದಂತೆ ಸಂಘದ ನಿರ್ಧೇಶಕರು ಹಾಗೂ ಗ್ರಾಮಸ್ಥರು ಹಾಜರಿದ್ದರು.

 

Leave a Reply

Your email address will not be published. Required fields are marked *