ದಕ್ಷಿಣ ಪದವೀಧರ ಕ್ಷೇತ್ರಕ್ಕೆ ಬಿ.ಜೆ.ಪಿ ಯಿಂದ ಟಿಕೇಟ್ ಸಿಗುವ ಭರವಸೆ ಇದೆ ಡಾ. ಈ.ಸಿ.ನಿಂಗರಾಜ್ ಗೌಡ

 

ಮೈಸೂರು:11 ಆಗಸ್ಟ್ 2021

ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ ಹಿನ್ನಲೆಯಲ್ಲಿ ಡಾ. ಈ.ಸಿ. ನಿಂಗರಾಜು ಗೌಡ ಸ್ನೇಹ ಬಳಗದ ವತಿಯಿಂದ ವಿಜಯನಗರ ಮೂರನೇ ಹಂತದಲ್ಲಿರುವ ಖಾಸಗಿ ಕ್ಲಬ್ ನಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.

ಮುಂದಿನ ವರ್ಷ ಜೂನ್ ತಿಂಗಳಿನಲ್ಲಿ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ ನಡೆಯುವ ಸಾಧ್ಯತೆಯಿದ್ದು ಚುನಾವಣೆ ಕುರಿತಂತೆ ಪದವೀಧರರ ಅಭಿಪ್ರಾಯ ಸಂಗ್ರಹಿಸಲಾಯಿತು.
ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಸಾಹಿತಿ ಡಾ. ಜಯಪ್ಪ ಹೊನ್ನಾಳಿ, ಪದವೀಧರರ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ, ಆ ಸಮಸ್ಯೆಗಳನ್ನು ಪರಿಹರಿಸುವ ಸಮರ್ಥ ನಾಯಕನ ಅವಶ್ಯಕತೆ ಇದೆ. ಈ ಹಿಂದೆ ಕ್ಷೇತ್ರದಿಂದ ಆಯ್ಕೆಯಾದ ಅಭ್ಯರ್ಥಿಗಳು ಪದವೀಧರರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರೆ ಹೊರತು ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲಿಲ್ಲ. ಇಂದು ಪ್ರಾಮಾಣಿಕರನ್ನು ಬ್ಯಾಟರಿ ಹಾಕಿ ಹುಡುಕಬೇಕಾಗಿದೆ, ನಿಂಗರಾಜುರವರು ಪ್ರಾಮಾಣಿಕರಾಗಿದ್ದು ಪದವೀಧರರ ಸಮಸ್ಯೆಗಳನ್ನು ಬಗೆಹರಿಸುವವರೆಂಬ ವಿಶ್ವಾಸವಿದೆ. ಅವರು ಚುನಾವಣೆಗೆ ನಿಂತು ಗೆದ್ದರೆ ಅದು ಎಲ್ಲರ ಗೆಲುವಾಗಲಿದೆ. ಅವರ ಗೆಲುವು ನೊಂದು, ಬೆಂದು, ಹತಾಶರಾದ ಪದವೀಧರರ ಗೆಲುವಾಗಲಿದೆ ಆದ್ದರಿಂದ ಪದವೀಧರರ ಚುನಾವಣೆಯಲ್ಲಿ ಎಲ್ಲರೂ ಡಾ. ಈ.ಸಿ. ನಿಂಗರಾಜ್ ಗೌಡರನ್ನು ಬೆಂಬಲಿಸುವಂತೆ ಕರೆ ನೀಡಿದರು.

ಮೈಸೂರು ವಿವಿ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಡಾ. ವಸಂತ್ ಕುಮಾರ್ ತಿಮ್ಕಾಪುರ ಮಾತನಾಡಿ, ಪದವೀಧರರ ಕ್ಷೇತ್ರದ ಚುನಾವಣೆಗೆ ನಿಲ್ಲುವ ಮೊದಲು ಜನಾಭಿಪ್ರಾಯ ಪಡೆದು ಮುಂದಡಿ ಇಡುತ್ತಿರುವ ಅವರ ನಡೆ ಅವರಲ್ಲಿ ಎಂತಹ ಪ್ರಜಾಸತ್ತಾತ್ಮಕ ಚಿಂತನೆಗಳಿವೆ ಎಂಬುದನ್ನು ತೋರಿಸುತ್ತದೆ. ಇಂತಹ ಮನಸ್ಥಿತಿ ಉಳ್ಳವರು ಪದವೀಧರ ಕ್ಷೇತ್ರಕ್ಕೆ ಅವಶ್ಯಕತೆಯಿದೆ. ನಮಗೆ ನಾವೇ ಬಲ ತೆಗೆದುಕೊಳ್ಳಲು ಅವರನ್ನು ಬೆಂಬಲಿಸಬೇಕೆAದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ಡಾ. ಈ.ಸಿ.ನಿಂಗರಾಜ್ ಗೌಡ ಮಾತನಾಡಿ, ಕಳೆದ ೧೯೯೫ನೇ ಇಸವಿಯಿಂದ ದಕ್ಷಿಣ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ ಸಕ್ರೀಯವಾಗಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತಿದ್ದೇನೆ. ಮುಂದಿನ ದಿನಗಳಲ್ಲಿ ದಕ್ಷಿಣ ಪದವೀಧರ ಕ್ಷೇತ್ರದಿಂದ ನಾನೇ ಬಿಜೆಪಿ ಪಕ್ಷದಿಂದ ಅಭ್ಯರ್ಥಿಯನ್ನಾಗಿ ಪಕ್ಷದ ಹಿರಿಯರು ಆಯ್ಕೆ ಮಾಡುತ್ತಾರೆ ಎಂದು ಭಾವಿಸಿದ್ದೇನೆ. ಈಗ ನಾನು ಮೈಸೂರು ವಿವಿಯ ಸಿಂಡಿಕೇಟ್ ಸದಸ್ಯನಾಗಿ ಹತ್ತಾರು ಕೆಲಸ ಕಾರ್ಯಗಳನ್ನು ಮಾಡಿದ್ದು ಅದರಲ್ಲಿ ನಮ್ಮ ಹೆಮ್ಮೆಯ ಮೈಸೂರು ವಿವಿಯ ಘಟಿಕೋತ್ಸವದಲ್ಲಿ ಗೌನ್ ಅÀನ್ನು ಬದಲಾವಣೆ ಮಾಡುವಂತೆ ಹೇಳಿದ್ದು ಮೈಸೂರು ವಿವಿಯೂ ಇದಕ್ಕೆ ಒಪ್ಪಿಕೊಂಡಿದೆ. ಕೋವೀಡ್ ಸಂದರ್ಭದಲ್ಲಿ ದೇಶಾದ್ಯಾಂAತ ನೂರಾರು ವಿದ್ಯಾರ್ಥಿಗಳು ತಮ್ಮ ಪೋಷಕರನ್ನು ಕಳೆದುಕೊಂಡಿದ್ದು ಅಂತಹ ವಿದ್ಯಾರ್ಥಿಗಳಿಗೆ ಮೈಸೂರು ವಿವಿಯಲ್ಲಿ ಪದವಿ, ಸ್ನಾತಕೋತ್ತರ ಪದವಿಯಲ್ಲಿ ಉಚಿತ ವಿದ್ಯಾಭ್ಯಾಸವನ್ನು ನೀಡಲು ಅಂಗಿಕರಿಸದೆ ಮತ್ತು ಮಾನ್ಯ ಪ್ರಧಾನ ಮಂತ್ರಿಗಳ ಆದೇಶದಂತೆ ಹೊಸ ಶಿಕ್ಷಣ ನೀತಿಯನ್ನು ನಮ್ಮ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಮಾಡಲು ನಿಮ್ಮ ಸಹಕಾರ ಬೇಕು. ಈಗಾಗಲೇ ೪ ಜಿಲ್ಲೆಯಲ್ಲಿ ಅಭಿಪ್ರಾಯ ಸಂಗ್ರಹಣೆ ಮಾಡಿದ್ದೇನೆ. ಚಾಮರಾಜನಗರ, ಮೈಸೂರು, ಹಾಸನ ಹಾಗೂ ಮಂಡ್ಯ ಜಿಲ್ಲೆಯ ಪಧವೀದರರು ನನಗೆ ಬೆಂಬಲವನ್ನು ಸೂಚಿಸಿದ್ದಾರೆ. ಚುನಾವಣೆಗೆ ನಿಲ್ಲುವಂತೆ ಸ್ನೇಹಿತರು ಹಾಗೂ ಅಭಿಮಾನಿಗಳು ಒತ್ತಾಯ ಮಾಡಿದ್ದಾರೆ ಅದರಂತೆ ಇಂದು ಪೂರ್ವಭಾವಿ ಸಭೆಯನ್ನು ಹಮ್ಮಿಕೊಂಡಿದ್ದೇವೆ.
ಸಭೆಯಲ್ಲಿ ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಸಹಕಾರ ಸಂಘದ ವತಿಯಿಂದ ಡಾ. ಈ.ಸಿ. ನಿಂಗರಾಜ್ ಗೌಡರನ್ನು ಸನ್ಮಾನಿಸಲಾಯಿತು.

ಪ್ರಾಚ್ಯವಸ್ತು ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ. ಶಿವರಾಜಪ್ಪ, ಸಾಹಿತಿ ಡಾ. ಜಯಪ್ಪ ಹೊನ್ನಾಳಿ, ವಿಜ್ಞಾನಿ ಡಾ. ವಸಂತ್ ಕುಮಾರ್ ತಿಮ್ಕಾಪುರ, ಮೈಸೂರು ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಜಗದೀಶ್, ಮೈಸೂರು ವಿವಿ ವಿಶ್ವಮಾನವ ನೌಕರರ ಅಧ್ಯಕ್ಷ ವಾಸುದೇವ್, ಉಪನ್ಯಾಸಕರಾದ ನಂದೀಶ್, ಲೋಹಿತ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *