ಹಾಡಿ ಜನರೇ ತಪ್ಪದೇ ಲಸಿಕೆ ಹಾಕಿಸಿಕೊಳ್ಳಿ ಡಾ.ರವಿಕುಮಾರ್ ಮನವಿ

 

 

ಸರಗೂರು:11 ಆಗಸ್ಟ್ 2021

ನ@ದಿನಿ

ತಾಲ್ಲೂಕಿನ ಬಡಗಲುಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಮುತ್ತಿಗೆ ಹುಂಡಿ ಹಾಡಿ, ಜಯಲಕ್ಷ್ಮಿಪುರ ಹಾಗೂ ಬಿ.ಮಟಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಕೇಬ್ಬೆಪುರ ಹಾಡಿಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಲಸಿಕೆಯ ವರದಿಗಳನ್ನು ಪರಿಶೀಲಿಸಿ ಬಳಿಕ ಹಾಡಿಯ ಜನರು ಲಸಿಕೆಗಳನ್ನು ಪಡೆದುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಮನವರಿಕೆ ಮಾಡಿ ಜಾಗೃತಿ ಮೂಡಿಸಿದರು. 

ಪರಿಶೀಲನೆ ನಡೆಸಿ ಬಳಿಕ ಮಾತನಾಡಿದ ಯುನಿಸೆಫ್‍ನ ಪ್ರತಿನಿಧಿ ಮನೋಜ್ ಸಾಬ್ಯಾಸ್ಟಿನ್, ಗಿರಿಜನ ಹಾಡಿಗಳಲ್ಲಿ ಕೊವೀಡ್ ವ್ಯಾಕ್ಸಿನೇಷನ್ ಪ್ರಕ್ರಿಯೆ ಹೇಗಿದೆ ಹಾಗೂ ಲಸಿಕೆ ಪಡೆಯಲು ಜನರು ಹಿಂಜರಿಯಲು ಕಾರಣಗಳೇನು ಎಂಬುದರ ಬಗ್ಗೆ ತಿಳಿದುಕೊಳ್ಳಲು ಇಂದು ಹಾಡಿಗಳಿಗೆ ಭೇಟಿ ನೀಡಲಾಗಿದೆ. ಕೆಲವು ಹಾಡಿಗಳಲ್ಲಿ ಜನರು ಸ್ವಯಂ ಪ್ರೇರಣೆಯಿಂದ ಬಂದು ಲಸಿಕೆಯನ್ನು ಪಡೆದುಕೊಳ್ಳುತ್ತಿದ್ದು, ಕೆಲಭಾಗಗಳಲ್ಲಿ ಮಾತ್ರ ಹಿಂಜರಿಕೆ ಕಂಡುಬಂದಿದೆ. ಇದಕ್ಕೆ ಕಾರಣ ವ್ಯಾಕ್ಸಿನ್ ಪಡೆಯಲು ಹೋದರೆ ಕೆಲಸಗಳ ಕೈ ತಪ್ಪಬಹುದು ಎಂಬ ಆತಂಕ ಹಾಗೂ ಮಧ್ಯಪಾನ ಮಾಡುವುದರಿಂದ ಸಮಸ್ಯೆಯಾಗಬಹುದು ಎಂಬುದು ಕೆಲವರ ಆತಂಕವಾಗಿದೆ. ಇನ್ನೂ ಕೆಲವರಲ್ಲಿ ವ್ಯಾಕ್ಸಿನ್ ಸಂಬಂಧಿಸಿದಂತೆ ಭಯಗಳು ಹೆಚ್ಚಾಗಿದೆ. ಈ ಕಾರಣದಿಂದಾಗಿ ಜನರು ಹಿಂಜರಿಯುತ್ತಿದ್ದು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಪ್ರತಿ ಮನೆ ಮನೆಗೆ ಭೇಟಿ ನೀಡುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಹಾಗೂ ಗಿರಿಜನ ಮುಖಂಡರ ಮೂಲಕವು ಸಹ ಅರಿವು ಮೂಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ರೀತಿ ಜಾಗೃತಿ ಮೂಡಿಸಿ ಆದಷ್ಟು ಬೇಗ  ಎಲ್ಲಾರಿಗೂ ಲಸಿಕೆ ನೀಡುವ ಮೂಲಕ ಮೂರನೇ ಅಲೆಯನ್ನು ಯಶಸ್ವಿಯಾಗಿ ತಡೆಯಬೇಕಾಗಿದೆ ಎಂದರು.

ಸ್ಥಳದಲ್ಲಿ ತಾಲ್ಲೂಕು ಆರೋಗ್ಯಧಿಕಾರಿ ಡಾ.ಟಿ.ರವಿಕುಮಾರ್, ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಮುನಿಂದ್ರಮ್ಮ, ವೈದ್ಯಾಧಿಕಾರಿಗಳಾದ ಡಾ.ಅಲೀಂ ಪಾಷ, ಡಾ.ಚಂದ್ರಶೇಖರ್, ಆಶಾ ಮತ್ತು ಅಂಗನಾವಾಡಿ ಕಾರ್ಯಕರ್ತರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.

Leave a Reply

Your email address will not be published. Required fields are marked *