ನಂದಿನಿ ಮೈಸೂರು
ವರುಣಾ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾದ ವಿ ಸೋಮಣ್ಣನವರು ಇಂದು ಕಾರ್ಯ ಹಾಗೂ ಚಿನ್ನಂಬಳ್ಳಿ ಗ್ರಾಮಗಳಲ್ಲಿ ಮತಯಾಚನೆ ಮಾಡಿದರು ಈ ಸಂದರ್ಭದಲ್ಲಿ ಗ್ರಾಮದ ನೂರಾರು ಜನರು ಮೆರವಣಿಗೆಯ ಮೂಲಕ ಸಾಥ್ ನೀಡಿದರು .
ಈ ಸಂದರ್ಭದಲ್ಲಿ ಮಾತನಾಡಿದ ವಿ ಸೋಮಣ್ಣನವರು ಕಳೆದ 15 ವರ್ಷಗಳಿಂದ ಅಭಿವೃದ್ಧಿಯ ಮರೀಚಿಕೆಯಾಗಿರುವ ವರುಣಾ ಕ್ಷೇತ್ರದಲ್ಲಿ ಮುಂದಿನ ದಿನಮಾನಗಳಲ್ಲಿ ಅಂದರೆ ನಾನು ಗೆದ್ದ ಒಂದು ವರ್ಷದಲ್ಲೇ ವರುಅದ ಅಭಿವೃದ್ಧಿಗೆ ಮುನ್ನುಡಿಯನ್ನು ಬರೆಯುತ್ತೇನೆ ಕಾರ್ಯ ಗ್ರಾಮದಲ್ಲಿ ಆಗಿರುವಂತಹ ಒಂದಷ್ಟು ಅಭಿವೃದ್ಧಿ ಕಾರ್ಯಗಳು ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ಬಿ ಎಸ್ ಯಡಿಯೂರಪ್ಪ ನವರು ಹಾಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನೀಡಿರುವ ಅನುದಾನಗಳಿಂದ ಆಗಿದೀಯೆ ವಿನಹ ಸಿದ್ದರಾಮಯ್ಯ ಹಾಗೂ ಅವನ ಮಗನಿಂದ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ಆಗಿಲ್ಲ ನಾನು ಪ್ರವಾಸ ಮಾಡುವ ವೇಳೆಯಲ್ಲಿ ನೋಡುತ್ತಿರುವ ಅನೇಕ ಹಳ್ಳಿಗಳು ಹಿಂದುಳಿದಿರುವುದು ಕಂಡುಬರುತ್ತಿದೆ ಈ ಕ್ಷೇತ್ರದಲ್ಲಿ ಯಾವುದೇ ರೀತಿಯ ಕಾರ್ಖಾನೆಗಳಾಗಲಿ, ಸುಸಜ್ಜಿತ ಆಸ್ಪತ್ರೆಯಾಗಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಯಾಗಲಿ ಬಂದಿಲ್ಲ ಇದಕ್ಕೆಲ್ಲ ಕಾರಣ ಸಿದ್ದರಾಮಯ್ಯ ಹಾಗೂ ಸಿದ್ದರಾಮಯ್ಯನ ಮಗ ಯತೀಂದ್ರ ಸಿದ್ದರಾಮಯ್ಯನವರ ದುರಾಡಳಿತವೇ ಕಾರಣ
ನಾನು ಬೆಂಗಳೂರಿನಲ್ಲಿ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರವನ್ನು ಮಾದರಿ ಅಭಿವೃದ್ಧಿ ಕ್ಷೇತ್ರವನ್ನಾಗಿ ಮಾಡಿದ್ದೇನೆ ತಾವು ತಮ್ಮ ಒಂದು ಮತವನ್ನು ನೀಡುವ ಮುಖಾಂತರ ನನಗೆ ಆಶೀರ್ವದಿಸಿದರೆ ಗೋವಿಂದರಾಜ ನಗರದ ರೀತಿಯಲ್ಲಿ ವರುಣಾ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯನ್ನುಮಾಡುವುದರ ಜೊತೆಗೆ ವರುಣಾ ತಾಲೂಕು ಕೇಂದ್ರದ ಘೋಷಣೆಯನ್ನು ಮಾಡುತ್ತೇನೆ ಎಂದು ತಿಳಿಸಿ ಮತಯಾಚಿಸಿದರು .
ಈ ಸಂದರ್ಭದಲ್ಲಿ ವರುಣಾ ಮಂಡಲದ ಅಧ್ಯಕ್ಷರಾದ ವಿಜಯ್ ಕುಮಾರ್ , ಕಾಪು ಸಿದ್ದಲಿಂಗ ಸ್ವಾಮಿ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸಿದ್ದ ವೀರಪ್ಪ, ಎಸ್ ಸಿ ಮೋರ್ಚದ ಜಿಲ್ಲಾಧ್ಯಕ್ಷರಾದ ಮಾದೇವಯ್ಯ ಪ್ರಧಾನ ಕಾರ್ಯದರ್ಶಿಗಳಾದ ಮಂಜು ಹಾಗೂ ರಂಗು ನಾಯಕ್ ಉಪಸ್ಥಿತರಿದರು.