ಮೈಸೂರು:6 ಜುಲೈ 2022
ನಂದಿನಿ ಮೈಸೂರು
*ರಾಜ್ಯಾದ್ಯಂತ ಹೆಚ್ಚಿದ ಮಳೆ, ತುರ್ತುಪರಿಸ್ಥಿತಿ ಬಂದಲ್ಲಿ ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ
ಅಧಿಕಾರ : ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ**ಬೆಂಗಳೂರಿನ ರಾಜಕಾಲುವೆ ಸ್ವಚ್ಛತೆಗೆ 1600 ಬಿಡುಗಡೆ : ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ*
*ಕಡಲ ಕೋರೆತ ಶಾಶ್ವತ ಪರಿಹಾರಕ್ಕೆ ಸರ್ಕಾರ ಹೊಸ ತಂತ್ರಜ್ಞಾನಕ್ಕೆ ಚಿಂತನೆ : ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ*
ಇಂದು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಮೈಸೂರು ಜಿಲ್ಲೆಗೆ ಪ್ರವಾಸ ಕೈಗೊಂಡಿದ್ದು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯಾದ್ಯಂತ ಮಳೆ ಹೆಚ್ಚಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಜಿಲ್ಲಾಧಿಕಾರಿಗಳ ಜೊತೆ ಸಂಪರ್ಕ ಹೊಂದಲಾಗಿದೆ ಕಳೆದ ಬಾರಿ ಹಾನಿಗೊಳಗಾದ ಪ್ರದೇಶಗಳನ್ನು ಗುರುತಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ ಉತ್ತಮ ಕನ್ನಡ, ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳಲ್ಲಿ ಹೆಚ್ಚು ಮಳೆ ಹಾಗೂ ಕಡಲ ಕೊರೆತ ಆಗುತ್ತಿದೆ ಹೀಗಾಗಿ ಜಿಲ್ಲಾಧಿಕಾರಿಗಳು ಎರಡು ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಒಂದು ತುರ್ತು ಕ್ರಮ ಹಾಗೂ ಮನೆ ಹಾನಿಗೊಳಗಾದವರಿಗೆ ಕೂಡಲೇ ಪರಿಹಾರ ನೀಡಬೇಕು.
ಕಡಲ ಕೋರೆತ ಶಾಶ್ವತ ಪರಿಹಾರ ಕ್ಕೆ ಸರ್ಕಾರ ಹೊಸ ಟೆಕ್ನಾಲಜಿ ಅಳವಡಿಸಲು ಮುಂದಾಗಿದೆ ಮಳೆ ಸಂದರ್ಭದಲ್ಲಿ ಎನ್ ಡಿ ಆರ್ ಎಫ್ , ಎಸ್ ಡಿ ಆರ್ ಎಫ್ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ ಮೈಸೂರಿನ ಎನ್ ಡಿ ಆರ್ ಎಫ್ ನ ಕೊಡಗಿಗೆ ಮಿಸಲಿಡಲಾಗಿದೆ ಮಂಗಳೂರಿನ ಎನ್ ಡಿ ಆರ್ ಎಫ್ ಮಂಗಳೂರಿಗೆ ಹಾಗೂ ಎಸ್ ಡಿ ಆರ್ ಎಫ್ ನ್ನು ಉಡಪಿ ಮತ್ತು ಕಾರವಾರ ಜಿಲ್ಲೆಗೆ ನಿಯೋಜಿಸಲು ಸೂಚಿಸಲಾಗಿದೆ ಎಲ್ಲ ಜಿಲ್ಲಾಡಳಿತದಲ್ಲಿ 10 ಕೋಟಿ ಹಣಕ್ಕೂ ಹೆಚ್ಚು ಹಣ ಮಿಸಲಿಡಲಾಗಿದೆ ತುರ್ತು ಪರಿಸ್ಥಿತಿ ಬಂದಲ್ಲಿ ಉಪಯೋಗಿಸಿ ಕೊಳ್ಳಬಹುದು.
ಬೆಂಗಳೂರಿನಲ್ಲಿ ಕೆಳಮಟ್ಟದ ಜಮೀನು ಹಾಗೂ ಕೆರೆಗಳಲ್ಲಿ ಮನೆ ಕಟ್ಟಿರುವುದರಿಂದ ಮಳೆ ಸಂದರ್ಭದಲ್ಲಿ ನೀರು ಬರುತ್ತಿದೆ ಪ್ರಮುಖವಾಗಿ ರಾಜ ಕಲುವೆಗಳನ್ನು ಮೊದಲು ಸ್ವಚ್ಛಗೊಳಿಸಲು 1600 ಕೋಟೆ ಬಿಡುಗಡೆ ಮಾಡಲಾಗಿದೆ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಪದೇ ಪದೇ ಪ್ರವಾಹಕ್ಕೆ ಸಿಲುಕುತ್ತಿರುವ ಜನರು ಸರ್ವೇ ಮೂಲಕ ಸಮೀಕ್ಷೆ ಮಾಡಿ ಅವರಿಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದೆ
ಶಾಲಾ ಮಕ್ಕಳಿಗೆ ಬೈಸಿಕಲ್ ಹಾಗೂ ಶೋ ಮತ್ತು ಸಾಕ್ಸ್ ಗಳನ್ನು ಈ ವರ್ಷದಿಂದಲೇ ನೀಡಲಾಗುವುದು ಶಿಕ್ಷಣ ಸಚಿವರು ಇದರ ಬಗ್ಗೆ ನಿಗಾ ವಹಿಸಿದರೆ ಈ ವರ್ಷದಿಂದಲೇ ಜಾರಿಗೊಳಿಸಲಾಗುವುದು
*ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಎಡಿಜಿಪಿ ಬಂಧನ ವಿಚಾರ.*
ಸದನಕ್ಕೆ ತಪ್ಪು ಮಾಹಿತಿ ನೀಡಿದ್ದ ಸಿಎಂ ಹೇಗೆ ಅಧಿಕಾರದಲ್ಲಿ ಮುಂದುವರೆಯುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ಹಿನ್ನೆಲೆ.
ಸಿದ್ದರಾಮಯ್ಯಗೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು.
ಸಿದ್ದರಾಮಯ್ಯ ನೋಡಿದ್ರೆ ನನಗೆ ತುಂಬಾ ಕನಿಕರ ಬರುತ್ತೆ. ದಕ್ಷ ಆಡಳಿತಗಾರ ಎನ್ನುವ ಸಿದ್ದರಾಮಯ್ಯನವ್ರು ಹಿಂದೆ ಡಿಜಿಪಿಯೊಬ್ಬರ ಕೇಸನ್ನ ಮುಚ್ಚಿ ಹಾಕಿಲ್ವ.
18 ಕೋಟಿ ಅವ್ಯವಹಾರ ನಡೆಸಿದ್ದಾರೆ ಎಂದು ಎಫ್‌ಐಆರ್ ದಾಖಲಾಗಿತ್ತು.
ಆದರೂ ಆ ಅಧಿಕಾರಿಯನ್ನ ಬಂಧಿಸಿದ್ರಾ..?. ಆದರೆ ನಮ್ಮ ಸರ್ಕಾರ ಭ್ರಷ್ಟಾಚಾರ ಕಂಡು ಬಂದ ಕೂಡಲೇ ಎಡಿಜಿಪಿಯನ್ನ ಬಂಧಿಸಿದ್ದೇವೆ.
ಹಿಂದೆ ಭ್ರಷ್ಟಾಚಾರ ಮುಚ್ಚಿಹಾಕುವ ಸರ್ಕಾರ ಇತ್ತು. ಈಗ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಸರ್ಕಾರ ಇದೆ ಎಂದರು.