ಹೆಲ್ತಿ ಮಿಲ್ಲೆಟ್ ಮಿಕ್ಸ್ ಮಾರುಕಟ್ಟೆಗೆ ಲೋಕಾರ್ಪಣೆಗೊಳಿಸಿದ ಸುತ್ತೂರು ಶ್ರೀಗಳು

ಮೈಸೂರು:11 ಆಗಸ್ಟ್ 2021

ನ@ದಿನಿ

 

       ಸೌಖ್ಯ ನ್ಯಾಚುರಲ್ಸ್ ಫುಡ್ ಆಂಡ್ ಬೇವೇರೆಜಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ವತಿಯಿಂದ ತಯಾರಿಸಲಾದ ಮಹತ್ತ್ವ ಹೆಲ್ತಿ ಮಿಲ್ಲೆಟ್ ಮಿಕ್ಸ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.

        ಮೈಸೂರಿನ ಸುತ್ತೂರು ಮಠದಲ್ಲಿ ಹಮ್ಮಿಕೊಂಡಿದೆ. ಸುತ್ತೂರು ಮಠದ ಜಗದ್ಗುರು ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಯವರು ತಮ್ಮ ದಿವ್ಯ ಅಮೃತ ಹಸ್ತದಿಂದ ಇದನ್ನು ಬಿಡುಗಡೆ ಮಾಡಲಿದ್ದು, ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಮಿಷನ್ ಆಶ್ರಮದ ಅಧ್ಯಕ್ಷ ಡಾ ಆರೂಢಭಾರತೀ ಸ್ವಾಮೀಜಿ,ಸೌಖ್ಯ ನ್ಯಾಚುರಲ್ ಫುಡ್ ಕಂಪನಿಯ ಮುಖ್ಯಸ್ಥ ಜಗದೀಶ್ ಕೆ. ಎಚ್. ಹಾಗೂ ಹಲವಾರು ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ಸಂಸ್ಥೆಯ ಉತ್ಪನ್ನಗಳನ್ನು ಮಾರುಕ್ಟೆಗೆ ಪರಿಚಯಿಸುವ ಮುನ್ನ ಕೋವಿಡ್ ವಾರಿಯಾರ್ಸ್ ಗಳಾದ ವೈದ್ಯರು , ಪೊಲೀಸರು ಹಾಗೂ ಪೌರಕಾರ್ಮಿಕ ಸಿಬ್ಬಂದಿವರ್ಗಕ್ಕೆ ಉತ್ಪನ್ನಗಳನ್ನು ಉಚಿತವಾಗಿ ವಿತರಿಸಲಾಗುವುದು.

ಮಹತ್ವ ಹೆಲ್ತಿ ಮಿಕ್ಸ್ ಅನ್ನು ಸಿರಿಧಾನ್ಯ, ಮೊಳಕೆ ಕಟ್ಟಿದ ದ್ವಿದಳ ಧಾನ್ಯಗಳು, ಒಣ ಹಣ್ಣಗಳು, ಖಾದ್ಯ ಬೀಜಗಳು ಮತ್ತು ಆಯುರ್ವೇದಿಕ್ ಗಿಡಮೂಲಿಕೆಗಳಿಂದ ತಯಾರಿಸಲಾಗಿದೆ. ಯಾವುದೇ ಕಲಬೆರಕೆ ರಹಿತವಾಗಿದ್ದು, ಕೆಮಿಕಲ್ಸ್ ಮತ್ತು ಪ್ರಿಸರ್ವಟಿವೆಸ್ ರಹಿತವಾಗಿದೆ. ಶೇ 100%ರಷ್ಟು ನ್ಯಾಚುರಲ್ ಹೆಲ್ತ್ ಮಿಕ್ಸ್ ಆಗಿದ್ದು ದೇಹಕ್ಕೆ ಬೇಕಾದ ಎಲ್ಲಾ ತರದ ಪೌಷ್ಟಿಕಾಂಶಗಳನ್ನು ಒಳಗೊಂಡಿದೆ.

 

Leave a Reply

Your email address will not be published. Required fields are marked *