ತೂತುಮಡಕೆಯಲ್ಲಿ ಏನಿದೆ ಗೊತ್ತಾ? ಜುಲೈ 8ಕ್ಕೆ ತೆರೆಗೆ

ಮೈಸೂರು:6 ಜುಲೈ 2022

ನಂದಿನಿ ಮೈಸೂರು

ಆಸೆಯೇ ದುಃಖಕ್ಕೆ ಮೂಲ.ಆಸೆ ಯೆಂಬುದು ಒಂದು ತೂತು ಮಡಕೆ ಅದರ ಹಿಂದೆ ಹೋದವರು ಏನಾಗುತ್ತಾರೆ ಎಂಬ ಹಾಸ್ಯ ಮಿಶ್ರಿತ ಕುತೂಹಲಕಾರಿ ಕಥೆ ತೂತು ಮಡಕೆ.

ಒಂದಷ್ಟು ಹೊಸಬರು ಸೇರಿಕೊಂಡು ತಯಾರಿಸಿರುವ ತುತೂಮಡಿಕೆ ಸಿನಿಮಾ ಬಿಡುಗಡೆ ಹೊಸ್ತಿನಲ್ಲಿ ನಿಂತಿದೆ. ಇದೇ ಜುಲೈ8ಕ್ಕೆ ಚಿತ್ರ ತೆರೆಗೆ ಬರ್ತಿದೆ. ಈಗಾಗ್ಲೇ ಚಿತ್ರತಂಡ ಜಿಲ್ಲೆ ಜಿಲ್ಲೆ ಸುತ್ತಿ ಪ್ರಮೋಷನ್ ಕಹಳೆ ಮೊಳಗಿಸಿದೆ. ಪೋಸ್ಟರ್, ಟ್ರೇಲರ್ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿರುವ ತುತೂಮಡಿಕೆ ಸಿನಿಮಾ ಮೂಲಕ ರಂಗಭೂಮಿ ಕಲಾವಿದ ಚಂದ್ರಕೀರ್ತಿ ಸ್ವತಂತ್ರ ನಿರ್ದೇಶಕರಾಗುವುದರ ಜೊತೆಗೆ ನಾಯಕನಾಗಿ ಪ್ರೇಕ್ಷಕರ ಮುಂದೆ ಹಾಜರಾಗಲಿದ್ದಾರೆ.

ತೂತುಮಡಿಕೆ ಕಾಮಿಡಿ ಥ್ರಿಲ್ಲರ್ ಸಬ್ಜೆಕ್ಟ್ ಸಿನಿಮಾವಾಗಿದ್ದು, ಕಥೆ ಮತ್ತು ಚಿತ್ರಕಥೆಯನ್ನು ಚಂದ್ರ ಕೀರ್ತಿ, ಎ ಎಸ್ ಜಿ ಮತ್ತು ಡಾಲರ್ ಬರೆದಿದ್ದು, ಚಂದ್ರಕೀರ್ತಿಗೆ ಜೋಡಿಯಾಗಿ ಗೊಂಬೆಗಳ ಲವ್ ಖ್ಯಾತಿಯ ಪಾವನಾ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಪ್ರಮೋದ್ ಶೆಟ್ಟಿ, ಉಗ್ರಂ ಮಂಜು, ಗಿರೀಶ್ ಶಿವಣ್ಣ, ಶಂಕರ್ ಅಶ್ವತ್ಥ್, ಸಿತಾರಾ ನರೇಶ್ ಭಟ್ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಇನ್ನು ಸರ್ವತ ಸಿನಿ ಗ್ಯಾರೇಜ್ ಮತ್ತು ಸ್ಪ್ರೆಡಾನ್ ಸ್ಟುಡಿಯೋ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಮಧುಸೂದನ್ ಮತ್ತು ಗಿರಿಬಸವ ಪ್ರೊಡಕ್ಷನ್ಸ್ ಬಂಡವಾಳ ಹೂಡಿದ್ಧಾರೆ. ನವೀನ್ ಚಲ್ಲ ಛಾಯಾಗ್ರಾಹಣ, ಉಜ್ವಲ್ ಚಂದ್ರ ಸಂಕಲನ ಸಿನಿಮಾಕ್ಕಿದೆ.

ನಿರ್ದೇಶಕ ಕಂ ನಾಯಕ ಚಂದ್ರಕೀರ್ತಿ ಮಾತನಾಡಿ ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಎರಡೂವರೆ ವರ್ಷದಿಂದ ಕಾದು ಚಿತ್ರ ರಿಲೀಸ್ ಮಾಡ್ತಿದೆ. ಜನ ಥಿಯೇಟರ್ ನಲ್ಲಿ ಕುಳಿತು ಸಿನಿಮಾ ನೋಡ್ಬೇಕು ಅನ್ನೋದು ನಮ್ಮ ಇಡೀ ಚಿತ್ರತಂಡದ ಕನಸು. ಜುಲೈ 8ಕ್ಕೆ ಥಿಯೇಟರ್ ನಲ್ಲಿ ಸಿನಿಮಾ ನೋಡಿ ಎಂದು ಎಲ್ಲರ ಪರವಾಗಿ ಕೇಳಿಕೊಳ್ಳುತ್ತೇನೆ. ಪ್ರತಿ ಜಿಲ್ಲೆಯಲ್ಲಿಗೂ ಹೋಗಿ ಪ್ರಮೋಷನ್ ಮಾಡಿದ್ದೇವೆ. ಗ್ರಾಮೀಣ ಭಾಗದಲ್ಲಿಯೂ ಇಷ್ಟವಾಗುವ ಸಬೆಕ್ಟ್ ನಮ್ಮದು. ಇದು ಯಾವುದೇ ಸಿನಿಮಾದ ಸ್ಫೂರ್ತಿಯಲ್ಲ ಎಂದರು.

ನಿರ್ಮಾಪಕರಾದ ಶಿವಕುಮಾರ್‌ ಮಾತನಾಡಿ, ತುಂಬಾ ಎಕ್ಸೈಟ್ ಆಗಿದ್ದೇವೆ. ಇದೇ 8ರಂದು ಸಿನಿಮಾ ತೆರೆಗೆ ಬರ್ತಿದೆ. 80 ಥಿಯೇಟರ್ ನಲ್ಲಿ ರಿಲೀಸ್ ಮಾಡುವ ಪ್ಲ್ಯಾನ್ ಇದೆ. ಈಗಾಗ್ಲೇ ಒಟಿಟಿ ಸಿನಿಮಾ ಮಾರಾಟವಾಗಿದೆ. ಇದು ಸಿನಿಮಾದ ಕ್ವಾಲಿಟಿ ಮತ್ತು ಕಂಟೆಂಟ್ ಎರಡನ್ನು ತೋರಿಸುತ್ತದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *