ಮೈಸೂರು:11 ಆಗಸ್ಟ್ 2021
ನ@ದಿನಿ
ಅಧಿಕಾರಿಗಳಿಗೆ ಕಿವಿ ಕೇಳುತ್ತಿಲ್ಲ,ಜನಪ್ರತಿನಿಧಿಗಳಿಗೆ ಕಣ್ಣು ಕಾಣುತ್ತಿಲ್ಲ.ರಾಮಕೃಷ್ಣ ಆಶ್ರಮದ ಸ್ವಾಮೀಜಿಗಳು
ಸ್ವಾಮಿ ವಿವೇಕಾನಂದರವರ ಹೆಸರಿನಲ್ಲಿ ಅವಿವೇಕದ ಕೆಲಸ ಮಾಡುತ್ತಿದ್ದಾರೆ.ಒಂದು ವೇಳೆ ಶಾಲೆ ಕೆಡವಿದ್ದೇ ಆದ್ದಲ್ಲಿ ರಾಮಕೃಷ್ಣ ಆಶ್ರಮಕ್ಕೆ ಮುತ್ತಿಗೆ ಹಾಕುವುದಾಗಿ ಉರಿಲಿಂಗಿಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಮಹಾರಾಣಿ ಮಾದರಿ (ಎನ್.ಟಿ.ಎಂ) ಶಾಲೆ ಉಳಿಸಿ ಹೋರಾಟ ಒಕ್ಕೂಟ ಶಾಲೆ ಉಳಿವಿಗಾಗಿ 45 ದಿನಗಳಿಂದ ಹೋರಾಟ ನಡೆಸುತ್ತಿದ್ದು ಇಂದು ಉರಿಲಿಂಗಿಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಹೋರಾಟಕ್ಕೆ ಕೈ ಜೋಡಿಸಿ ಮಾತನಾಡಿದ ಅವರು ಕೋರ್ಟಿಗೆ ಸರ್ಕಾರ ವರದಿಯನ್ನು ತಪ್ಪಾಗಿ ನೀಡಿದೆ.ರಾಮಕೃಷ್ಣ ಆಶ್ರಮದ ಸ್ವಾಮಿಜೀಗಳು ವಿನಯ, ವಿವೇಕ, ಕರುಣೆ ಹೇಳಿಕೊಡುವುದನ್ನ ಬಿಟ್ಟು ಇತಿಹಾಸ ಪ್ರಸಿದ್ದ ಹೆಣ್ಣು ಮಕ್ಕಳ ಶಾಲೆ ಕೆಡವಿ ಅದರ ಮೇಲೆ ವಿವೇಕಾನಂದ ಸ್ಮಾರಕ ಕಟ್ಟುತ್ತೇವೆ ಎಂದು ಹೊರಟಿದ್ದಾರೆ.ಇದು ವಿವೇಕಾನಂದರವರಿಗೆ ಎಳ್ಳು ನೀರು ಬಿಟ್ಟಂಗಲ್ಲವೇ.
ಶಾಲೆಯನ್ನು ಉಳಿಸಿಕೊಂಡು ವಿವೇಕಾನಂದರ ಸ್ಮಾರಕ ನಿರ್ಮಾಣ ಮಾಡಬೇಕು.ಶಾಲೆ ಕೆಡವಿದ್ದೇ ಆದ್ದಲ್ಲಿ ಪ್ರಗತಿಪರ ಮಠಾಧೀಶರು,ಕನ್ನಡ ಪರ ಹೋರಾಟಗಾರರು,ಪ್ರಜ್ಞಾವಂತರು ಒಟ್ಟಿಗೆ 10 ಸಾವಿರ ಜನ ಸೇರಿ ರಾಮಕೃಷ್ಣ ಆಶ್ರಮಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ತಿಳಿಸಿದರು.