ಆಸ್ತಿ ವಿಚಾರ ಆತ್ಮಹತ್ಯೆ ಮಾಡಿಕೊಳ್ಳಲೆಂದು ಮನೆಬಿಟ್ಟೋದವನನ್ನ ಮನಯೊಲಿಸಿದ 112 ಹೊಯ್ಸಳ ಪೋಲಿಸರು

ಎಚ್.ಡಿ.ಕೋಟೆ:5 ಜುಲೈ 2022

ನಂದಿನಿ ಮೈಸೂರು

HD ಕೋಟೆ ಠಾಣೆ ವ್ಯಾಪ್ತಿಯ ಚಾಮನಹಳ್ಳಿ ಹುಂಡಿ ಎಂಬ ಗ್ರಾಮದಿಂದ ಶಂಕರ್ ಎಂಬ ವ್ಯಕ್ತಿ 112ಗೆ ಕರೆ ಮಾಡಿ ನಮ್ಮ ಅಣ್ಣ ಮತ್ತು ಅಪ್ಪನ ನಡುವೆ ಆಸ್ತಿ ವಿಚಾರವಾಗಿ ಗಲಾಟೆಗಳು ಆಗಿದ್ದು,ಇದರಿಂದ ಮನನೊಂದು ನಮ್ಮ ತಂದೆಯಾದ ಸಿದ್ದಾಚಾರ್ ಎಂಬುವವರು ಆತ್ಮಹತ್ಯಾ ಮಾಡಿಕೊಳ್ಳಲು ಮನೆ ಬಿಟ್ಟು ಹೋಗಿದ್ದಾರೆ ಎಂದು ಹೇಳಿದ್ದು,ತಕ್ಷಣ ಸ್ಥಳಕ್ಕೆ ಭೇಟಿ ಮಾಡಿ ದೂರುದಾರ ಆದ ಶಂಕರ್ ಎಂಬುವವರನ್ನು ನಮ್ಮ 112 ವಾಹನದಲ್ಲಿ ಕೂರಿಸಿಕೊಂಡು ಸುಮಾರು 45 ನಿಮಿಷ ಅಕ್ಕ ಪಕ್ಕದ್ ಊರಿನ ಕಡೆ ನೋಡಲಾಗಿ ಅಲ್ಲಿನ ಸ್ಥಳೀಯರನ್ನು ವಿಚಾರಣೆ ಮಾಡಲಾಗಿ, ಅಲ್ಲಿನ ವ್ಯಕ್ತಿಯೊಬ್ಬರು ಗದ್ದಿಗೆ – ಅನ್ನೂರು ರಸ್ತೆಯ ಮದ್ಯ ಇರುವ ಕಾಲುವೆ ಬಳಿ ಯಾರೋ ಒಬ್ಬ ವ್ಯಕ್ತಿ tvs ಬೈಕ್ ನಲ್ಲಿ ನಿಂತಿದ್ದರು ಎಂದು ಹೇಳಿದ್ದು ತಕ್ಷಣ ಅಲ್ಲಿಗೆ ಹೋಗಿ ನೋಡಲಾಗಿ ಸಿದ್ದಚಾರ್ ರವರು ಅಳುತ್ತಾ ನಿಂತಿದ್ದು,ನಂತರ ಅವರಿಗೆ ಸಮಾಧಾನ ಮಾಡಿ,ಬುದ್ದಿ ಹೇಳಿ ಅವರ ಊರಾದ ಚಾಮನಹಲ್ಲಿ ಹುಂಡಿಗೆ ಕರೆದು ಕೊಂಡು ಬಂದು ಅವರ ಕುಟುಂಬದವರಿಗೆ ಒಪ್ಪಿಸಿದ್ದಾರೆ.

ಕ್ರಮಿಸಿದ ದೂರ15km
ತೆಗೆದು ಕೊಂಡ ಸಮಯ20 ನಿಮಿಷ
HD ಕೊಟ್ ಹೊಯ್ಸಳ ಹೆಡ್ ಕಾನ್ಸ್ಟೇಬಲ್ ಸಾ.ನಾ.ಗೋವಿಂದರಾಜ್ ಮತ್ತು ರವಿ ಕಾನ್ಸ್ಟೇಬಲ್.

Leave a Reply

Your email address will not be published. Required fields are marked *